ಗೌತಮ್ ಮಗು ಮತ್ತೆ ಕಿಡ್ನ್ಯಾಪ್.. ಭೂಮಿಕಾ ಮುಂದೆ ಮಗು ರಹಸ್ಯ ರಿವೀಲ್! – ಶಕುಂತಲಾ ಆಟ.. ಭೂಮಿ ಗೌತಮ್ ದೂರ!

ಅಮೃತಧಾರೆ ಸೀರಿಯಲ್‌ನಲ್ಲಿ ಈಗ ಅತ್ತೆ ಸೊಸೆ ವಾರ್ ಜೋರಾಗಿದೆ. ಶಕುಂತಲಾ ನೀಚ ಬುದ್ದಿಯನ್ನ ಬಯಲು ಮಾಡಲು ಮಾಡಲು ಭೂಮಿಕಾ ಪಣತೊಟ್ಟಿದ್ದಾಳೆ.. ಆದ್ರೆ ಶಕುಂತಲಾ ಜೈದೇವ್ ಜೊತೆ ಸೇರಿಕೊಂಡು ಭೂಮಿ ಚಾಪ್ಟರ್ ಕ್ಲೋಸ್ ಮಾಡಲು ಹೊರಟಿದ್ದಾಳೆ. ಆದ್ರೀಗ ಕಿಡ್ನ್ಯಾಪ್ ಆಗಿದ್ದ ಹೆಣ್ಣು ಮಗು ಗೌತಮ್ ಕೈಸೇರಿದೆ.. ಆದ್ರೆ ಆ ಮಗು ದಿವಾನ್ ಮನೆಗೆ ಸೇರೋದು ಡೌಟ್ ಅಂತಾ ವೀಕ್ಷಕರು ಹೇಳ್ತಿದ್ದಾರೆ. ಯಾಕಂದ್ರೆ ಗೌತಮ್ ಮಗಳನ್ನ ಮನೆಗೆ ಕರ್ಕೊಂಡು ಬರಲು ಸಾಲು ಸಾಲು ಸವಾಲುಗಳಿವೆ.
ಇದನ್ನೂ ಓದಿ: ರಜನಿಕಾಂತ್ ಕೂಲಿ ಸಿನಿಮಾ ಟಿಕೆಟ್ ದರ 2,000 ರೂ! – ಚಿತ್ರ ತಂಡಕ್ಕೆ ಶಾಕ್ ಕೊಡುತ್ತಾ ಸರ್ಕಾರ?
ಅಮೃತಧಾರೆ ಸೀರಿಯಲ್ ಸ್ಟೋರಿ ಈಗ ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ. ಭೂಮಿಕಾ ಹಾಗೂ ಭಾಗ್ಯಳನ್ನ ಮುಗಿಸ್ಬೇಕು ಅಂತಾ ಶಕುಂತಲಾ, ಜೈದೇವ್ ಒಂದಾದ ಮೇಲೊಂದು ಷಡ್ಯಂತರ ಮಾಡ್ತಾನೆ ಇದ್ದಾರೆ.. ಆದ್ರೆ ಲಕ್ ಭೂಮಿಕಾ, ಭಾಗ್ಯ ಕಡೆ ಇರೋದ್ರಿಂದ ಕುತಂತ್ರಿಗಳ ಆಟ ನಡಿತಾ ಇಲ್ಲ. ಇದೀಗ ಶಕುಂತಲಾ ಹಾಗೂ ಜೈದೇವ್ ಬಂಡವಾಳ ಬಯಲು ಮಾಡಲು ಸೃಜನ್ ಕೂಡ ಭೂಮಿಕಾ ಜೊತೆ ಕೈ ಜೋಡಿಸಿದ್ದಾನೆ. ಇದೀಗ ಕುತಂತ್ರಿಗಳಿಗೆ ಸೋಲಾಗೋದು ಫಿಕ್ಸ್. ಆದ್ರೀಗ ಶಕುಂತಲಾ ಬಣ್ಣ ಬಯಲು ಮಾಡಲು ಹೋಗಿ ಭೂಮಿಕಾಗೆ ಮತ್ತೊಂದು ಮಹಾ ರಹಸ್ಯ ಗೊತ್ತಾಗೋದು ಫಿಕ್ಸ್..
ಶಕುಂತಲಾ ದುಡ್ಡಿಗಾಗಿ ಏನ್ ಬೇಕಾದ್ರೂ ಮಾಡ್ತಾಳೆ.. ಗೌತಮ್ ಇಷ್ಟು ಸ್ವಂತ ತಾಯಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದ ಗೌತಮ್ ಅನ್ನೇ ಕೀಳಾಗಿ ನೋಡ್ತಿದ್ದಾಳೆ, ಆತನ ಆಸ್ತಿಗಾಗಿ ಹೊಂಚು ಹಾಕಿ ಕೂತಿದ್ದಾಳೆ. ಆದ್ರೆ ಇದ್ಯಾವುದರ ಅರಿವು ಗೌತಮ್‌ಗೆ ಇಲ್ಲ.. ಶಕುಂತಲಾ ಏನೇ ಡ್ರಾಮಾ ಮಾಡಿದ್ರು ಆತ ನಂಬುತ್ತಾನೆ.. ಆದ್ರೆ ಭೂಮಿಕಾ ಬಂದ್ಮೇಲೆ ಶಕುಂತಲಾ ಆಟ ನಡಿತಾ ಇಲ್ಲ.. ಆಕೆ ಪ್ಲ್ಯಾನ್ ಎಲ್ಲಾ ಉಲ್ಟಾ ಆಗ್ತಿದೆ. ಶಕುಂತಲಾ ಏನು ಅನ್ನೋದು ಭೂಮಿಕಾಗೂ ಗೊತ್ತಾಗಿದೆ. ಗೌತಮ್‌ನನ್ನು ಶಕುಂತಲಾ ನಾಯಿ ಅಂತ ಕೂಡ ಕರೆದಿದ್ದಳು. ಗಂಡನನ್ನ ಕೀಳಾಗಿ ನೋಡಿದ್ದಕ್ಕೆ ಭೂಮಿಕಾ ಶಕುಂತಲಾಗೆ ಕಪಾಳಮೋಕ್ಷ ಕೂಡ ಮಾಡಿದ್ಲು. ಇದೀಗ ಭೂಮಿಕಾ ವಿರುದ್ಧ ಶಕುಂತಲಾ ದೊಡ್ಡದಾಗೇ ಸಂಚು ರೂಪಿಸೋ ಸಾಧ್ಯತೆ ಇದೆ.
