ಅರಣ್ಯ ರಕ್ಷಣೆಗಾಗಿ ಪಣತೊಟ್ಟ ಗಜರಾಜ! – ಗುಡ್ಡ ಅಗೆಯುತ್ತಿದ್ದ ಜೆಸಿಬಿಯನ್ನೇ ಅಡ್ಡಗಟ್ಟಿದ ಕಾಡಾನೆ!

ಅರಣ್ಯ ನಾಶ ಮತ್ತು ಕಾಡುಪ್ರಾಣಿಗಳ ಮೇಲೆ ಅದರ ದುಷ್ಪರಿಣಾಮಗಳು ಪ್ರಸ್ತುತ ದಿನಗಳಲ್ಲಿ ಅತ್ಯಂತ ಗಂಭೀರ ಪರಿಸರ ಸಮಸ್ಯೆಯಾಗಿದೆ. ಕಾಡುಗಳು ನಾಶವಾಗುತ್ತಿರುವುದರಿಂದ ಪ್ರಾಣಿಗಳು ಆಶ್ರಯ ಮತ್ತು ಆಹಾರವಿಲ್ಲದೆ ಅಲೆದಾಡುತ್ತಿವೆ. ಕಾಡುಪ್ರಾಣಿಗಳು ಈಗ ಜನವಸತಿ ಪ್ರದೇಶದತ್ತ ಬರುತ್ತಿವೆ. ಇದೀಗ ಇಲ್ಲೊಂದು ಕಡೆ ಅಭಿವೃದ್ದಿ ಹೆಸರಲ್ಲಿ ಅರಣ್ಯ ನಾಶ ಮಾಡುತ್ತಿದ್ದ ವೇಳೆ ಕಾಡಾನೆಯೊಂದು ತಡೆದಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲೂ ಸೀಸದ ಅಂಶ ಪತ್ತೆ! – ಸರ್ಕಾರದಿಂದಲೇ ಟೆಸ್ಟ್‌ಗೆ ಆದೇಶ
ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಾಗಿ ಪರಿಸರವನ್ನೇ ನಾಶ ಮಾಡುತ್ತಿದ್ದಾರೆ. ಈ ನಡುವೆ ತನ್ನ ವಾಸಸ್ಥಾನ ಅರಣ್ಯವನ್ನು ರಕ್ಷಣೆ ಮಾಡಲು ಆನೆಯೊಂದು ಹೋರಾಟ ನಡೆಸಿದೆ. ಜೆಸಿಬಿ ಗುಡ್ಡ ಅಗೆಯುವ ವೇಳೆ ಆನೆಯೊಂದು ಅಲ್ಲಿಗೆ ಬಂದಿದ್ದು, ಜೆಸಿಬಿಯನ್ನ ತಡೆದಿದೆ. ಯಂತ್ರವು ತನ್ನ ಅರಣ್ಯವನ್ನು ನಾಶಮಾಡಲು ಬಿಡದಂತೆ ಧೈರ್ಯದಿಂದ ನಿಂತಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಆನೆಯ ವಿಡಿಯೋ ಕಂಡ ನೆಟ್ಟಿಗರು ಭಾವುಕರಾಗಿದ್ದಾರೆ. ಪ್ರಾಣಿಗಳಿಗಾದರೂ ಬುದ್ದಿವಂತಿಕೆ ಇದೆ. ನೀಚ ಮನುಷ್ಯರಿಗೆ ಇಲ್ಲ ಎಂದು ಹಲವಾರು ಕಿಡಿಕಾರಿದ್ದಾರೆ.
ಅಧಿಕಾರಿಗಳು ಮತ್ತು ಖಾಸಗಿ ಕಂಪನಿಗಳು ಪರಿಸರ ವಿಜ್ಞಾನಕ್ಕಿಂತ ಲಾಭಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಹೆಚ್ಚಿನವರು ಆರೋಪಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಮರಗಳನ್ನು ಕಡಿಯಲು ಜೆಸಿಬಿ ಯಂತ್ರವೊಂದು ಮುಂದೆ ಬಂದಿತ್ತು. ಆಗ ಬೃಹತ್ ಗಾತ್ರದ ಆನೆಯೊಂದು ಇದಕ್ಕೆ ಅಡ್ಡವಾಗಿ ಬಂದು ನಿಂತಿದೆ. ಅದು ಯಂತ್ರವನ್ನು ತಡೆದು ನಿಂತಿರುವುದು ನಿಜಕ್ಕೂ ನೋಡುಗರಿಗೆ ಆಶ್ಚರ್ಯ ಉಂಟು ಮಾಡಿದೆ.

ನೋಡಿರಿ

