ಕೇಶವನ ಅಪ್ಪುಗೆಗೆ ಮನಸೋತ ಅಪ್ಪ – ನಂದಗೋಕುಲದಲ್ಲಿ ಈಗ ನಮ್ಮ ಸಂಸಾರ ಆನಂದ ಸಾಗರ

ಖಡಕ್ ಅಪ್ಪ.. ತಂದೆಯ ಬೈಗುಳಕ್ಕೆ ಗಂಡು ಮಕ್ಕಳ ಪರದಾಟ. ಅದೇ ಬೈಗುಳದಲ್ಲಿರುವ ಕಾಳಜಿ, ಮತ್ತು ವಾತ್ಸಲ್ಯ. ಇದು ಗೊತ್ತಾದಮೇಲೆ ಮಕ್ಕಳ ಮನಸಲ್ಲಿ ತುಂಬಿಬರುವ ಪ್ರೀತಿ. ಅಪ್ಪ ಮಕ್ಕಳ ಬಾಂಧವ್ಯ ಕಂಡು ಮನಸೋತ ಸೊಸೆಯಂದಿರು. ನಂದಗೋಕುಲ ಈಗ ಜೇನುಗೂಡಾಗಿದೆ.
ಇದನ್ನೂ ಓದಿ:ಸರ್ಸೆ ಸೆರಗ ಸರ್ಸೆ ಸಾಂಗ್ ವಿವಾದ! – ಕ್ಷಮೆ ಕೇಳಿ 50 ಬಾಲಕಿಯರ ಶಿಕ್ಷಣಕ್ಕೆ ನೆರವು ಘೋಷಿಸಿದ ಸಂಜಯ್ ದತ್
ನಂದ ಗೋಕುಲ ಧಾರಾವಾಹಿ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಉಳಿದೆಲ್ಲಾ ಧಾರಾವಾಹಿಗಿಂತಲೂ ಭಿನ್ನವಾಗಿ ಮೂಡಿಬರುತ್ತಿದೆ. ವೀಕ್ಷಕರಿಗೂ ಈ ಸೀರಿಯಲ್ ತುಂಬಾ ಇಷ್ಟವಾಗುತ್ತಿದೆ. ಅದರಲ್ಲೂ ನಂದನ ಕುಟುಂಬದಲ್ಲಿರುವ ಒಗ್ಗಟ್ಟು ನೋಡೋದೇ ಚೆಂದ. ಆದರೆ, ನಂದನ ಮೆಚ್ಚಿನ ಸೊಸೆ ಪ್ರಿಯಾ ಮನೆಗೆ ಕಾಲಿಟ್ಟ ಮೇಲೆ ಅಲ್ಲಲ್ಲಿ ಮುನಿಸು, ಸಿಟ್ಟು, ಕೋಪ ತಾಪ, ಹೊಟ್ಟೆಕಿಚ್ಚು ಎಲ್ಲಾ ಕಾಣಿಸಿದ್ದು ಇದೆ. ಇದ ಮಧ್ಯೆ ಈಗ ನಂದ ಕೇಶವನ ಬಾಂಧವ್ಯ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಈ ಧಾರಾವಾಹಿ ಟಿಆರ್‌ಪಿಯಲ್ಲೂ ಮೊದಲ ಸ್ಥಾನದಲ್ಲಿದೆ.
ಅಪ್ಪ ನಂದನ ಮಾತಿನಿಂದ ಬೇಸತ್ತ ಕೇಶವ ಮನೆಬಿಟ್ಟು ಹೋಗಲೇಬೇಕು ಎಂದು ನಿರ್ಧರಿಸಿದ್ದ. ಪತ್ನಿ ಮೀನಾ ಬಳಿಯೂ ತನ್ನ ಅಚಲ ನಿರ್ಧಾರವನ್ನು ಹೇಳಿದ್ದ. ಮೀನಾ ಚಿಂತೆಯಲ್ಲೇ ಅತ್ತೆ ಜೊತೆ ನೋವು ಹಂಚಿಕೊಂಡಿದ್ದಳು. ಕೇಶವ ಮನೆ ಬಿಟ್ಟು ಹೋಗ್ತಾನಾ, ನಂದಗೋಕುಲದ ಜೇನುಗೂಡಿಗೆ ಕಲ್ಲು ಬಿತ್ತಾ ಅನ್ನೋ ಬೇಸರದಲ್ಲಿ ವೀಕ್ಷಕರೂ ಇದ್ದರು. ಇದೀಗ ಕೇಶವ ಮನಸು ಬದಲಿಸಿದ್ದಾನೆ. ಅಪ್ಪನ ಸಿಟ್ಟು ತನ್ನ ಮೇಲಿನ ಪ್ರೀತಿಯಿಂದ ಬರುವುದು ಅನ್ನೋದು ಕೇಶವನಿಗೆ ಅರ್ಥವಾಗಿದೆ. ಅಷ್ಟೇ ಅಲ್ಲ, ನಂದನ ಮತ್ತೊಂದು ಗುಣವೂ ಕೇಶವನ ಮನಸು ಬದಲು ಮಾಡಿದೆ. ಕೇಶವ ನನ್ನ ಮಗ. ನಾನು ಮಾತ್ರ ಬೈಯ್ಯಬೇಕು. ಇನ್ಯಾರು ಕೇಶವನ ವಿರುದ್ಧ ಮಾತಾಡಬಾರದು. ಅದರಲ್ಲೂ ಅಂಗಡಿಗೆ ಬರುವ ಗ್ರಾಹಕರು ಕೂಡಾ ಕೇಶವನಿಗೆ ಏನೂ ಹೇಳಿದರೂ ನಂದ ಸಹಿಸಲ್ಲ. ಅದರಲ್ಲೂ ಅಂಗಡಿ ಯಜಮಾನನೇ ನನ್ನ ಮಗ ಕೇಶವ ಎಂದು ಹೇಳಿದ್ದು ಕೇಶವನ ಕಣ್ಣು ತೆರೆಸಿದೆ. ಜೊತೆಗೆ ಮನೆಯವರ ಎದುರೇ ಅಪ್ಪನ ಹೆಗಲಿಗೆ ತಲೆಕೊಟ್ಟು ತಬ್ಬಿಕೊಂಡಿದ್ದಾನೆ ಕೇಶವ.
ನಂದನ ಕೋಪದ ಹಿಂದಿನ ಪ್ರೀತಿ ಕೇಶವನಿಗೆ ಅರ್ಥವಾಗಿದೆ. ಅಪ್ಪ ಅನ್ನೋ ಆಕಾಶದ ಕೆಳಗೆ ನೆಮ್ಮದಿಯಾಗಿರ್ತೀನಿ ಅನ್ನೋ ಕೇಶವನ ಭಾವುಕತೆ ವೀಕ್ಷಕರಿಗೆ ಇಷ್ಟವಾಗಿದೆ. ಇದು ಗಾಜಿನ ಮನೆಯಲ್ಲ. ಇದು ಒಡೆಯುವುದೂ ಇಲ್ಲ. ಇದು ನಂದಗೋಕುಲ ಅನ್ನೋ ಮೀನಾಳ ಮಾತು ಅದೆಷ್ಟೋ ಹೆಣ್ಣುಮಕ್ಕಳ ಮನಗೆದ್ದಿದೆ.

ನೋಡಿರಿ

