ಗೆಲುವಿನ ಹುಡುಕಾಟದಲ್ಲಿದ್ದ ಚೆನ್ನೈಗೆ ಬ್ರೆವಿಸ್ ಎಂಟ್ರಿ – ಮಿಸ್ಟೇಕ್ ಮಿಲ್ಲರ್ ಡಿಸಿಗೆ ಗೆಲುವು ತಂದುಕೊಡ್ತಾರಾ?

ಗೆಲುವನ್ನೇ ಕಾಣದ ಕಂಗಾಲಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ. ಗೆಲುವಿಗೆಒಂದೇ ಮೆಟ್ಟಿಲಿರುವಾಗ ಸೋತ ನೋವಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್.. ಚೆನ್ನೈಗೆ ಬ್ರೆವಿಸ್ ಆಗ್ತಾರಾ ಆಸರೆ, ತನ್ನ ತಪ್ಪಿಗೆ ಸೋತ ಡಿಸಿ ತಂಡಕ್ಕೆ ಗೆಲುವಿನ ಮೆಟ್ಟಿಲಾಗ್ತಾರಾ ಮಿಲ್ಲರ್.. ಈ ಎಲ್ಲಾ ಪ್ರಶ್ನೆಗಳಿಗೆ ಶನಿವಾರ ರಾತ್ರಿ (ಏಪ್ರಿಲ್ 11)ಕ್ಕೆ ಉತ್ತರ ಸಿಗಲಿದೆ.
ಇದನ್ನೂ ಓದಿ:ವೈಭವ್ ಆಟಕ್ಕೆ ವಿರಾಟ್ ಮೆಚ್ಚುಗೆ – ಸೂರ್ಯವಂಶಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ!
ಐಪಿಎಲ್‌ನಲ್ಲಿ ಸತತ ಮೂರು ಸೋಲುಗಳಿಂದ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಹುಡುಕಾಟದಲ್ಲಿದೆ. ಇದೀಗ ಚೆನ್ನೈ ತಂಡಕ್ಕೆ ಒಂದು ಗುಡ್‌ನ್ಯೂಸ್ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ಯುವ ಸ್ಫೋಟಕ ಆಟಗಾರ ಡೆವಾಲ್ಡ್ ಬ್ರೆವಿಸ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ಸಾಗಿದ್ದಾರೆ. ಜೊತೆಗೆ ತವರಿನಲ್ಲಿ ಗೆಲ್ಲಲೇಬೇಕೆಂಬ ಹಠದಲ್ಲಿರುವ ಚೆನ್ನೈಗೆ ಧೋನಿ ಆಸರೆಯಾಗಬಹುದು ಎಂಬ ನಿರೀಕ್ಷೆಯೂ ಇದೆ. ಈ ಸೀಸನ್‌ನ ಮೊದಲ ಪಂದ್ಯಕ್ಕೂ ಮುನ್ನ ನಡೆದಿದ್ದ ಅಭ್ಯಾಸದ ವೇಳೆ ‘ಬೇಬಿ ಎಬಿ’ ಎಂದೇ ಫೇಮಸ್ ಆಗಿರುವ ಬ್ರೆವಿಸ್‌ಗೆ ಗಾಯವಾಗಿತ್ತು. ಈ ಕಾರಣದಿಂದಾಗಿ, ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಮೊದಲ ಮೂರೂ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದರು. ಈ ಮೂರೂ ಮ್ಯಾಚ್‌ಗಳಲ್ಲಿ ಚೆನ್ನೈ ಸೋಲು ಕಂಡಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿರುವ ಬ್ರೆವಿಸ್ ಅವರ ಆಗಮನ, ತಂಡದ ಮಧ್ಯಮ ಕ್ರಮಾಂಕಕ್ಕೆ ದೊಡ್ಡ ಬಲ ನೀಡಲಿದೆ. 2025ರಲ್ಲಿ ಬದಲಿ ಆಟಗಾರನಾಗಿ ತಂಡ ಸೇರಿಕೊಂಡಿದ್ದ ಬ್ರೆವಿಸ್, ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ನೆಚ್ಚಿನ ಆಟಗಾರನಾಗಿದ್ದರು.
ಮತ್ತೊಂದೆಡೆ ಡೆಲ್ಲಿ ತಂಡ ಕೂಡಾ ಬಲಿಷ್ಠವಾಗಿದೆ. ನಾಯಕ ಅಕ್ಷರ್ ಪಟೇಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕನ್ನಡಿಗ ಕ್ರಿಕೆಟರ್ ಕೆ.ಎಲ್ ರಾಹುಲ್ ಕೂಡಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಕಿಲ್ಲರ್ ಮಿಲ್ಲರ್ ಲಾಸ್ಟ್ ಮ್ಯಾಚ್‌ನಲ್ಲಿ ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿದ್ದರು. ಆದರೆ, ಒಂದೇ ಒಂದು ಸಣ್ಣ ಮಿಸ್ಟೇಕ್‌ನಿಂದ ತಂಡವನ್ನು ಗೆಲ್ಲಿಸಲಾಗದೇ ಕಣ್ಣೀರಿಟ್ಟಿದ್ದರು. ಇದೀಗ ಮಿಲ್ಲರ್‌ಗೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. ಹೀಗಾಗಿ ಡಿಸಿ ಮೇಲೆ ಜೊತೆಗೆ ಮಿಲ್ಲರ್ ಮೇಲೆ ಎಲ್ಲರ ಕಣ್ಣಿದೆ.

ನೋಡಿರಿ

