ದೀಪಾವಳಿ ಹಬ್ಬಕ್ಕೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ – ದೇಶದೆಲ್ಲೆಡೆ ಪಟಾಕಿ ನಿಷೇಧ!

ದೀಪಾವಳಿ ಹಬ್ಬಕ್ಕೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ – ದೇಶದೆಲ್ಲೆಡೆ ಪಟಾಕಿ ನಿಷೇಧ!

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಜನರು ಈಗಾಗಲೇ ಹಬ್ಬದ ತಯಾರಿಯಲ್ಲಿದ್ದಾರೆ. ಈ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಆದೇಶವೊಂದನ್ನು ನೀಡಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವಂತಿಲ್ಲ ಅಂತಾ ಹೇಳಿದೆ.

ಹೌದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ತೀರಾಕೆಳಮಟ್ಟಕ್ಕೆ ತಲುಪಿದೆ. ಅಲ್ಲಿನ ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ದೇಶದ ಹಲವು ರಾಜ್ಯಗಳ ವಾಯುಗುಣಮಟ್ಟ ದೆಹಲಿ ಹಾದಿಯಲ್ಲೇ ಸಾಗುತ್ತಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ದೆಹಲಿ ಹಾಗೂ ಪಂಜಾಬ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಅಷ್ಟೇ ಅಲ್ಲದೇ ದೀಪಾವಳಿ ಹಬ್ಬಕ್ಕೂ ಕೆಲ ನಿರ್ಬಂಧ ಮುಂದುವರಿಸಿದೆ. ದೆಹಲಿಯಲ್ಲಿ ಪಟಾಕಿ ನಿಷೇಧ ನಿರ್ಬಂಧ ತೆರವುಗೊಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪಟಾಕಿ ನಿಷೇಧ ಕೇವಲ ದೆಹಲಿ ಮಾತ್ರ ಸೀಮಿತವಲ್ಲ, ಇದು ದೇಶದ ಇತರ ಭಾಗಕ್ಕೂ ಅನ್ವಯಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌! – ವೈಕುಂಠ ದ್ವಾರ ದರ್ಶನ ಟಿಕೆಟ್ ಬಿಡುಗಡೆ!

ವಾಯು ಮಾಲಿನ್ಯ ಇದೀಗ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ನಗರ ಪ್ರದೇಶದಲ್ಲಿ ಮಾಲಿನ್ಯ ವಿಪರೀತವಾಗುತ್ತಿದೆ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಪ್ರಮಾಣ ಅತಿಯಾಗಲಿದೆ. ಹೀಗಾಗಿ ಪಟಾಕಿ ನಿಷೇಧವನ್ನು ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ನಿಷೇಧಿತ ರಾಸಾಯನಿಕಗಳು ಮತ್ತು ಬೇರಿಯಂ ಲವಣಗಳಿರುವ ಪಟಾಕಿ ಬಳಸದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಜನರು ಹಸಿರುಪಟಾಕಿ ಬಳಕೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗಲಿದೆ. ವಾಯು ಮಾಲಿನ್ಯ ನಿಯಂತ್ರಣ ಕೋರ್ಟ್ ಮಾತ್ರ ಕೆಲಸ ಎಂದುಕೊಳ್ಳಬೇಡಿ. ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ನಾಗರೀಕರು ತಮ್ಮ ಕೊಡುಗೆ ಸಲ್ಲಿಸಬೇಕು ಎಂದು ಸೂಚಿಸಿದೆ.

ಕಳೆದ ವರ್ಷವೂ ಸುಪ್ರೀಂ ಕೋರ್ಟ್ ಪಟಾಕಿ ನಿಷೇಧ ತೆರವಿನ ಕುರಿತು ಮಹತ್ವದ ಆದೇಶ ನೀಡಿತ್ತು. ಪಟಾಕಿ ನಿಷೇಧ ತೆರವು ಸಾಧ್ಯವಿಲ್ಲ ಎಂದಿತ್ತು. ಇದೀಗ ಈ ಬಾರಿಯೂ ಪಟಾಕಿ ನಿಷೇಧ ತೆರವು ಮಾಡುದಿಲ್ಲ ಎಂದಿದೆ. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ, ಹೊಸ ವರ್ಷಾಚರಣೆಗೂ ದೆಹಲಿಯಲ್ಲೂ ಪಟಾಕಿ ಸಿಡಿಸಿಲು ಅವಕಾಶವಿಲ್ಲ.

Shwetha M