ಆನೆ ಮುಂದೆ ಜಾಣತನ ಮೆರೆಯಲು ಹೋದ ಚಾಲಕ – ಪಾಪ ಆತನ ಸ್ಥಿತಿ ಏನಾಯ್ತು ನೋಡಿ?

ಅರಣ್ಯ ಪ್ರದೇಶದ ರಸ್ತೆಗಳಲ್ಲಿ ಹೋಗುತ್ತಿರುವ ವೇಳೆ ಆಗಾಗ ಕಾಡು ಪ್ರಾಣಿಗಳು ದಿಢೀರ್ ಪ್ರತ್ಯಕ್ಷವಾಗುತ್ತವೆ. ಕೆಲ ಪ್ರಾಣಿಗಳು ಅದರ ಪಾಡಿಗೆ ರಸ್ತೆ ದಾಟುತ್ತವೆ. ಇನ್ನೂ ಕೆಲವು ರಸ್ತೆಯಲ್ಲೇ ನಿಂತು ಪ್ರಯಾಣಿಕರು ತಲೆಕೆಡಿಸಿಕೊಳ್ಳುವಂತೆ ಮಾಡುತ್ತವೆ. ಈ ವೇಳೆ ವಾಹನಗಳನ್ನು ಅಟ್ಟಿಸಿಕೊಂಡು ಬರುತ್ತವೆ. ಅಲ್ಲದೇ ವಾಹನಗಳ ಮೇಲೂ ದಾಳಿ ಮಾಡುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಆನೆಯೊಂದು ವಾಹನದ ಮೇಲೆ ದಾಳಿ ಮಾಡಿದ್ದು, ಎಲ್ಲರನ್ನು ಭಯಹುಟ್ಟಿಸುವಂತಿದೆ.
ಇದನ್ನೂ ಓದಿ: ಬಾವಿಯಲ್ಲಿದ್ದವು ಮೂರು ಹೆಬ್ಬಾವುಗಳು – ರಕ್ಷಣೆಗೆ ಹೋದ ಯುವಕನ ಪಾಡು ಏನಾಯ್ತು ನೋಡಿ!
ನಾಗಾಲ್ಯಾಂಡ್ ನ ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆನೆಯೊಂದು ರಸ್ತೆ ಮಧ್ಯೆ ನಿಂತಿರುತ್ತದೆ. ಈ ವೇಳೆ ಕೆಲವರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಆನೆ ಹೋಗುವುದನ್ನೇ ಕಾಯುತ್ತಿರುತ್ತಾರೆ. ಆಗ ಬಾಲಕನೊಬ್ಬ ಆನೆ ಮುಂದೆ ಜಾಣತನ ಪ್ರದರ್ಶಿಸಲು ಯತ್ನಿಸಿದ್ದಾನೆ. ಆತ ತನ್ನ ಪಿಕಪ್ ವಾಹನವನ್ನು ಸ್ಟಾರ್ಟ್ ಮಾಡುತ್ತಾನೆ. ಪಿಕಪ್ ಮುಂದಕ್ಕೆ ಚಲಿಸಲು ಆರಂಭವಾಗುತ್ತದೆ. ಇದರಿಂದ ಕಿರಿಕಿರಿ ಅನುಭವಿಸಿದ ಆನೆ ದಿಢೀರ್ ಆಗಿ ಪಿಕಪ್ ಮೇಲೆ ದಾಳಿ ಮಾಡಿದೆ. ಆನೆ ತನ್ನ ಕೋಪವನ್ನೆಲ್ಲಾ ಪಿಕಪ್ ಮೇಲೆ ತೋರಿಸಿದೆ. ಸಿಟ್ಟಿನಿಂದ ಚೆಂಡನ್ನು ಉರುಳಿಸಿದ ಹಾಗೆ ತನ್ನ ಸೊಂಡಿಲು, ಕಾಲಿನಿಂದ ಕೇವಲ 2 ಸೆಕೆಂಡುಗಳಲ್ಲಿ ಪಿಕಪ್ ವಾಹನವನ್ನು ಉರುಳಿಸಿದೆ. ಪಾಪ ಪಿಕಪ್ ಚಾಲಕ ಜಾಣತನ ಮೆರೆಯಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಚಾಲಕನ ಸ್ಥಿತಿ ಏನಾಗಿದೆ ಎಂಬುದು ತಿಳಿದು ಬಂದಿಲ್ಲವಾದರೂ ಆತನಿಗೆ ಗಂಭೀರ ಗಾಯಗಳಾಗಿರುವ ಸಾಧ್ಯತೆ ಇದೆ.
तुमने मेरे इलाके में #घर क्यों बनाया 🤔🤔😓😓#Narengi #Guwahati today.😖😖@susantananda3 @ParveenKaswan @ipsvijrk @SudhaRamenIFS @moefcc pic.twitter.com/puaHBG5mQM
— Rupin Sharma IPS (@rupin1992) January 14, 2023