ಮದುವೆಗೆ ಮೊದಲು ದೇವಾಲಯಗಳಿಗೆ ಕೋಟಿ ಕೋಟಿ ದಾನ – 2 ದೇವಾಲಯಗಳಿಗೆ 5ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ

ಮದುವೆಗೆ ಮೊದಲು ದೇವಾಲಯಗಳಿಗೆ ಕೋಟಿ ಕೋಟಿ ದಾನ – 2 ದೇವಾಲಯಗಳಿಗೆ 5ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ದೈವಭಕ್ತರೂ ಹೌದು. ಇದೀಗ ಅನಂತ್ ಅಂಬಾನಿ ಭಾರತದ ಪ್ರಮುಖ ಎರಡು ದೇವಾಲಯಗಳಿಗೆ ಭೇಟಿ ನೀಡಿದ್ದು, ಒಂದೊಂದು ದೇವಸ್ಥಾನಕ್ಕೂ ತಲಾ 2,51,00,000 ರೂ. ಅಂದರೆ ಒಟ್ಟು 5 ಕೋಟಿ ರೂ ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕಳಿಸಿಬಿಡಿ ಎಂದ ಫ್ಯಾನ್ಸ್ – ನೆಚ್ಚಿನ ಆಟಗಾರನ ನೋವು ನೋಡಿ ಅಭಿಮಾನಿಗಳು ಭಾವುಕ

ಹಿಂದೂ ಧರ್ಮ ಹಾಗೂ ದೇವಾಲಯದ ಬಗ್ಗೆ ಅಪಾರ ಗೌರವ ಹೊಂದಿರುವ ಅಂಬಾನಿ ಕುಟುಂಬ ಆಗಾಗ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ವರ್ಷ, ಅಂಬಾನಿ ಕುಟುಂಬವು ಗುಜರಾತ್‌ನ ಜಾಮ್‌ನಗರದಲ್ಲಿ 14 ಹೊಸ ದೇವಾಲಯಗಳನ್ನು ನಿರ್ಮಿಸಲು ಅನುಕೂಲ ಮಾಡಿಕೊಟ್ಟಿದೆ. ಜುಲೈನಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭ ನಡೆಯಲಿದೆ. ಇದಕ್ಕೂ ಮುನ್ನ ಅನಂತ್‌ ಅಂಬಾನಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಮದುವೆಗೂ ಮುನ್ನ ಹಲವು ದೇವಸ್ಥಾನಳಿಗೆ ಭೇಟಿ ನೀಡುತ್ತಿರುವ ಅನಂತ್‌ ಅಂಬಾನಿ ಇತ್ತೀಚೆಗೆ ಒಡಿಶಾದ ಪುರಿ ಜಗನ್ನಾತ ದೇವಸ್ಥಾನ ಹಾಗೂ ಅಸ್ಸಾಂನ ಮಾ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಎರಡೂ ದೇವಸ್ಥಾನಗಳಿಗೆ ದೊಡ್ಡ ಪ್ರಮಾಣದ ದಾನವನ್ನು ಮಾಡಿದ್ದಾರೆ. ಈ ದೇವಾಲಯವನ್ನು ಭಾರತದ ಅತ್ಯುನ್ನತ ಮತ್ತು ಅತ್ಯಂತ ಪ್ರಸಿದ್ಧವಾದ ಶಕ್ತಿ ಪೀಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಚೈತ್ರ ನವರಾತ್ರಿಯ ಅಷ್ಟಮಿಯ ದಿನವಾದ ಮಂಗಳವಾರ ಈ ಎರಡೂ ದೇವಸ್ಥಾನಕ್ಕೆ ಭೇಟಿ ನೀಡಿದ ರಿಲಯನ್ಸ್‌ ವೆಂಚರ್ಸ್‌ ಲಿಮಿಟೆಡ್‌ನ ನಿರ್ದೇಶಕ ಅನಂತ್‌ ಅಂಬಾನಿ ಎರಡೂ ದೇವಸ್ಥಾನಗಳಿಗೆ ತಲಾ 2.51 ಕೋಟಿ ರೂಪಾಯಿಯ ದಾನ ಮಾಡಿದ್ದಾರೆ. ಮೊದಲಿಗೆ ಅಸ್ಸಾಂನ ಗುವಾಹಟಿಗೆ ಭೇಟಿ ನೀಡಿದ ಅನಂತ್‌ ಅಂಬಾನಿ, ಏರ್‌ಪೋರ್ಟ್‌ನಿಂದ ನೇರವಾಗಿ ದೇವಸ್ಥಾನಕ್ಕೆ ತಲುಪಿದರು. ಕಾಮಾಕ್ಯವು ದೇಶದ ಅತ್ಯುನ್ನತ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ದೇವಾಲಯದ ಪರಿಕ್ರಮ ಮಾಡಿದ ಅನಂತ್‌ ಅಂಬಾನಿ,  ದೇವಾಲಯದ ಆವರಣದಲ್ಲಿ ಪಾರಿವಾಳಗಳನ್ನು ಬಿಡುಗಡೆ ಮಾಡಿದರು. ನೀಲಾಚಲ ಬೆಟ್ಟದಲ್ಲಿರುವ ಮಾ ಬಗಲಮುಖಿ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದರು. ಫೆಬ್ರವರಿಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳ ಭಾಗವಾಗಿ, ಅಂಬಾನಿ ಕುಟುಂಬವು ಗುಜರಾತ್‌ನ ಜಾಮ್‌ನಗರದಲ್ಲಿರುವ ವಿಸ್ತಾರವಾದ ದೇವಾಲಯದ ಸಂಕೀರ್ಣದಲ್ಲಿ 14 ಹೊಸ ದೇವಾಲಯಗಳನ್ನು ನಿರ್ಮಾಣ ಮಾಡಿದೆ.

Sulekha