ಭೂಮಿಕಾ ಪ್ರೆಗ್ನೆಂಟ್ ಕನ್ಫರ್ಮ್! ಶಕುಂತಲಾ ಆಟಕ್ಕೆ ಗೌತಮ್ ಬ್ರೇಕ್

ಶಕುಂತಲಾ ಎಷ್ಟೇ ಕುತಂತ್ರ ಮಾಡಿದ್ರೂ ಗೆಲ್ಲೋದು ಭೂಮಿಕಾನೇ.. ಇದೀಗ ಗೌತಮ್ ಎರಡನೇ ಮದುವೆ ವಿಚಾರದಲ್ಲೂ ಹೀಗೆ ಆಗಿದೆ.. ಆದ್ರೆ ಈ ಬಾರಿ ಶಕುಂತಲಾ ಪ್ಲ್ಯಾನ್ ಉಲ್ಟಾ ಮಾಡಿದ್ದು ಭೂಮಿಕಾ ಅಲ್ಲ ಗೌತಮ್.. ಎರಡನೇ ಬಾರಿಗೆ ಭೂಮಿಕಾಗೆ ತಾಳಿ ಕಟ್ಟಿ.. ಸಾಯೋವರೆಗೂ ಭೂಮಿಕಾ ಮಾತ್ರ ನನ್ನ ಹೆಂಡ್ತಿ ಹೇಳಿದ್ದಾನೆ.. ಈ ಹೊತ್ತಲ್ಲೇ ಭೂಮಿಕಾ ಗುಡ್ನ್ಯೂಸ್ ಕೊಟ್ಟಿದ್ದಾಳೆ. ಹಾಗಾದ್ರೆ ಶಕುಂತಲಾ ಕುತಂತ್ರ ಗೌತಮ್ ಮುಂದೆ ಬಯಲಾಯ್ತಾ? ಡಾಕ್ಟರ್ ಹತ್ರ ಸುಳ್ಳು ಹೇಳಿಸಿದ್ದು ಆತನಿಗೆ ಗೊತ್ತಾಯ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗುಜರಾತ್ ವಿರುದ್ಧ ಮುಂಬೈಗೆ 47 ರನ್ಗಳ ಭರ್ಜರಿ ಜಯ – MI- ಡೆಲ್ಲಿ ನಡುವೆ ಡಬ್ಲ್ಯುಪಿಎಲ್ ಫೈನಲ್
ಅಮೃತಧಾರೆ ಸೀರಿಯಲ್ ಹಳ್ಳಹಿಡಿತಿದೆ ಅಂತಾ ವೀಕ್ಷಕರು ಹೇಳ್ತಿದ್ದಂತೆ ಮತ್ತೆ ಧಾರಾವಾಹಿ ಟ್ರ್ಯಾಕ್ ಗೆ ಬಂದಿದೆ. ಭೂಮಿಕಾಗೆ ಮಗು ಆಗಲ್ಲ ಡಾಕ್ಟರ್ ಹತ್ರ ಶಕುಂತಲಾ ಹೇಳಿಸಿದ್ಲು.. ಅದಾದ್ಮೇಲೆ ಮಧುರಾ ಜೊತೆ ಗೌತಮ್ ಮದುವೆ ಮಾಡಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ಲು.. ಗೌತಮ್ ನ ಕೂಡ ಒತ್ತಾಯ ಮಾಡಿ ಮದುವೆ ಒಪ್ಪಿಸಿದ್ಲು.. ಗೌತಮ್ ಇನ್ನೇನು ತಾಳಿ ಕಟ್ತಾನೆ ಎಂದು ಅಂದ್ಕೊಂಡಿದ್ರು.. ಆದ್ರೆ ಕೊನೆ ಗಳಿಗೆಯಲ್ಲಿ ಶಕುಂತಲಾಗೆ ಗೌತಮ್ ಚಮಕ್ ಕೊಟ್ಟಿದ್ದಾನೆ.. ಮಧುರಾಗೆ ತಾಳಿ ಕಟ್ಟೋ ಬದಲು ಭೂಮಿಕಾಗೇ ಎರಡನೇ ಬಾರಿ ತಾಳಿ ಕಟ್ಟಿದ್ದಾನೆ.. ಗೌತಮ್ ಈರೀತಿ ಮಾಡ್ತಾನೆ ಅಂತಾ ಬೇರೆಯವರು ಬಿಡಿ, ಭೂಮಿಕಾನೂ ಊಹಿಸಿರ್ಲಿಲ್ಲ.. ಗೌತಮ್ ಕೊಟ್ಟ ಶಾಕ್ ಗೆ ಶಕುಂತಲಾ, ಲಕ್ಷ್ಮೀಕಾಂತ್, ಜಯದೇವ್, ಅಪೇಕ್ಷಾಗೆ ಕರೆಂಟ್ ಹೊಡೆದವರಂತೆ ನೋಡ್ತಾ ನಿಂತಿದ್ರು.. ಹೌದು, ಗೌತಮ್ ಗೆ ಎರಡನೇ ಮದುವೆ ಮಾಡಿಸ್ಬೇಕು ಅಂತಾ ಶಕುಂತಲಾ ಹೆಣ್ಣು ಹುಡುಕಿದ್ಲು.. ತಾನು ಹೇಳಿದಂತೆ ಕೇಳವವಳೇ ಬೇಕು