ದೈವರಾಧನೆಗೆ ತೇಜಸ್ವಿ ಸೂರ್ಯ ಅವಮಾನ? – ಸಂಸದನ ವಿರುದ್ಧ ಜನಾಕ್ರೋಶ
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನ ರಾಷ್ಟ್ರೋತ್ಥಾನದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ದೈವರಾಧನೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.
ರಾಷ್ಟ್ರೋತ್ಥಾನದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ದೈವರಾಧನೆ ವಿಚಾರವಾಗಿ ಸಮಾರಂಭ ಆಯೋಜಿಸಿತ್ತು. ಈ ವೇಳೆ ಚಪ್ಪಲಿ ಹಾಕಿಕೊಂಡು ದೈವದ ದೀವಟಿಗೆ ನಿಂತ ಫೋಟೋವೊಂದು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ‘ಕಾಂಗ್ರೆಸ್ ತನ್ನ ಪಕ್ಷದ ತುಂಬಾ ಗೂಂಡಾಗಳನ್ನೇ ತುಂಬಿಸಿಕೊಂಡಿದೆ’ – ಬಿಜೆಪಿ ಟ್ವೀಟ್ ತಿರುಗೇಟು
ಫೋಟೋ ವೈರಲ್ ಬೆನ್ನಲ್ಲೇ ದೈವಾರಾಧನೆಗೆ ತೇಜಸ್ವಿ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಬಿದ್ದಿದೆ. ಸದ್ಯ ಈ ಫೋಟೊವನ್ನು ಸಾಮಾಜಿಕ ಜಾಲತಾಣದಿಂದ ಸಂಸದರು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಖಿಲ ಭಾರತ ಹಿಂದೂ ಮಹಾ ಸಭಾ, ಕರ್ನಾಟಕ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಹಾಕಲಾಗಿದೆ. “ಜೈ ಹಿಂದೂ ರಾಷ್ಟ್ರ… ಇದೇನಾ ಸಂಸ್ಕೃತಿ ??? ಇದೇನ ಪದ್ಧತಿ ??? ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ಸಂಸ್ಕೃತಿಯ ಬಗ್ಗೆ /ದೈವರಾದನೆಯ ಬಗ್ಗೆ /ಹಿಂದೂ ಸಮುದಾಯದ ಬಗ್ಗೆ, ಇರುವಂತಹ ಗೌರವವನ್ನು ನೋಡಿ …. ಆಡಳಿತದಲ್ಲಿರುವಂತಹ ಡಬಲ್ ಇಂಜಿನ್ ಸರಕಾರದ ಮಾನ್ಯ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಚಪ್ಪಲಿಯನ್ನ ಧರಿಸಿ ನಿಂತಿರುವುದನ್ನ ಕಣ್ಣಾರೆ ನೋಡಿ” ಎಂದು ಕಿಡಿಕಾರಿದ್ದಾರೆ.