ಬಣ್ಣದ ಲೋಕಕ್ಕೆ ಮತ್ತೆ ಬಂದ ಐಶು – ರಿಯಾಲಿಟಿ ಶೋಗೆ ಜಡ್ಜ್ ಆಗಿ ಅಮೂಲ್ಯ ಎಂಟ್ರಿ

ಬಣ್ಣದ ಲೋಕಕ್ಕೆ ಮತ್ತೆ ಬಂದ ಐಶು – ರಿಯಾಲಿಟಿ ಶೋಗೆ ಜಡ್ಜ್ ಆಗಿ ಅಮೂಲ್ಯ ಎಂಟ್ರಿ

ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಝೀ ಕನ್ನಡ ವಾಹಿನಿ ಈಗ ನಾವು ನಮ್ಮವರು ರಿಯಾಲಿಟಿ ಶೋ ಮೂಲಕ ಮನರಂಜನೆ ನೀಡಲು ಮುಂದಾಗಿದೆ. ಸಂಬಂಧಗಳು ನಿಜವಾಗಿರೋ ಕಥೆಗಳನ್ನು ಮರೆಯಲಾಗದು. ಪ್ರೀತಿ, ನಗು, ಒಗ್ಗಟ್ಟು ಹಾಗೂ ಬಾಂಧವ್ಯದ ಕ್ಷಣಗಳನ್ನು ಹೊತ್ತು ಬರ್ತಿದೆ ನಾವು ನಮ್ಮವರು.. ಎಂಬ ಪ್ರೊಮೋ ರಿಲೀಸ್ ಮಾಡಲಾಗಿದೆ. ಇದ್ರಲ್ಲಿ ಪ್ರಮುಖವಾಗಿ ವೀಕ್ಷಕರ ಗಮನ ಸೆಳೆದಿದ್ದು ಸ್ಯಾಂಡಲ್‌ವುಡ್‌ ನ ಐಶು.

ಇದನ್ನೂ ಓದಿ:ದರ್ಶನ್‌ ಫ್ಯಾನ್ಸ್‌ Vs ರಮ್ಯಾ ಸಮರ – ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ಮೋಹಕತಾರೆ

ಚೆಲುವಿನ ಚಿತ್ತಾರದ ಐಶು ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.  ನಟಿ ಅಮೂಲ್ಯ 8 ವರ್ಷಗಳ ನಂತರ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಹಾಗಂತ ಅವರು ನಟಿಯಾಗಿ ಬರುತ್ತಿಲ್ಲ, ಜಡ್ಜ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ನಾವು ನಮ್ಮವರು ಶೋನಲ್ಲಿ ಅಮೂಲ್ಯ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋನಲ್ಲಿ ಶರಣ್ ಹಾಗೂ ತಾರಾ ಕೂಡ ಇರಲಿದ್ದಾರೆ.

ಶೋದ ಮತ್ತೊಂದು ಪ್ರೋಮೋ ಹೊರ ಬಂದಿದೆ. ಇಡೀ ಪ್ರೋಮೋ ಟ್ರೈನ್ ನಲ್ಲಿಯೇ ಸಾಗಿದೆ. ನಾವು ನಮ್ಮರು ಶೋ ಪಕ್ಕಾ ಫ್ಯಾಮಿಲಿ ಶೋನೇ ಆಗಿದೆ. ಈ ಶೋದಲ್ಲಿ ಈಗಾಗಲೇ ಹೇಳಿದಂತೆ ಮೂವರು ಜಡ್ಜ್ ಇದ್ದಾರೆ. ಇವರ ಪರಿಚಯವನ್ನ ಟ್ರೈನ್ ಅಲ್ಲಿಯೇ ಮಾಡಲಾಗಿದೆ. ಹೌದು, ಟ್ರೈನ್‌ ಮೂಲಕ ಇಡೀ ಒಂದು ಫ್ಯಾಮಿಲಿ ತನ್ನೂರಿಗೆ ತನ್ನ ಹಳ್ಳಿಗೆ ಬರ್ತಾ ಇರುತ್ತದೆ. ಹಾಗೆ ಈ ಫ್ಯಾಮಿಲಿಯ ಸದಸ್ಯರಾದ ತಾರಾ, ಶರಣ್ ಹಾಗೂ ಅಮೂಲ್ಯ ಫ್ಯಾಮಿಲಿಯ ಮಹತ್ವ ಸಾರುತ್ತಾರೆ. ಈ ಮೂಲಕ ನಾವು ನಮ್ಮವರು ಶೋದ ಕಾನ್ಸೆಪ್ಟ್ ಏನು? ಅದು ಹೇಗೆ ಇರುತ್ತದೆ ಅನ್ನುವ ಮಾಹಿತಿ ಇಲ್ಲಿ ದೊರೆಯುತ್ತದೆ. ಕೊನೆಯಲ್ಲಿ ಈ ಶೋ ಯಾವಾಗಿನಿಂದ ಶುರು ಆಗುತ್ತದೆ. ಯಾವ ಟೈಮ್‌ಗೆ ಬರುತ್ತದೆ ಅನ್ನೋದು ತಿಳಿಯುತ್ತದೆ.

ನಾವು ನಮ್ಮವರ ಶೋ ಇದೇ ಆಗಸ್ಟ್-2 ರಿಂದಲೇ ಶುರು ಆಗುತ್ತಿದೆ. ಶನಿವಾರ ಮತ್ತು ಭಾನುವಾರ ಮಾತ್ರ ಇದು ಪ್ರಸಾರ ಆಗುತ್ತಿದೆ. ರಾತ್ರಿ 9 ಗಂಟೆಗೆ ಇದು ಟೆಲಿಕಾಸ್ಟ್ ಆಗುತ್ತಿದೆ. ಈ ಒಂದು ವಿಶೇಷ ಶೋ ಮೂಲಕವೇ ಅಮೂಲ್ಯ ಮತ್ತೆ ಬಣ್ಣ ಹಚ್ಚಿದ್ದಾರೆ. ಜಡ್ಜ್ ಆಗಿಯೇ ಮನೆ ಮತ್ತು ಮನದಲ್ಲೂ ಮತ್ತೆ ಜಾಗ ಮಾಡಿಕೊಳ್ಳಲಿದ್ದಾರೆ ಅಂತಲೂ ಹೇಳಬಹುದು.

Sulekha