ಅಂತಾ ಮಧುರಾಳನ್ನ ಆಯ್ಕೆ ಮಾಡಿದ್ಲು.. ಆದ್ರೆ ಮಧುರಾ ಗೌತಮ್ ಜೊತೆ ಸೇರ್ಕೊಂಡು ಮದುವೆ ಡ್ರಾಮಾ ಮಾಡಿದ್ರು.. ಇದಕ್ಕಾಗಿಯೇ ಗೌತಮ್ ಭೂಮಿಗೆ ಹಳದಿ ಬಣ್ಣದ ಸೀರೆ ಕೊಟ್ಟು, ನನ್ನ ಮದುವೆಗೆ ಈ ಸೀರೆ ಉಟ್ಕೊಳ್ಳಿ ಅಂತ ಸುಳ್ಳು ಹೇಳಿದ್ದ. ಇದೀಗ ನಡೆದಿರೋದನ್ನೆಲ್ಲಾ ಮಧುರಾ ಗೌತಮ್ ಮನೆಯವರ ಮುಂದೆ ಹೇಳಿದ್ದಾರೆ.. ಅಷ್ಟೊತ್ತಿಗೆ ಭೂಮಿಕಾ ಮನೆಯವರಿಗೆಲ್ಲಾ ಸ್ವೀಟ್ ನ್ಯೂಸ್ ಕೊಟ್ಟಿದ್ದಾಳೆ.
ಗೌತಮ್-ಭೂಮಿಕಾ ಮರು ಮದುವೆ ಆಯ್ತು. ಎಲ್ಲವೂ ಸರಿಹೋಯ್ತು.. ಇನ್ನೇನಿದ್ರೂ ಮಗು ಬಗ್ಗೆ ಆಲೋಚನೆ ಮಾಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಭೂಮಿಕಾಗೆ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಗೌತಮ್ ಅವಳನ್ನು ಕೂರಿಸಿ ಏನಾಯ್ತು ಎಂದು ತಲೆಕೆಡಿಸಿಕೊಂಡಿದ್ದಾನೆ. ಅಲ್ಲೇ ಇದ್ದ ಡಾಕ್ಟರ್ ಭೂಮಿಕಾರನ್ನು ಪರೀಕ್ಷಿಸಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ಭೂಮಿಕಾ ತಾಯಿಯಾಗ್ತಿದ್ದಾಳೆ ಅಂತಾ ಹೇಳಿದ್ದಾಳೆ. ಇದ್ರಿಂದ ಮನೆಯವರು ಖುಷಿಯಾಗಿದ್ರೆ ಕುತಂತ್ರಿಗಳು ಫುಲ್ ಶಾಕ್ ಆಗಿದ್ದಾರೆ.
ಭೂಮಿಕಾ-ಗೌತಮ್ ಒಂದಾಗೋದು ಶಕುಂತಲಾಗೆ ಇಷ್ಟ ಇಲ್ಲ. ಅವರು ಒಂದಾಗ್ಬಾರ್ದು ಅಂತಾ ಏನೇನೋ ಮಾಡಿದ್ಲು.. ಆದ್ರೆ ಅದ್ಯಾವ್ದೂ ವರ್ಕೌಟ್ ಆಗಿಲ್ಲ.. ಹೀಗಾಗೇ ಭೂಮಿಕಾ ತಾಯಿ ಆಗೋದು ಕಷ್ಟ ಅಂತ ಶಕುಂತಲಾ ಡಾಕ್ಟರ್ ಹತ್ರ ಸುಳ್ಳು ಹೇಳಿಸಿದ್ದಳು. ಬಳಿಕ ಭೂಮಿಕಾ ಎಮೋಷನ್ ಜೊತೆ ಆಟ ಆಡಿದ್ಲು.. ಆದ್ರೀಗ ಅವಳ ಆಟಕ್ಕೆ ಬ್ರೇಕ್ ಬಿದ್ದಿದೆ. ಭೂಮಿಕಾ ಪ್ರೆಗ್ನೆಂಟ್ ಅನ್ನೋದು ಕನ್ಫರ್ಮ್ ಆಗಿದೆ.. ಹಾಗಾದ್ರೆ ಶಕುಂತಲಾ ಪ್ಲ್ಯಾನ್ ಭೂಮಿಕಾಗೆ ಗೊತ್ತಾಗುತ್ತಾ? ಗೌತಮ್ ಮುಂದೆ ಸತ್ಯ ಬಯಲಾಗುತ್ತಾ? ಸತ್ಯ ಗೊತ್ತಾದ ಗೌತಮ್ ಮುಂದೇನು ಮಾಡ್ತಾನೆ ಅನ್ನೋ ಕ್ಯೂರಿಯಾಸಿಟಿ ಎಲ್ಲರನ್ನ ಕಾಡ್ತಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್ ಭಾರೀ ರೋಚಕತೆಯಿಂದ ಕೂಡಿದೆ.