ಭೂಮಿಕಾ ಶಕುಂತಲಾ ವಾರ್! – ಅಮೃತಧಾರೆಗೆ ನಟಿ ಗುಡ್‌ಬೈ?
ಸೀರಿಯಲ್‌ನಲ್ಲೇ ಕ್ಲೂ ಕೊಟ್ಟ ಭೂಮಿ!

ಅಮೃತಧಾರೆ ಸೀರಿಯಲ್‌ನಲ್ಲಿ ಈಗ ಅತ್ತೆ ಸೊಸೆ ವಾರ್ ಜೋರಾಗಿದೆ. ಕುತಂತ್ರಿ ಶಕುಂತಲಾ ಕೆಟ್ಟವಳು.. ಆಕೆಯಿಂದ ಮನೆಯವರಿಗೆ ತೊಂದರೆ ಇದೆ ಎಂದು ಗೊತ್ತಾಗ್ತಿದ್ದಂತೆ ಭೂಮಿಕಾ ರೆಬಲ್ ಆಗಿದ್ದಾಳೆ. ಗೌತಮ್ ತನ್ನ ಮಾತು ನಂಬದಿದ್ರೂ ಭೂಮಿಕಾ ಅವಳದ್ದೇ ಸ್ಟೈಲ್‌ನಲ್ಲಿ ಶಕುಂತಲಾಗೆ ಪಾಠ ಕಲಿಸ್ತಾ ಇದ್ದಾಳೆ. ಇದೀಗ ಅಮೃತಧಾರೆ ಸೀರಿಯಲ್ ಗೆ ನಟಿಯೊಬ್ರು ಗುಡ್‌ಬೈ ಹೇಳ್ತಿದ್ದಾರಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಇದೀಗ ಸೀರಿಯಲ್‌ನಲ್ಲೇ ಭೂಮಿಕಾ ಈ ಬಗ್ಗೆ ಗುಟ್ಟು ಬಿಚ್ಚಿಟ್ಟಿದ್ದಾಳೆ.
ಇದನ್ನೂ ಓದಿ: INDಗೆ ಆಫ್ಘನ್ ಸ್ಪಿನ್ ಚಕ್ರವ್ಯೂಹ – ಭಾರತದ ವೀಕ್ ನೆಸ್ IPLನಲ್ಲಿ ರಿವೀಲ್?
ಅಮೃತಧಾರೆ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಒಂದ್ಕಡೆ ಗೌತಮ್ ಮೊದಲ ಮಗುವಿನ ಹುಡುಕಾಟದಲ್ಲಿದ್ರೆ, ಮತ್ತೊಂದ್ಕಡೆ ಭೂಮಿಕಾ ತನ್ನವರಿಗಾಗಿ ಫುಲ್ ರೆಬಲ್ ಆಗಿದ್ದಾಳೆ. ಹೆಜ್ಜೆ ಹೆಜ್ಜೆಗೂ ಕುತಂತ್ರಿಗಳಿಗೆ ಪಾಠ ಕಲಿಸ್ತಾ ಇದ್ದಾಳೆ. ಶಕುಂತಲಾ ಕೆಟ್ಟವಳು, ತನ್ನನ್ನ ಸಾಯಿಸಲು ಪ್ರಯತ್ನಪಟ್ಲು ಅಂತಾ ಭೂಮಿಕಾ ಸಾಕ್ಷಿ ಸಮೇತ ಗೌತಮ್ ಗೆ ಹೇಳಿದ್ರೂ ಅದನ್ನ ಆತ ನಂಬಿಲ್ಲ.. ಚಿಕ್ಕಮ್ಮ ಒಳ್ಳೆಯವಳು ಅಂತಾ ವಾದಿಸಿದ್ದ.. ಅದಾದ ಬಳಿಕ ಗೌತಮ್‌ನಿಂದ ಭೂಮಿಕಾಳನ್ನ ದೂರ ಮಾಡ್ಬೇಕು ಅಂತಾ ಗೌತಮ್ ಫಾರಿನ್‌ಗೆ ಹೊರಟಾಗಲು ಶಕುಂತಲಾ ಪಾಸ್‌ಪೋರ್ಟ್‌ನ ಅಡಗಿಸಿ ಇಟ್ಟಿದ್ಲು. ಇದ್ರಿಂದ ಗೌತಮ್ ಭೂಮಿಕಾ ಮಧ್ಯೆ ಬಿರುಕು ಮೂಡುತ್ತೆ ಅಂತಾ ಅಂದ್ಕೊಂಡಿದ್ಲು. ಆದ್ರೆ ಆ ಪ್ಲ್ಯಾನ್ ಕೂಡ ಠುಸ್ ಆಯ್ತು.. ಯಾಕಂದ್ರೆ ಗೌತಮ್ ಹೋಗ್ಬೇಕಿದ್ದ ಪ್ಲೇಸ್‌ನಲ್ಲಿ ದೊಡ್ಡ ಅವಘಡ ಸಂಭವಿಸಿತ್ತು. ಇದ್ರಿಂದಾಗಿ ಗೌತಮ್ ಬಚಾವ್ ಆಗಿದ್ದ. ಇದ್ರಿಂದಾಗಿ ಭೂಮಿಕಾ ಮೇಲೆ ಕೋಪ ಮಾಡಿಕೊಂಡಿದ್ರೂ ಬಳಿಕ ಪ್ಯಾಚ್‌ಅಪ್ ಮಾಡಿಕೊಂಡಿದ್ದ ಗೌತಮ್.. ಆದ್ರೀಗ ಭೂಮಿಕಾ ಶಕುಂತಲಾಗೆ ಮಾತ್ರವಲ್ಲ ಫ್ಯಾನ್ಸ್‌ಗೂ ಶಾಕ್ ಕೊಟ್ಟಿದ್ದಾಳೆ.
