ಮನುಷ್ಯರಂತೆ ಹಲ್ಲುಗಳಿರುವ ಭಯಾನಕ ಮೀನು!

ಮನುಷ್ಯರಂತೆ ಹಲ್ಲುಗಳಿರುವ ಭಯಾನಕ ಮೀನು!

ಇಲ್ಲೊಬ್ಬ ಪುಟ್ಟ ಬಾಲಕ ಹಿಡಿದಿರುವ ಮೀನನ್ನು ಕಂಡು ಜನ ದಂಗಾಗಿದ್ದಾರೆ. ಅದು ಭಾರೀ ಗಾತ್ರದ ಮೀನಾಗಿರಬೇಕು ಅಥವಾ ಅದರ ಬಣ್ಣ ಮತ್ತು ಆಕಾರದಲ್ಲಿ ಭಿನ್ನತೆ ಇರಬೇಕು ಎಂದು ಊಹಿಸಿತೊಡಗಿದಿರಾ? ನಿಮ್ಮ ಊಹೆ ತಪ್ಪು. ಅದ್ಯಾವುದೂ ಅಲ್ಲ, ಆ ಮೀನು, ಮನುಷ್ಯರಿಗೆ ಇರುವಂತಹ  ಹಲ್ಲುಗಳನ್ನು ಹೊಂದಿದೆ. ಬಾಲಕ ಹಿಡಿದಿರುವ ಮೀನಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ನೋಡಲು ಹಾವಿನಂತೆ… ಮೈ ತುಂಬಾ ಝೀಬ್ರಾ ಬಣ್ಣ.. ಈ ವಿಷಕಾರಿ ಮೀನು ಸಿಕ್ಕಿದ್ದೆಲ್ಲಿ?

ಚಾರ್ಲಿ ಕ್ಲಿಂಟನ್  ಎಂಬ 11 ವರ್ಷದ ಬಾಲಕ ಕೆರೆಯಲ್ಲಿ ಮೀನಿಗೆ ಗಾಳ ಹಾಕುತ್ತಿರುವ ವೇಳೆ ಮೀನೊಂದು ಸಿಕ್ಕಿದೆ. ಅದನ್ನು ಹಿಡಿದು ನೋಡಿದಾಗ ಆ ಮೀನಿನ ಬಾಯಿಯಲ್ಲಿ ಮನುಷ್ಯ ಹಲ್ಲಿನಂತೆ ಹೋಲುವ ಹಲ್ಲುಗಳು ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು ಅಶ್ಚರ್ಯಚಕಿತರಾಗಿದ್ದಾರೆ.

ಮಾನವನ ಹಲ್ಲಿನ ರೀತಿಯಿರುವ ಮೀನಿನ ಫೋಟೊವನ್ನು ವನ್ಯಜೀವಿ ಸಂರಕ್ಷಣಾ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಪಾಕು ಕುಟುಂಬಕ್ಕೆ ಸೇರಿದ ಈ ಮೀನಿನ ಮೂಲ ದಕ್ಷಿಣ ಆಫ್ರಿಕಾ. ಈ ಮೀನುಗಳು ಸುಮಾರು 3.5 ಅಡಿ ಇದ್ದು 88 ಪೌಂಡ್ ತೂಕ ಇರಲಿದೆ. ಇದು ಸಸ್ಯಾಹಾರಿ ಮೀನಾಗಿದೆ. ಇವು ಮನುಷ್ಯರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದರೆ ಈ ಜಾತಿಯ ಮೀನುಗಳು ಪರಿಸರ ವ್ಯವಸ್ಥೆಗಳಿಗೆ ಹಾನಿ ಉಂಟುಮಾಡುತ್ತವೆ. ಈ ಮೀನುಗಳು ವಿಲಕ್ಷಣ, ಆಕ್ರಮಣಕಾರಿ ಪ್ರಭೇದಗಳಾಗಿವೆ ಎಂದು ಇಲಾಖೆಯು ಮಾಹಿತಿ ನೀಡಿದೆ.

suddiyaana