ಮತ್ತೊಂದ್ಕಡೆ ಭೂಮಿಕಾ ಮೊದಲ ಮಗುವನ್ನ ಜೈದೇವ್ ಹಾಗೂ ಶಕುಂತಲಾ ಸೇರಿಕೊಂಡು ಕಿಡ್ನ್ಯಾಪ್ ಮಾಡಿದ್ರು. ಗೌತಮ್ ಹಾಗೂ ಆನಂದ್ ಸೇರಿಕೊಂಡು ಹುಡುಕ್ತಾ ಇದ್ದಾರೆ. ಇದೀಗ ಅನಾಥ ಆಶ್ರಮಕ್ಕೆ ಒಂದು ಹೆಣ್ಣು ಮಗು ಸಿಕ್ಕಿದೆ ಎಂದು ಗೌತಮ್‌ಗೆ ಫೋನ್ ಬಂದಿದೆ. ಗೌತಮ್ ಅಲ್ಲಿಗೆ ಹೋಗಿ ಮಗುವನ್ನ ಮುದ್ದಾಡಿದ್ದಾನೆ. ಆದ್ರೆ ಆ ಮಗು ಗೌತಮ್ ಭೂಮಿಕಾರದ್ದೇ ಅನ್ನೋದು ಕನ್ಫರ್ಮ್ ಆಗಿಲ್ಲ. ಪೊಲೀಸರು ಇನ್ನೂ ಒಂದು ವಾರ ಆ ಮಗು ಅನಾಥಾಶ್ರಮದಲ್ಲಿ ಇರುತ್ತೆ. ಡಿಎನ್‌ಎ ಟೆಸ್ಟ್ ಮಾಡಿಸ್ಬೇಕು ಅಂತಾ ಹೇಳಿದ್ದಾರೆ. ಇದೀಗ ಡಿಎನ್‌ಎ ಟೆಸ್ಟ್ ರಿಪೋರ್ಟ್‌ನಲ್ಲಿ ಆ ಪುಟಾಣಿ ಗೌತಮ್ ಮಗಳು ಅನ್ನೋದು ಪಕ್ಕಾ ಆದರೆ ಮಾತ್ರ ಆ ಮಗು ಗೌತಮ್ ಮನೆ ಸೇರಲಿದೆ. ಆದ್ರೆ ಮಗು ಗೌತಮ್‌ಗೆ ಸಿಕ್ಕಿದೆ ಅಂತಾ ಗೊತ್ತಾದ್ರೆ ಶಕುಂತಲಾ- ಜೈದೇವ್ ಸುಮ್ಮನಿರೋದು ಡೌಟ್. ಏನಾದರೂ ಮಾಡಿ ಗೌತಮ್‌ನಿಂದ ಆ ಮಗುವನ್ನು ಮತ್ತೆ ದೂರ ಮಾಡಬಹುದು. ಹೀಗಾಗಿ ಮಗಳು ಸಿಕ್ಕಿದ್ರೂ ಕೂಡ ಇಷ್ಟು ಬೇಗ ಗೌತಮ್ ಮನೆ ಸೇರೋದು ಡೌಟ್..
ಮತ್ತೊಂದ್ಕಡೆ ಭೂಮಿಕಾಗೆ ತಾನು ಜನ್ಮ ನೀಡಿರುವುದು ಅವಳಿ ಮಕ್ಕಳಿಗೆ ಅನ್ನೋದು ಇನ್ನೂ ಗೊತ್ತಿಲ್ಲ.. ಸೃಜನ್ ಶಕುಂತಲಾ ಫೋನ್ ಟ್ಯಾಪ್ ಮಾಡಿದ್ದಾನೆ. ಶಕುಂತಲಾ ಹೆಣ್ಣು ಮಗುವಿನ ಬಗ್ಗೆ ಜೈದೇವ್ ಜೊತೆ ಮಾತಾಡಿದ್ರೆ ಇದು ಭೂಮಿಕಾ ಗೊತ್ತಾಗಲಿದೆ. ಇದೇ ವಿಚಾರ ಇಟ್ಕೋಂಡು ಭೂಮಿಕಾ-ಗೌತಮ್ ಮಧ್ಯೆ ಶಕುಂತಲಾ ಬಿರುಕು ತರೋ ಸಾಧ್ಯತೆ ಇದೆ. ಒಟ್ಟಿನಲ್ಲಿ ಅಮೃತಧಾರೆ ಸೀರಿಯಲ್ ಮುಂಬರುವ ಎಪಿಸೋಡ್ ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ.

ನೋಡಿರಿ

