ಕೇರಳದ ದೇವಸ್ಥಾನಗಳಿಗೆ ಅನಂತ್ ಅಂಬಾನಿ 18 ಕೋಟಿ ದೇಣಿಗೆ – ಆನೆ ಆರೈಕೆ ಯೋಜನೆಗೂ ಸಹಾಯ

ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೇರಳದ ಎರಡು ಪ್ರಮುಖ ಧಾರ್ಮಿಕ ತಾಣಗಳಾದ ರಾಜರಾಜೇಶ್ವರಂ ದೇವಾಲಯ ಮತ್ತು ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಾಲಯ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಘೋಷಿಸಿದರು. ಎರಡೂ ದೇವಾಲಯಗಳಿಗೆ ಒಟ್ಟು ₹6 ಕೋಟಿ ದೇಣಿಗೆ ನೀಡಿದರು ಮತ್ತು ರಾಜರಾಜೇಶ್ವರಂ ದೇವಾಲಯದ ಸಮಗ್ರ ಪುನಃಸ್ಥಾಪನೆಗಾಗಿ ₹12 ಕೋಟಿ ದೇಣಿಗೆ ನೀಡಿದ್ದಾರೆ.
ಇದನ್ನೂ ಓದಿ: ಬುಮ್ರಾಗೂ ಬೆವರಿಳಿಸಿದ ಸೂರ್ಯವಂಶಿ – ಯಂಗ್ ಸ್ಟರ್ಸ್ ಅಬ್ಬರಕ್ಕೆ MI ಪಲ್ಟಿ
ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಪಟ್ಟಣದಲ್ಲಿ ಇರುವ ಪ್ರಾಚೀನ ರಾಜರಾಜೇಶ್ವರಂ ದೇವಾಲಯಕ್ಕೆ ಅನಂತ್ ಅಂಬಾನಿ ₹3 ಕೋಟಿ ದೇಣಿಗೆ ನೀಡಿದ್ದಾರೆ. ದೇವಾಲಯದ ಸಮಗ್ರ ನವೀಕರಣಕ್ಕಾಗಿ ಅವರು ಹೆಚ್ಚುವರಿಯಾಗಿ ₹12 ಕೋಟಿ ದೇಣಿಗೆ ನೀಡಲಿದ್ದಾರೆ. ಈ ಯೋಜನೆಯಲ್ಲಿ ಬಹಳ ದಿನಗಳಿಂದ ಶಿಥಿಲಾವಸ್ಥೆಯಲ್ಲಿ ಇದ್ದ ದೇವಾಲಯದ ಐತಿಹಾಸಿಕ ಪೂರ್ವ ಗೋಪುರದ ಪುನರ್ನಿರ್ಮಾಣ ಮತ್ತು ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಮತ್ತು ಪಾರ್ಕಿಂಗ್ ಸೌಲಭ್ಯಗಳ ಸುಧಾರಣೆ ಸೇರಿವೆ.
ಆ ನಂತರ, ಅನಂತ್ ಅಂಬಾನಿ ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯದ ಟ್ರಸ್ಟ್ಗೆ ₹3 ಕೋಟಿ ದೇಣಿಗೆ ನೀಡಿದರು. ದೇವಾಲಯ ಸಂಪ್ರದಾಯಗಳಿಗೆ ಸಂಬಂಧಿಸಿದ ಆನೆಗಳ ಕಲ್ಯಾಣಕ್ಕಾಗಿ ಆಸ್ಪತ್ರೆಗಳು, ಸರಪಳಿ ಇಲ್ಲದ ಆಶ್ರಯಗಳು ಮತ್ತು ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಉಪಕ್ರಮಗಳಿಗೆ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ರಾಜರಾಜೇಶ್ವರಂ ದೇವಸ್ಥಾನ ಮತ್ತು ಗುರುವಾಯೂರು ದೇವಸ್ಥಾನಕ್ಕೆ ತಲಾ 3 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಹಾಗೇ, ರಾಜರಾಜೇಶ್ವರಂ ದೇವಾಲಯದ ನವೀಕರಣಕ್ಕಾಗಿ ನಾನು ನಿರ್ದಿಷ್ಟವಾಗಿ 12 ಕೋಟಿ ರೂ.ಗಳನ್ನು ದೇಣಿಗೆ ನೀಡುತ್ತೇನೆ ಎಂದಿದ್ದಾರೆ.
ಆನೆ ಆರೈಕೆ ಯೋಜನೆಗೆ ಸಾಥ್
ಸಾಂಪ್ರದಾಯಿಕ ಪದ್ಧತಿಗಳನ್ನು ಕಾಪಾಡಿಕೊಳ್ಳುವಾಗ ಪ್ರಾಣಿಗಳಿಗೆ ಮಾನವೀಯ ಮತ್ತು ವೈಜ್ಞಾನಿಕ ಆರೈಕೆಯನ್ನು ದೊರಕಿಸಲು ಮೀಸಲಾದ ಆಸ್ಪತ್ರೆಗಳು, ಸರಪಳಿ ಇಲ್ಲದಂಥ ಆಶ್ರಯಗಳು ಮತ್ತು ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಈ ಉಪಕ್ರಮಗಳಲ್ಲಿ ಸೇರಿವೆ. ಈ ಉಪಕ್ರಮವು ಅನಂತ್ ಅಂಬಾನಿ ಅವರ ವನ್ಯಜೀವಿ ಸಂರಕ್ಷಣಾ ಯೋಜನೆಯಾದ ‘ವಂತಾರ’ಕ್ಕೆ ಸಂಬಂಧಿಸಿದ ಪ್ರಯತ್ನಗಳ ಭಾಗವೆಂದು ಪರಿಗಣಿಸಲಾಗಿದೆ

ನೋಡಿರಿ

