9 ವರ್ಷ ಪ್ರೀತಿಸಿ ಬೇರೆಯವನ ಜೊತೆ ಮದುವೆಗೆ ಸಿದ್ಧವಾದಳು ಯುವತಿ – ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಇಂಜಿನಿಯರ್

9 ವರ್ಷ ಪ್ರೀತಿಸಿ ಬೇರೆಯವನ ಜೊತೆ ಮದುವೆಗೆ ಸಿದ್ಧವಾದಳು ಯುವತಿ – ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಇಂಜಿನಿಯರ್

ಪ್ರೀತಿಯಲ್ಲಿ ಎಲ್ಲವೂ ಚೆನ್ನಾಗಿದ್ದರೆ ಅದು ಹೂವಿನ ಪಲ್ಲಕ್ಕಿ. ಆದರೆ ಸ್ವಲ್ಪ ತಾಳ ತಪ್ಪಿದರೂ ಕೊನೆಗೆ ನಡೆಯೋದು ಘೋರ ದುರಂತ. ನೀನೇ ಚಿನ್ನ ನೀನೇ ರನ್ನ ಅಂತಾ ಪ್ರೀತಿಸಿ ಮದುವೆ ಅಂತಾ ಬಂದಾಗ ಕೈಕೊಟ್ಟರೆ ಅದರಿಂದ ಬಹುತೇಕರಿಗೆ ಹೊರ ಬರುವುದೇ ಕಷ್ಟವಾಗುತ್ತೆ. ಅಂತಹ ಟೈಮಲ್ಲಿ ಘೋರ ನಿರ್ಧಾರ ತೆಗೆದುಕೊಂಡು ಬಿಡ್ತಾರೆ. ಸದ್ಯ ಬೆಂಗಳೂರಿನಲ್ಲೂ ಇಂಥಾದ್ದೇ ಒಂದು ಘಟನೆ ನಡೆದಿದೆ.

ಇದನ್ನೂ ಓದಿ : ಬಡತನ ಮೆಟ್ಟಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ರೈತ – 7 ಜನ ಹೆಣ್ಣು ಮಕ್ಕಳನ್ನ ದೇಶಸೇವೆಗೆ ಕಳಿಸಿ ಮಾದರಿ

ವರ್ಷಗಟ್ಟಲೆ ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಪ್ರೇಮಿ ಪೆಟ್ರೋಲ್ ಸುರಿದುಕೊಂಡು  ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಆನೇಕಲ್(Anekal) ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ಯುವಕ ರಾಕೇಶ್ ಎಂಬಾತನೇ ಮೃತ ದುರ್ದೈವಿ. ಕೆಂಗೇರಿಯಲ್ಲಿ ವಾಸವಿದ್ದ ರಾಕೇಶ್, 9 ವರ್ಷದಿಂದ‌ ಯುವತಿಯನ್ನು ಪ್ರೀತಿ(Love) ಮಾಡುತ್ತಿದ್ದ. ಆದರೆ ಇತ್ತೀಚೆಗೆ ಬೇರೆ ಯುವಕನ ಜೊತೆಗೆ ಯುವತಿ ಮದುವೆಗೆ ಸಿದ್ದತೆ ಮಾಡಲಾಗಿತ್ತು. ಇದರಿಂದಾಗಿ ಯುವತಿ ರಾಕೇಶ್​ನನ್ನು ಅವಾಯ್ಡ್ ಮಾಡಿದ್ದಳು. ಈ ಹಿನ್ನಲೆ ರಾಕೇಶ್ ಡಿಸೆಂಬರ್ 6ರಂದು ಯುವತಿಯ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದ. ಈ ಸಂದರ್ಭದಲ್ಲಿ ರಾಕೇಶ್ ಹಾಗೂ ಯುವತಿ ಜೊತೆ ಗಲಾಟೆ ಆಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ. ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ರಾಕೇಶ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ರಾಕೇಶ್ ದೇಹದ ಬಹುತೇಕ ಭಾಗಗಳು ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಬುಧವಾರ ರಾತ್ರಿ ಅಸುನೀಗಿದ್ದಾನೆ. ಯುವಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ ಕಡೆಯವರು ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ. ‘ಇಬ್ಬರ ಪ್ರೀತಿಗೆ ಯುವತಿಯ ಕುಟುಂಬದಿಂದ ವಿರೋಧವಿತ್ತು. ನಿನ್ನೆ ಹುಡುಗನನ್ನು ಆಕೆಯ ಕುಟುಂಬದವರು ಕರೆದಿದ್ದರಂತೆ. ಈ ವೇಳೆ ಹೋದಾಗ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಾಕಿ ಕೊಲೆ ಮಾಡಿದ್ದಾಗಿ ಆರೋಪಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಇಂಜಿಯರ್ ಆಗಿದ್ದ ಮೃತ ಯುವಕ ಹಾಗೂ ಯುವತಿ ಹೆಮ್ಮಿಗೆಪುರದಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ನಂತರ ಕಳೆದ ಒಂಬತ್ತು ವರ್ಷದಿಂದ ಪ್ರೀತಿ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ರಾಕೇಶ್ ತಂದೆ ಯುವತಿಯ ಮನೆಗೆ ತೆರಳಿ ಮದುವೆ ನಿರ್ಧಾರ ಮಾಡಿದ್ದರು. ಇದಾದ ಬಳಿಕ ಸಮಸ್ಯೆ ಶುರುವಾಗಿದೆ. ಆ ಬಳಿಕ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಕುಟುಂಬಸ್ಥರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

Shantha Kumari