ಸಫಾರಿಗೆ ಹೊರಟವರ ಪಿಕ್ಚರ್ ಬಿಡಿಸಿದ ಆನೆ.. – ಇಂತಹ ಸಾಹಸ ಬೇಕಿತ್ತಾ?

ಸಫಾರಿಗೆ ಹೊರಟವರ ಪಿಕ್ಚರ್ ಬಿಡಿಸಿದ ಆನೆ.. – ಇಂತಹ ಸಾಹಸ ಬೇಕಿತ್ತಾ?

ಸಫಾರಿಯಲ್ಲಿ ತೆರಳುವುದು ಖುಷಿಯ ಕ್ಷಣ. ಪ್ರಾಣಿಗಳನ್ನು ಅವುಗಳ ಸಹಜ ಆವಾಸ ಸ್ಥಾನದಲ್ಲಿ ಹತ್ತಿರದಿಂದ ನೋಡುವ ಖುಷಿಯೇ ಬೇರೆ. ಆದರೆ ಕೆಲವೊಮ್ಮೆ ಇದು ಕೂಡಾ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಆಘಾತಕಾರಿ ಕ್ಷಣಕ್ಕೆ ಸಾಕ್ಷಿಯಾಗುತ್ತದೆ. ಸಫಾರಿಗೆ ತೆರಳಿದ ಸಂದರ್ಭದಲ್ಲಿ ನಡೆದಿರುವ ಅನೇಕ ದುರ್ಘಟನೆಗಳ ದೃಶ್ಯಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ. ಆನೆಯೊಂದು ಸಫಾರಿ ಟ್ರಕ್‌ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ:ನೂರಾರು ಕೋಟಿ ಒಡೆಯ ಧೋನಿ ಬಳಿ ಇರೋ ಬೈಕ್, ಕಾರುಗಳೆಷ್ಟು?

ಈ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಜೋಹಾನ್ಸ್‌ಬರ್ಗ್‌ನ ವಾಯುವ್ಯದಲ್ಲಿರುವ ಪಿಲಾನೆಸ್‌ಬರ್ಗ್ ರಾಷ್ಟ್ರೀಯ ಉದ್ಯಾನವನದಲ್ಲಿ ಮಾರ್ಚ್ 18 ರಂದು ಈ ಘಟನೆ ನಡೆದಿದೆ. ಜಂಗಲ್ ಸಫಾರಿಯ ವೇಳೆ ದಕ್ಷಿಣ ಆಫ್ರಿಕಾದ ಸಫಾರಿ ಟ್ರಕ್ ಅನ್ನು ಆನೆಯೊಂದು ಅಡ್ಡಗಟ್ಟಿ ದಾಳಿ ಮಾಡಿದೆ. ಎದೆನಡುಕ ಹುಟ್ಟಿಸುವ ಈ ದೃಶ್ಯವನ್ನು ಪ್ರವಾಸಿಗರು ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಪಿಲಾನೆಸ್‌ಬರ್ಗ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದ ದಕ್ಷಿಣ ಆಫ್ರಿಕಾದ ಸ್ಥಳೀಯರೊಬ್ಬರು ಆನೆಯ ಸಮೀಪಕ್ಕೆ ಬಂದು ಟ್ರಕ್​​ ನಿಲ್ಲಿಸಿದ್ದಾರೆ. ಆನೆಯ ಫೋಟೋ ತೆಗೆಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಆನೆ ಏಕಾಏಕಿ ಸೊಂಡಿಲಿನಿಂದ ಸಫಾರಿ ಟ್ರಕ್ ಮೇಲೆ ದಾಳಿ ಮಾಡಿದೆ. ಟ್ರಕ್‌ ಅನ್ನು ಸೊಂಡಿಲಿನಿಂದ ಎತ್ತಿಹಾಕಿದೆ. ಸದ್ಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @AfricaInFocus_ ಎಂಬ ಟ್ವಿಟರ್​​ ಖಾತೆಯಲ್ಲಿ ಮಾರ್ಚ್​​​​ 19ರಂದು ವಿಡಿಯೋ ಹಂಚಿಕೊಳ್ಳಲಾಗಿದೆ.

ಈ ಘಟನೆಯ ಬಗ್ಗೆ ಅಲ್ಲಿನ ಪ್ರವಾಸಿಗರು ಮಾತನಾಡಿದ್ದಾರೆ. ಆನೆ ತುಂಬಾ ಕ್ರೂರವಾಗಿ ವರ್ತಿಸಿತು , ನಮಗೆ ಏನು ಮಾಡಬೇಕೆಂದು ತೋಚಲಿಲ್ಲ. ಆನೆ ದಾಳಿಯಿಂದ ಯಾರಿಗೂ ಗಾಯಗಳಾಗದಿದ್ದರೂ ಆತಂಕಕ್ಕೆ ಒಳಗಾದವರಿಗೆ ಕೌನ್ಸೆಲಿಂಗ್ ಮಾಡಲಾಗಿದೆ ಎಂದು ಹೇಳಿದ್ದಾರೆ.

Shwetha M