ಕುತಂತ್ರಿ ಅತ್ತೆ ಶಕುಂತಲಾಗೆ ಕ್ಷಮೆ ನೀಡಿದ ಭೂಮಿ – ಗೌತಮ್‌ಗೆ ಅದೃಷ್ಟ ತಂದ ಅಖಿಲಾಂಡೇಶ್ವರಿ ಸಹಾಯ

ಕುತಂತ್ರಿ ಅತ್ತೆ ಶಕುಂತಲಾಗೆ ಕ್ಷಮೆ ನೀಡಿದ ಭೂಮಿ – ಗೌತಮ್‌ಗೆ ಅದೃಷ್ಟ ತಂದ ಅಖಿಲಾಂಡೇಶ್ವರಿ ಸಹಾಯ

ಅಮೃತಧಾರೆ ಸೀರಿಯಲ್‌ನಲ್ಲಿ ಈಗ ಕಥೆಗೊಂದು ಮಹತ್ವ ಬಂದಿದೆ. ಧಾರಾವಾಹಿಗೆ ಅಖಿಲಾಂಡೇಶ್ವರಿಯ ಎಂಟ್ರಿ ಒಂದು ಕಡೆಯಾದರೆ, ಮತ್ತೊಂದು ಕಡೆ ಕುತಂತ್ರಿ ಅತ್ತೆ ಶಕುಂತಲಾಗೆ ಸೊಸೆಯ ಕ್ಷಮೆ ಸಿಕ್ಕಿದೆ.

ಇದನ್ನೂ ಓದಿ:ಕೇಶವನ ಅಪ್ಪುಗೆಗೆ ಮನಸೋತ ಅಪ್ಪ – ನಂದಗೋಕುಲದಲ್ಲಿ ಈಗ ನಮ್ಮ ಸಂಸಾರ ಆನಂದ ಸಾಗರ

ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಮ್ಮೆ ಗೌತಮ್ ದಿವಾನ್ ದರ್ಬಾರ್ ನೋಡುವ ದಿನಗಳು ಹತ್ತಿರವಾಗಿದೆ. ಗೌತಮ್ ತಮ್ಮ ಜೈದೇವ್ ಸಾಲದಿಂದಾಗಿ ಕಂಪನಿ ಮಾರಲು ಮುಂದಾಗಿದ್ದಾನೆ. ಕೇಡಿ ಜೆಡಿಗೆ ಬೆಟ್ಟಿಂಗ್ ಚಟ ಜಾಸ್ತಿ. ಹೀಗಾಗಿ ಸಾಲದ ಮೇಲೆ ಸಾಲ ಮಾಡಿಕೊಂಡಿದ್ದಾನೆ. ನೂರಾರು ಕೋಟಿ ರೂಪಾಯಿಗೆ ಕಂಪನಿ ಅಡ ಇಟ್ಟಿದ ಜೆಡಿ ಈಗ ಅಸಹಾಯಕ ಸ್ಥಿತಿಯಲ್ಲಿದ್ದಾನೆ. ಹೀಗಾಗಿ ಕಂಪನಿಯನ್ನು ಮಾರಲು ಜೈದೇವ್ ಮುಂದಾಗಿದ್ದಾನೆ. ವೀಕ್ಷಕರ ನಿರೀಕ್ಷೆಯಂತೆ ಈ ಕಂಪನಿ ಖರೀದಿಸುವುದು ಮತ್ಯಾರು ಅಲ್ಲ. ಗೌತಮ್ ದೀವಾನ್.

ಗೌತಮ್ ದೀವಾನ್ ಉದ್ಯಮಕ್ಕೆ ಹೂಡಿಕೆ ಮಾಡಲು ಸಹಾಯಕ್ಕೆ ಬರುವ ವ್ಯಕ್ತಿಯಾಗಿ ವಿನಯಾ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಗೌತಮ್ ದೀವಾನ್ ತಮ್ಮ ಉದ್ಯಮ ವಿಸ್ತರಣೆಗೆ ಹಣದ ಸಹಾಯ ಕೇಳಿ ಅಖಿಲಾಂಡೇಶ್ವರಿ ಬಳಿ ಹೋಗುತ್ತಾನೆ. ಆ ಸಮಯಕ್ಕೆ ಸರಿಯಾಗಿ ತಮ್ಮದೇ ಮನೆ ಹರಾಜಿಗೆ ಬಂದಿರೋ ವಿಷಯ ಗೊತ್ತಾಗುತ್ತದೆ. ಆಗ ಅಖಿಲಾಂಡೇಶ್ವರಿ ಬಳಿ ಸಹಾಯ ಕೇಳಿ ಗೌತಮ್ ಹೋಗುತ್ತಾನೆ. ಆಗ ಅಖಿಲಾಂಡೇಶ್ವರಿ ಬ್ಲ್ಯಾಂಕ್ ಚೆಕ್ ಕೊಡುವ ಮೂಲಕ ಅಚ್ಚರಿಗೊಳಿಸುತ್ತಾಳೆ. ಇದೀಗ ಗೌತಮ್ ಬ್ಲ್ಯಾಂಕ್ ಚೆಕ್ ಪಡೆದು ತನ್ನ ಕಂಪನಿ ಉಳಿಸಿಕೊಳ್ಳಲು ಆಗಮಿಸಿದ್ದಾನೆ.

ಮತ್ತೊಂದೆಡೆ ಕುತಂತ್ರಿ ಶಕುಂತಲಾ ಬೀದಿಗೆ ಬಿದ್ದಾಗಿದೆ. ಗೌತಮ್ ಮಲ ತಾಯಿ ಶಕುಂತಲಾ ಕೂಡಾ ಮೈತುಂಬಾ ಸಾಲ ಮಾಡಿಕೊಂಡಿದ್ದಾಳೆಯ ಸಾಲ ಕೊಟ್ಟಿರುವವಳು ಆಕೆಯನ್ನು ಕಿಡ್ನ್ಯಾಪ್ ಮಾಡಿ ಹಿಡಿದಿಟ್ಟುಕೊಂಡಿದ್ದಳು. ಅಲ್ಲಿಂದ ತಪ್ಪಿಸಿಕೊಂಡು ಬಂದ ಶಕುಂತಲಾ ಈಗ ಗೌತಮ್ ಮನೆಗೆ ಬಂದಿದ್ದಾಳೆ. ಅತ್ತೆ ಶಕುಂತಲಾಳನ್ನು ಸೊಸೆ ಭೂಮಿ ಮನೆಯೊಳಗೆ ಕರೆದುಕೊಂಡಿದ್ದಾಳೆ. ಕುತಂತ್ರಿ ಅತ್ತೆಗೆ ಸೊಸೆ ಭೂಮಿಯಿಂದ ಕ್ಷಮೆಯೂ ಸಿಕ್ಕಿದೆ. ಅತ್ತ ಮಲ್ಲಿ ಕೂಡಾ ಸರ್ಕಾರಿ ಉದ್ಯೋಗ ಪಡೆದು ಸೆಟಲ್ ಆಗಿದ್ದಾಳೆ. ಇತ್ತ ಕೇಡಿ ಜೇಡಿ ಬೀದಿಗೆ ಬೀಳುವ ಕ್ಷಣ ಹತ್ತಿರವಾಗಿದೆ.

Sulekha