ಗೆದ್ದ ಶಕುಂತಲಾ.. ಮನೆ ಬಿಟ್ಟ ಭೂಮಿ.. ಪತ್ನಿ ಮಗುಗಾಗಿ ಡ್ರೈವರ್ ಆದ ಗೌತಮ್! – ಅಮೃತಧಾರೆ 5 ವರ್ಷದ ಮೆಗಾ ಟ್ವಿಸ್ಟ್!

ಗೌತಮ್ ಆಸ್ತಿಯನ್ನ ಹೊಡಿಬೇಕು ಅಂತಾ ಶಕುಂತಲಾ ಮಾಡಿದ ಕುತಂತ್ರ ಒಂದೆರಡಲ್ಲ.. ಆತನಿಂದ ತಾಯಿ, ತಂಗಿಯನ್ನ ದೂರ ಮಾಡಿದ್ಲು.. ಅದಾದ ಬಳಿಕ ಭೂಮಿಕಾ ಮೊದಲ ಮಗುವನ್ನ ಕಿಡ್ನ್ಯಾಪ್ ಮಾಡಿಸಿದ್ಲು.. ಭೂಮಿ ಹಾಗೂ ಆಕಾಶ್ ನ ಸಾಯಿಸಲು ಪ್ರಯತ್ನಪಟ್ಟಿದ್ಲು.. ಇದೆಲ್ಲಾ ಗೊತ್ತಾದ ಭೂಮಿಕಾ ಫುಲ್ ರೆಬಲ್ ಆಗಿದ್ಲು.. ಶಕುಂತಲಾಗೆ ಗನ್ ಹಿಡಿದು ಮನೆಗೆ ಬಂದಿದ್ದು ನೋಡಿ, ಇನ್ನೇನು ಸಾಯಿಸೇ ಬಿಡ್ತಾಳೆ ಅಂತಾ ವೀಕ್ಷಕರು ಕೂಡ ಅಂದ್ಕೊಂಡಿದ್ರು.. ಆದ್ರೆ ಅಲ್ಲಾಗಿದ್ದೇ ಬೇರೆ.. ಭೂಮಿಕಾ ಮುಂದೆ ಶಕುಂತಲಾ ಗೆದ್ದಿದ್ದಾಳೆ. ಇದೀಗ ಸೀರಿಯಲ್ ನಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಭೂಮಿಕಾ ಗೌತಮ್‌ನಿಂದ ದೂರವಾಗಿದ್ದಾಳೆ. ಸೀರಿಯಲ್ ಸ್ಟೋರಿ ಕೂಡ 5 ವರ್ಷ ಮುಂದೆ ಹೋಗಿದೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಹಾಲಿವುಡ್ ಹೀರೋ ಸ್ಟೈಲ್ ಲುಕ್ – ಏಷ್ಯಾಕಪ್ ಟೂರ್ನಿಗೂ ಮುನ್ನ ಪಾಂಡ್ಯ ಬಿಂದಾಸ್
ಅಮೃತಧಾರೆ ಸೀರಿಯಲ್ ಸ್ಟೋರಿಯಲ್ಲಿ ಈಗ ಮೆಗಾ ಟ್ವಿಸ್ಟ್ ಎದುರಾಗಿದೆ. ಆಸ್ತಿಗಾಗಿ ಶಕುಂತಲಾ ಗೌತಮ್ ಮುಂದೆ ಮಾಡಿದ ಡ್ರಾಮಾ ಒಂದೆರಡಲ್ಲ.. ಮಗ ಮಗ ಅಂತ ಹೇಳ್ಕೊಂಡು ಗೌತಮ್ ನಿಂದ ಎಲ್ಲರನ್ನ ದೂರ ಮಾಡ್ತಾ ಬಂದಿದ್ಲು.. ಆದ್ರೆ ಭೂಮಿಕಾ ಬಂದ್ಮೇಲೆ ಶಕುಂತಲಾ ಪ್ಲ್ಯಾನ್ ಎಲ್ಲಾ ಉಲ್ಟಾ ಆಗ್ತಿತ್ತು.. ಹೀಗಾಗಿ ಆಕೆ ಭೂಮಿಕಾಳನ್ನೇ ಮುಗಿಸಲು ಹೊರಟಿದ್ಲು.. ತನ್ನನ್ನ, ಮಗುವನ್ನ ಸಾಯಿಸಲು ಮುಂದಾಗಿದ್ದು ಶಕುಂತಲಾ ಅನ್ನೋದು ಗೊತ್ತಾಗ್ತಿದ್ದಂತೆ ಭೂಮಿಕಾ ಫುಲ್ ರೆಬಲ್ ಆಗಿದ್ಲು.. ಕಾಡಿನಿಂದ ಮನೆಗೆ ಬಂದ ಭೂಮಿಕಾ, ಶಕುಂತಲಾ ಹಣೆಗೆ ಗನ್ ಹಿಡಿದಿದ್ಲು.. ಭೂಮಿಕಾ ರೌದ್ರಾವತಾರ ನೋಡಿ ಶಕುಂತಲಾ ಕೂಡ ಬೆಚ್ಚಿ ಬಿದ್ದಿದ್ಲು.. ಇನ್ನೇನು ಭೂಮಿ ಶಕುಂತಲಾ ಹಣೆಗೆ ಶೂಟ್ ಮಾಡ್ತಾಳೆ.. ಶತ್ರು ಸಂಹಾರ ಆಗುತ್ತೆ ಅಂತಾ ಸೀರಿಯಲ್ ಫ್ಯಾನ್ಸ್ ಕೂಡ ಅಂದ್ಕೊಂಡಿದ್ರು. ಆದ್ರೆ ಅಲ್ಲಾಗಿದ್ದೇ ಬೇರೆ. ಶಕುಂತಲಾ ಹೆರಿಗೆ ಸಮಯದಲ್ಲಿ ಏನೆಲ್ಲಾ ಆಯ್ತು.. ಮೊದಲ ಮಗು ಕಿಡ್ನ್ಯಾಪ್ ಆಗಿದೆ.. ಗೌತಮ್ ಗೂ ಇದೆಲ್ಲಾ ಸತ್ಯ ಗೊತ್ತಾಗಿದೆ ಅಂತಾ ಹೇಳಿದ್ದಾಳೆ. ಶಕುಂತಲಾ ಮಾತು ಕೇಳಿದ ಭೂಮಿಕಾ ಕುಗ್ಗಿ ಹೋಗಿದ್ದಾಳೆ. ಹೇಗಾದ್ರೂ ಮಾಡಿ ಶಕುಂತಲಾ ಆಟಕ್ಕೆ ಭೂಮಿ ಬ್ರೇಕ್ ಅಂದ್ಕೊಂಡ್ರೆ ಸೀರಿಯಲ್ ಡೈರೆಕ್ಟರ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.. ಇದೀಗ ಭೂಮಿ ಒಳ್ಳೆತನದ ಮುಂದೆ ಶಕುಂತಲಾ ಕುತಂತ್ರವೇ ಗೆದ್ದಿದೆ.. ಭೂಮಿ ಗೌತಮ್‌ನಿಂದ ದೂರವಾಗಿದ್ದಾಳೆ..
ಹೌದು ಅಮೃತಧಾರೆ ಸೀರಿಯಲ್ ಸ್ಟೋರಿ ಮಹಾ ತಿರುವು ಪಡೆದುಕೊಂಡಿದೆ. ಇದೀಗ ಸೀರಿಯಲ್ ಸ್ಟೋರಿ 5 ವರ್ಷ ಮುಂದಕ್ಕೆ ಹೋಗಿದೆ. ಇದ್ರ ಪ್ರೋಮೋ ರಿಲೀಸ್ ಆಗಿದೆ. ಶಕುಂತಲಾ ಭೂಮಿಕಾ ಬಳಿ ಬಂದು.. ನಿನಗೆ ಹುಟ್ಟಿರೋದು 2 ಮಕ್ಕಳು.. ಆ ವಿಷಯ ಗೌತಮ್ ಗೂ ಗೊತ್ತಿದೆ. ಅದ್ರಲ್ಲಿ ಒಂದು ಮಗು ಕಣ್ಣು ಬಿಡೋಕು ಮುಂಚೆನೇ ಮುಗಿಸಿದ್ದೇನೇ.. ಅವನೇ ಇದನ್ನ ನಿನ್ನಿಂದ ಮುಚ್ಚಿಟ್ಟಿದ್ದಾನೆ. ಇನ್ನೊಂದು ಮಗುವನ್ನ ನಿನ್ನ ಕಣ್ಣ ಮುಂದೆಯೇ ಮುಗಿಸ್ಬೇಕು ಅಂತಾ ನಾನು ಅಂದ್ಕೊಂಡಿದ್ದೀನಿ.. ನಿನಗೆ ಈ ಮಗು ಮೇಲೆ ಆಸೆ ಇದ್ರೆ ಈ ಮನೆಯಿಂದ ತೊಲಗು ಅಂತಾ ಹೇಳಿದ್ದಾಳೆ. ಶಕುಂತಲಾ ಮಾತಿನಿಂದ ಕುಗ್ಗಿರೋ ಭೂಮಿಕಾ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾಳೆ. ಬಳಿಕ ದೇವರ ಮೇಲೆ ಭಾರ ಹಾಕಿ ಮನೆ ಬಿಟ್ಟು ಹೋಗಿದ್ದಾಳೆ.. ಗೌತಮ್ ನಿಂದ ಭೂಮಿಲಾ ದೂರ ಆದ್ಲು.. ಇನ್ನು ಶಕುಂತಲಾ ಅಟ್ಟಹಾಸ ಜೋರಾಗುತ್ತೆ ಅನ್ನುವಷ್ಟರಲ್ಲಿ ಸೀರಿಯಲ್ ಡೈರೆಕ್ಟರ್ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಭೂಮಿಕಾ ಮನೆಬಿಟ್ಟು ಹೋಗ್ತಿದ್ದಂತೆ ಶಕುಂತಲಾ, ಜೈದೇವ್ ಸಂಭ್ರಮಿಸಿದ್ದಾರೆ. ತನ್ನ ಮಾತು ಕೇಳಿ ಭೂಮಿಕಾ ಮನೆಬಿಟ್ಟು ಹೋದ್ಲು.. ಇನ್ನು ಗೌತಮ್ ನಾನು ಹಾಕೋ ತಾಳಕ್ಕೆ ಕುಣಿಯೋ ಗೊಂಬೆ ಅಂತಾ ಹೇಳಿದ್ದಾಳೆ.. ಇದನ್ನ ಗೌತಮ್ ಮರೆಯಲ್ಲಿ ನಿಂತು ಕೇಳಿಸಿಕೊಂಡಿದ್ದಾನೆ. ಬಳಿಕ..ವಾವ್ಹ್.. ನಿಮ್ಮನ್ನ ಹೆತ್ತ ತಾಯಿ ಅಂದ್ಕೊಂಡಿದ್ದೆ.. ಆದ್ರೆ ನೀವು ಪ್ರೀತಿ ಅಂತಾ ಹೇಳಿ ವಿಷವುಣಿಸಿದ್ದೀರಾ.. ನೀವು ಇಷ್ಟೆಲ್ಲಾ ಮಾಡಿದ್ದು ಈ ಕರಗೋ ಆಸ್ತಿಗಾಗಿ ಅಲ್ವಾ ಅಂತಾ ಹೇಳಿ ಆಸ್ತಿ ಪತ್ರವನ್ನ ಮುಖಕ್ಕೆ ಎಸೆದ್ದಿದ್ದಾನೆ.. ನನಗೆ ಬೇಕಿರೋದು ಕರಗದೇ ಇರೋ ಪ್ರೀತಿ.. ಅದು ಭೂಮಿಕಾ ಬಳಿ ಮಾತ್ರ ಸಿಗೋದು ಅಂತಾ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾನೆ. ಬಳಿಕ ಗೌತಮ್ ಪ್ರತ್ಯಕ್ಷವಾಗಿದ್ದು ಕಾರ್ ಡ್ರೈವರ್ ಆಗಿ.. ಅದು ಕೂಡ 5 ವರ್ಷದ ಬಳಿಕ.. ಮಡಿಕೇರಿಯಲ್ಲಿ ಮಗ ಆಕಾಶ್ ಗೌತಮ್ ಕಾರ್ ಗೆ ಅಡ್ಡ ಬಂದಿದ್ದಾನೆ. ಈ ವೇಳೆ ಭೂಮಿಕಾ ಕೂಡ ಅಲ್ಲಿಗೆ ಬಂದಿದ್ದಾಳೆ.. ಇಬ್ಬರು ಕೂಡ ಮುಖಾಮುಖಿಯಾಗಿದ್ದಾರೆ.. ಹಾಗಾದ್ರೆ ದೂರವಾಗಿದ್ದ ಈ ಜೋಡಿ ಮತ್ತೆ ಸಿಗುತ್ತಾ? ಮೊದಲ ಮಗು ಕೂಡ ಸಿಗುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿಸಿದೆ. ಒಟ್ಟಾರೆ ಮುಂದಿನ ಎಪಿಸೋಡ್ ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ..

ನೋಡಿರಿ

