ಸೊಸೈಟಿಗೆ ನುಗ್ಗಿ ಅಕ್ಕಿ ತಿಂದ ‘ಕಾಡಿನ ಕಳ್ಳ’! – ಸಿಸಿಟಿವಿ ದೃಶ್ಯ ನೋಡಿ ಅಧಿಕಾರಿಗಳೇ ಶಾಕ್!

ಸೊಸೈಟಿಗೆ ನುಗ್ಗಿ ಅಕ್ಕಿ ತಿಂದ ‘ಕಾಡಿನ ಕಳ್ಳ’! – ಸಿಸಿಟಿವಿ ದೃಶ್ಯ ನೋಡಿ ಅಧಿಕಾರಿಗಳೇ ಶಾಕ್!

ಹಾಸನ: ಕೆಲ ಸೊಸೈಟಿಗಳಲ್ಲಿ ರೇಷನ್ ಅಕ್ಕಿಯನ್ನು ಅಲ್ಲಿನ ಸಿಬ್ಬಂದಿಯೇ ಅಕ್ರಮವಾಗಿ ಮಾರಾಟ ಮಾಡುವುದನ್ನು ಕೇಳಿದ್ದೇವೆ. ಇನ್ನೂ ಕೆಲವು ಸೊಸೈಟಿಗಳಲ್ಲಿ ಕೆಲ ಖದೀಮರು ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡುತ್ತಾರೆ. ಇದೀಗ ಹಾಸನದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಸಾರ್ವಜನಿಕರಿಗೆ ವಿತರಿಸಲು ತಂದಿದ್ದ ಅಕ್ಕಿ ರಾತ್ರೋ ರಾತ್ರಿ ಮಾಯವಾಗಿದೆ. ಅಕ್ಕಿ ಮಾಯವಾಗಿದ್ದು ಹೇಗೆ? ಕಳ್ಳ ಯಾರೆಂದು ಪತ್ತೆ ಹಚ್ಚಲು ಸಿಸಿಟಿವಿ ಪರಿಶೀಲಿಸಿದ್ದು, ಕಳ್ಳ ಯಾರೆಂದು ನೋಡಿ ಒಮ್ಮೆ ಹೌಹಾರಿದ್ದಾರೆ.

ಇದನ್ನೂ ಓದಿ: ರೈಲ್ವೇ ಅಧಿಕಾರಿ ಮಗಳ ಶೂ ಮಿಸ್ಸಿಂಗ್ – ಒಂದು ತಿಂಗಳು ‘ಶೂ’ ತನಿಖೆಗಾಗಿ ಶ್ರಮಿಸಿದ ಪೊಲೀಸ್

ಹಾಸನದ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸೊಸೈಟಿಯಲ್ಲಿ ರಾತ್ರೋರಾತ್ರಿ ರೇಷನ್ ಅಕ್ಕಿ ಮಾಯವಾಗಿತ್ತು. ಇದನ್ನು ಕಂಡ ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಬಳಿಕ ಕಳ್ಳ ಯಾರು ಅನ್ನೋದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಸೊಸೈಟಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಪರೀಕ್ಷಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿರೋ ಕಳ್ಳನನ್ನು ಕಂಡು ಅಧಿಕಾರಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ರಾತ್ರೋ ರಾತ್ರಿ ಅಕ್ಕಿ ನಾಪತ್ತೆ ಮಾಡಿರೋದು ನಾಡಿನ ಕಳ್ಳನಲ್ಲ. ಬದಲಾಗಿ ಕಾಡಿನ ಕಳ್ಳ!

ನಿನ್ನೆಯಷ್ಟೇ ಸೊಸೈಟಿಗೆ ಅಕ್ಕಿ ಲೋಡ್ ಬಂದಿತ್ತು. ಅಲ್ಲಿನ ಸಿಬ್ಬಂದಿ ಅಕ್ಕಿಯನ್ನು ನೀಟಾಗಿ ಜೋಡಿಸಿ ಕಬ್ಬಿಣದ ರೋಲಿಂಗ್ ಶೆಲ್ಟರ್ ಹಾಕಿ ಭದ್ರವಾಗಿ ಮುಚ್ಚಿದ್ದರು. ಮುಂಜಾನೆ 4.15 ರ ಸಮಯದಲ್ಲಿ ಕಾಡಾನೆನೊಂದು  ಸೊಸೈಟಿ ಆವರಣಕ್ಕೆ ಬಂದಿದೆ. ಬಳಿಕ ಅಲ್ಲಿ ಇಲ್ಲಿ ಸುತ್ತಾಡಿ  ಕಡೆಗೆ ಸೊಸೈಟಿಯ ಬಾಗಿಲನ್ನು ಒಡೆದು 13 ಚೀಲ‌ ಅಕ್ಕಿಯನ್ನು ಎಳೆದಾಡಿ ತಿಂದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

suddiyaana