ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ – ಪತ್ನಿ ಸ್ಪಂದನಾ ನೆನಪಲ್ಲಿ ಚಿನ್ನಾರಿ ಮುತ್ತ ಭಾವುಕ
ನಟ ವಿಜಯ್ ರಾಘವೇಂದ್ರ ಅಗಲಿದ ತಮ್ಮ ಪತ್ನಿಯ ನೆನಪಲ್ಲಿ ಆಗಾಗ ಭಾವುಕ ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಪತ್ನಿ ಸ್ಪಂದನಾ ಅವರನ್ನು ನೆನಪಿಸಿಕೊಂಡು ಭಾವುಕ ಪೋಸ್ಟ್ ಶೇರ್ ಮಾಡಿಕೊಂಡಿರುವ ಚಿನ್ನಾರಿಮುತ್ತ ಹೆಂಡತಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ…- ನಾನೆಂದೂ ನಿನ್ನವ ಎಂದು ಚಿನ್ನಾರಿಮುತ್ತನ ಮನಮಿಡಿಯುವ ಪೋಸ್ಟ್
ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ನೆನಪಿಸಿಕೊಂಡು ಭಾವುಕ ಸಾಲುಗಳನ್ನು ಬರೆದಿದ್ದಾರೆ. ‘ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ… ಐ ಲವ್ ಯೂ ಚಿನ್ನಾ’ ಎಂದು ಭಾವುಕ ಸಾಲುಗಳನ್ನು ಬರೆುಕೊಂಡಿದ್ದಾರೆ. ಹೆಂಡತಿ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಹಿಂದೆಯೂ ವಿಜಯ ರಾಘವೇಂದ್ರ ತಮ್ಮ 16ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ರೀತಿಯ ಭಾವುಕ ಸಾಲುಗಳನ್ನು ಬರೆದಿದ್ದರು.
ಅಗಲಿದ ಪತ್ನಿಗೆ ವಿಜಯ ರಾಘವೇಂದ್ರ ಭಾವುಕ ಸಾಲುಗಳ ಮೂಲಕ ವಿಶ್ ಮಾಡಿದ್ದರು. ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದವರು. ಶೌರ್ಯ ಎಂಬ ಪುತ್ರನಿದ್ದಾನೆ. ವಿವಾಹ ವಾರ್ಷಿಕೋತ್ಸವದ ದಿನ ಭಾವುಕ ಸಾಲುಗಳನ್ನು ಬರೆದು, ಅದಕ್ಕೆ ವಿಡಿಯೋ ಸ್ಪರ್ಶ ಕೂಡ ನೀಡಿದ್ದರು. ಚಿನ್ನ, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..ಎಂದು ಬರೆದುಕೊಂಡಿದ್ದರು.