ಹೌದು, ಶಕುಂತಲಾ ಮನೆಯಲ್ಲಿದ್ದರಿಗೆಲ್ಲಾ ಕೆಟ್ಟದ್ದು ಮಾಡ್ತಾ ಬಂದಿದ್ದಾಳೆ ಅನ್ನೋದು ಭೂಮಿಕಾಗೆ ಗೊತ್ತಿದೆ. ಸುಧಾ ಹಾಗೂ ಸೃಜನ್ ಕೂಡ ಇದೇ ಮನೆಯಲ್ಲಿದ್ರೆ ಅವರಿಗೂ ತೊಂದರೆ ಫಿಕ್ಸ್.. ಹೀಗಾಗಿ ಸುಧಾ ಹಾಗೂ ಸೃಜನ್ ನ ಬೇರೆ ಮನೆಗೆ ಕಳುಹಿಸೋ ಪ್ಲ್ಯಾನ್ ಮಾಡಿದ್ದಾಳೆ ಭೂಮಿಕಾ.. ಭೂಮಿ ನಿರ್ಧಾರಕ್ಕೆ ಗೌತಮ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ. ಆದ್ರೀಗ ಹೊಸ ಮ್ಯಾಟರ್ ವೊಂದು ರಿವೀಲ್ ಆಗಿದೆ. ಇದೀಗ ಸುಧಾ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟಿ ಸೀರಿಯಲ್ ಬಿಡ್ತಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.
ಹೌದು, ಗೌತಮ್ ತಂಗಿಯಾಗಿ ಮೇಘಾ ಶೆಣೈ ಅಮೃತಧಾರೆ ಸೀರಿಯಲ್‌ನಲ್ಲಿ ನಟಿಸ್ತಾ ಇದ್ದಾರೆ. ಸುಧಾ -ಸೃಜನ್ ಜೋಡಿಯನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ. ಆದ್ರೀಗ ಮೇಘಾ ಸೀರಿಯಲ್ ಬಿಡ್ತಿದ್ದಾರೆ ಅನ್ನೋ ಮಾತು ಕಳೆದ ಕೆಲವು ದಿನಗಳಿಂದ ಕಿರುತೆರೆ ವಲಯದಲ್ಲಿ ಜೋರಾಗಿ ಸದ್ದು ಮಾಡ್ತಿದೆ. ನಟಿ ಸೀರಿಯಲ್ ಬಿಡಲು ಕಾರಣವೇನು ಅನ್ನೋದು ಕೂಡ ರಿವೀಲ್ ಆಗಿದೆ. ಮೇಘಾ ಶೆಣೈ ಜೀವನದ ಹೊಸ ಅಧ್ಯಾಯವನ್ನು ಶುರು ಮಾಡಲು ತಯಾರಾಗಿ ನಿಂತಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ರು. ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗ್ತಿದೆ. ಇದೇ ಕಾರಣಕ್ಕೆ ನಟಿ ಸೀರಿಯಲ್ ಬಿಡ್ತಾರೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ನಟಿ ಆಗ್ಲೀ, ಜೀಕನ್ನಡ ವಾಹಿನಿ ಆಗ್ಲೀ ಯಾವುದೇ ಅಪ್‌ಡೇಟ್ ಕೊಟ್ಟಿಲ್ಲ. ಮದುವೆಗಾಗಿ ಮೇಘಾ ಸೀರಿಯಲ್‌ನಿಂದ ಬ್ರೇಕ್ ತೆಗೆದುಕೊಳ್ತಾರಾ ಅಥವಾ, ಸೀರಿಯಲ್ ಬಿಡ್ತಾರಾ ಅನ್ನೋದ್ರ ಬಗ್ಗೆ ಅಪ್‌ಡೇಟ್ ನೀಡ್ತಾರಾ ಅಂತಾ ಕಾದು ನೋಡ್ಬೇಕು.

ನೋಡಿರಿ

