ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್ – ಗೌತಮ್ ದಿವಾನ್ ಗ್ರೇಟ್ ಕಂಬ್ಯಾಕ್..!

ಅಮೃತಧಾರೆ ಧಾರಾವಾಹಿಯಲ್ಲಿ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಗೌತಮ್ ದಿವಾನ್ ಮತ್ತೆ ಹಳೇ ಖದರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೌತಮ್ ಇನ್ನು ಕ್ಯಾಬ್ ಓಡಿಸುವುದಿಲ್ಲ. ಹೊಸ ಉದ್ಯಮ ಆರಂಭಿಸಲು ನಿರ್ಧರಿಸಿಯಾಗಿದೆ.
ಇದನ್ನೂ ಓದಿ:ಆದಿ – ಭಾಗ್ಯ ಪ್ರೇಮ ಪಯಣ ಶುರು! – ತಾಂಡವ್‌ಗೆ ಭಾಗ್ಯಳೇ ಗತಿ!
ದಿವಾನ್ ಗ್ರೂಪ್ ಆಫ್ ಕಂಪನೀಸ್‌ನ ಮಾಲೀಕನಾಗಿದ್ದ ಗೌತಮ್ ಈಗ ಕ್ಯಾಬ್ ಡ್ರೈವರ್ ಆಗಿರುವುದನ್ನ ವೀಕ್ಷಕರು ಅಷ್ಟಾಗಿ ಮೆಚ್ಚಿಕೊಂಡಿಲ್ಲ. ಹೀಗಾಗಿ ಡುಮ್ಮಸಾರ್ ಖದರ್ ಮತ್ತೆ ಬದಲಾಗಲಿದೆ. ಕೋಟ್ಯಾಧಿಪತಿ ಗೌತಮ್ ಆಗಿ ವೀಕ್ಷಕರ ಎದುರು ಬರುವ ಸಮಯ ದೂರವಿಲ್ಲ.
ಗೌತಮ್ ಈಗ ತಾನು ಮೋಸದಿಂದ ಕಳೆದುಕೊಂಡ ಆಸ್ತಿ ಮತ್ತು ಘನತೆಯನ್ನು ಮರಳಿ ಪಡೆಯಲು ಸಿದ್ಧನಾಗಿದ್ದಾನೆ. ಗೌತಮ್ ತಾಯಿಗೆ ಮಗ ಕ್ಯಾಬ್ ಓಡಿಸೋದನ್ನು ನೋಡುವುದು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಭೂಮಿಕಾ ಬಳಿ ಹೇಳುವಾಗ ಗೌತಮ್ ಕೇಳಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಉದ್ಯಮ ಶುರು ಮಾಡೋದಾಗಿ ಹೇಳಿದ್ದಾನೆ. ಇದರಿಂದ ಹೊಸ ಅಧ್ಯಾಯ ತೆರೆದುಕೊಳ್ಳುವ ಸಾಧ್ಯತೆ ಇದೆ. ಗೌತಮ್ ಮಲತಾಯಿ, ತಮ್ಮ ಜೈದೇವ್ ಗೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ. ಈಗ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ತಾಯಿಗಾಗಿ ಹೊಸ ಉದ್ಯಮ ಮಾಡೋದಾಗಿ ಭರವಸೆ ನೀಡಿದ್ದಾನೆ. ನಾನು ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸಿ, ನಿನ್ನ ಕಾಲ ಕೆಳಗೆ ಹಾಕ್ತೀನಿ ಎಂದು ಅಮ್ಮನಿಗೆ ಪ್ರಾಮಿಸ್ ಮಾಡಿದ್ದಾನೆ. ಗೌತಮ್ ದೀವಾನ್ ಮಾತನ್ನು ಕೇಳಿ ತಾಯಿ ಖುಷಿ ಆಗಿದ್ದಾಳೆ. ಗೌತಮ್ ಇದನ್ನು ಸಾಧಿಸಿ ತೋರಿಸುತ್ತಾನೆ ಎಂಬ ನಂಬಿಕೆ ಎಲ್ಲರಿಗೂ ಬಂದಿದೆ. ಅತ್ತ ಜಯದೇವ್ಗೆ ಸಂಕಷ್ಟ ಎದುರಾಗಿದೆ. ಅವರು ಮಾಡಿದ ಸಾಲದಿಂದ ಸಂಕಷ್ಟ ಬಂದಿದೆ. ಬ್ಯಾಂಕ್ನವರು ಮನೆಗೆ ಬಂದು ಪೀಡಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಮಲತಾಯಿ ಮತ್ತು ಜೈದೇವ್
ಕಷ್ಟದ ದಿನ ಎದುರಿಸದರೆ, ಗೌತಮ್ ದಿನೇ ದಿನೇ ಸಂಪತ್ತಿನಲ್ಲಿ ಎತ್ತರಕ್ಕೆ ಏರಬಹುದು. ಇದನ್ನೇ ನೋಡಲು ಇಷ್ಟು ದಿನ ವೀಕ್ಷಕರು ಕೂಡಾ ಕಾಯುತ್ತಿದ್ದರು.

ನೋಡಿರಿ

