ಬ್ಯುಸಿನೆಸ್‌ ಲೋಕಕ್ಕೆ ಮತ್ತೆ ಗೌತಮ್‌ ದಿವಾನ್‌ ಎಂಟ್ರಿ! – ಗೌತಮ್‌ ಆರ್ಭಟಕ್ಕೆ ಜೈದೇವ್‌ ಫುಲ್ ಶೇಕ್ ಶೇಕ್!

ಬ್ಯುಸಿನೆಸ್‌ ಲೋಕಕ್ಕೆ ಮತ್ತೆ ಗೌತಮ್‌ ದಿವಾನ್‌ ಎಂಟ್ರಿ! – ಗೌತಮ್‌ ಆರ್ಭಟಕ್ಕೆ ಜೈದೇವ್‌ ಫುಲ್ ಶೇಕ್ ಶೇಕ್!

ಅಮೃತಧಾರೆ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಶಕುಂತಲಾ, ಜೈದೇವ್‌ ಕುತಂತ್ರದಿಂದಾಗಿ ಇಷ್ಟು ದಿನ ದೂರ ಇದ್ದ ಗೌತಮ್‌, ಭೂಮಿಕಾ ಒಂದಾಗಿದ್ದಾರೆ. ಭೂಮಿಕಾ ಸಿಗುತ್ತಿದ್ದಂತೆ ಗೌತಮ್‌ಗೆ ಫುಲ್‌ ಎನರ್ಜಿ ಬಂದಿದೆ. ಇದೀಗ ಗೌತಮ್‌ ಮತ್ತೆ ಬ್ಯುಸಿನೆಸ್‌ ಸಾಮ್ರಾಜ್ಯಕ್ಕೆ ಕಾಲಿಟ್ಟಿದ್ದಾನೆ.

ಇದನ್ನೂ ಓದಿ: ಇದು ಶಾಲೆನಾ.. ಮಸಾಜ್‌ ಪಾರ್ಲರಾ? –  ಕ್ಲಾಸ್‌ನಲ್ಲೇ ಮಕ್ಕಳ ಕೈಯಲ್ಲಿ ಮಸಾಜ್‌ ಮಾಡಿಕೊಂಡ ಶಿಕ್ಷಕಿ!  

ಅಮೃತಧಾರೆ ಸೀರಿಯಲ್‌ನಲ್ಲಿ ಮಹತ್ವ ಬದಲಾವಣೆ ಆಗುವ ಲಕ್ಷಣ ತೋರುತ್ತಿದೆ. ಗೌತಮ್‌ ದಿವಾನ್‌ ಮತ್ತೆ ಕಮ್‌ ಬ್ಯಾಕ್‌ ಆಗುತ್ತಿದ್ದಾನೆ. ಇದೀಗ ಮತ್ತೆ ಬ್ಯುಸಿನೆಸ್‌ ಕ್ಷೇತ್ರಕ್ಕೆ ಕಾಲಿಟ್ಟಿದ್ದಾನೆ. ಗೌತಮ್ ಈ ಬಾರಿ ಆಯ್ಕೆ ಮಾಡಿಕೊಂಡಿರುವುದು ಸ್ಟಾಕ್ ಬ್ರೋಕಿಂಗ್ ಬಿಸಿನೆಸ್. ಶೇರ್ ಮಾರ್ಕೆಟ್ ಅಂದರೆ ನಷ್ಟ ಎನ್ನುವವರ ಮುಂದೆ ಸಾಧಿಸಿ ತೋರಿಸಲು ಗೌತಮ್ ಮುಂದಾಗಿದ್ದಾನೆ. ಈ ಪಯಣದಲ್ಲಿ ಗೌತನ್‌ಗೆ ಭೂಮಿಕಾ ಭರ್ಜರಿ ಸಾಥ್ ನೀಡಿದ್ದಾಳೆ.

ಹೌದು, ಶಕುಂತಲಾ, ಜೈದೇವ್‌ ಎಷ್ಟೇ ಕಾಟ ಕೊಟ್ಟರೂ ಗೌತಮ್‌ ತನ್ನ ಹಾದಿಯನ್ನು ಮರೆತಿಲ್ಲ. ಉದ್ಯಮ ಮಾಡಲು ಆತನು ಸಿದ್ಧನಾಗಿದ್ದಾನೆ. ಬ್ರೋಕರ್ ಆ್ಯಪ್ ಒಂದನ್ನು ಆರಂಭಿಸಿದ್ದಾನೆ. ಇದು ಸದ್ಯ ಸ್ಟಾರ್ಟ್​​ಅಪ್. ಆದರೆ, ಇದನ್ನು ದೊಡ್ಡದಾಗಿ ಬೆಳೆಸುವ ಆಲೋಚನೆ ಆತನಿಗೆ ಇದೆ. ಶೇರ್ ಮಾರ್ಕೆಟ್ ಅಂದ ಕೂಡಲೇ ಭೂಮಿಕಾ ಸ್ವಲ್ಪ ಹೆದರಿದ್ದಾಳೆ. ಇದು ತುಂಬಾನೇ ರಿಸ್ಕ್ ಅಲ್ವಾ ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ ಗೌತಮ್ ತನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿದೆ ಎಂದಿದ್ದಾನೆ. ಇದೀಗ ಆಫೀಸ್‌ ಇನಾಗ್ರೇಷನ್‌ ಕೂಡ ಆಗಿದೆ. ಈ ಸುದ್ದಿ ಟಿವಿಯಲ್ಲಿ ಪ್ರಸಾರವಾಗಿದ್ದು, ಜೈದೇವ್‌ ಶಾಕ್‌ ಆಗಿದ್ದಾನೆ.

ಗೌತಮ್‌ ಬ್ಯುಸಿನೆಸ್‌ ಶುರುಮಾಡುತ್ತಿದ್ದಂತೆ, ಅತ್ತ ಜೈದೇವ್‌ಗೂ ಭಯ ಕಾಡಲು ಶುರುವಾಗಿದೆ. ಇದು ಸ್ಟಾರ್ಟ್​ ಮಾತ್ರವೇ ಆಗಿದೆ ಎಂದು ಆತ ಭಯ ಬಿದ್ದಿದ್ದ. ಆದರೆ, ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಎಂಬುದನ್ನು ಆತ ಸರಿಯಾಗಿ ಬಲ್ಲನು. ಹೀಗಾಗಿ, ಈಗಲೇ ಆತನಿಗೆ ಭಯ ಶುರುವಾಗಿದೆ. ಇನ್ನೊಂದು ಕಡೆ ಗೌತಮ್‌ ಹೊಸ ಉದ್ಯಮ ಶುರು ಮಾಡಿದ್ದರೆ, ಮುಂಬರುವ ದಿನಗಳಲ್ಲಿ ಗೌತಮ್ ದಿವಾನ್ ಅವರ ಹೊಸ ಉದ್ಯಮಕ್ಕೆ ಯಾವ ರೀತಿ ಅಡೆತಡೆಗಳು ಬರುತ್ತವೆ? ಯಾರೆಲ್ಲರ ಕೈವಾಡ ಇದೆ ಎಂಬುದು ಗೊತ್ತಾಗಲಿದೆ.

Shwetha M

Leave a Reply

Your email address will not be published. Required fields are marked *