ಗೌತಮ್, ಭೂಮಿಗೆ ಅವಳಿ ಮಕ್ಕಳು.. ಮೊದಲ ಮಗು ಹೆಣ್ಣು.. 2ನೇ ಮಗು? – ದಿವಾನ್ ಕುಡಿ ಜೈದೇವ್ ಕೈಯಲ್ಲಿ?

ಗೌತಮ್ ಭೂಮಿಕಾಗೆ ಮಗು ಆಗ್ಬಾರ್ದು ಅಂತಾ ಕುತಂತ್ರಿ ಶಕುಂತಲಾ ಏನೇನೋ ಪ್ಲ್ಯಾನ್ ಮಾಡಿದ್ಲು.. ಆದ್ರೆ ಅದ್ಯಾವುದೂ ಸಕ್ಸಸ್ ಆಗ್ತಿಲ್ಲ.. ಎಲ್ಲಾ ಸವಾಲನ್ನ ಫೇಸ್ ಮಾಡಿರೋ ಭೂಮಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ಆ ಮಗುವನ್ನೂ ಜೈದೇವ್ ಶಕುಂತಲಾ ಸೇರ್ಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ.. ಮಗು ಇಲ್ಲ ಅನ್ನೋ ನೋವಲ್ಲಿ ಗೌತಮ್ ಗೋಳಾಡ್ತಿದ್ದಾನೆ.. ಆದ್ರೀಗ ಸೀರಿಯಲ್ ಡೈರೆಕ್ಟರ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಇದೀಗ ಭೂಮಿಕಾಗೆ ಅವಳಿ ಮಕ್ಕಳಾಗಿದೆ. ಎರಡನೇ ಮಗುವನ್ನ ಉಳಿಸಲು ಡಾ. ಕರ್ಣ ಹಾಗೂ ಪಾರು ಒದ್ದಾಡ್ತಿದ್ದಾರೆ.. ಆದ್ರೀಗ ಶಕುಂತಲಾ ಮತ್ತಿನ್ನೇನೋ ಪ್ಲ್ಯಾನ್ ಮಾಡಿದ್ದಾಳೆ. ಅಷ್ಟಕ್ಕೂ ಸೀರಿಯಲ್‌ನಲ್ಲಿ ಮುಂದೇನು ಟ್ವಿಸ್ಟ್ ಕಾದಿದೆ.
ಇದನ್ನೂ ಓದಿ: ಕರುನಾಡ ಚಕ್ರವರ್ತಿ ಶಿವಣ್ಣನಿಗೆ 63ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳ ಅಭಿಮಾನಕ್ಕೆ ಬೆರಗಾದ ಶಿವರಾಜ್ ಕುಮಾರ್
ಅಮೃತಧಾರೆ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಸೀರಿಯಲ್ ಡೈರೆಕ್ಟರ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾನೆ ಇದ್ದಾರೆ. ಇದು ವೀಕ್ಷಕರಿಗೆ ಇಷ್ಟವಾಗ್ತಿದೆ.. ಭೂಮಿಕಾಗೆ ಮಗು ಹುಟ್ಟಬಾರದು ಎಂದು ಜಯದೇವ್ ಹಾಗೂ ಶಕುಂತಲಾ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕಾರಣ ಆಸ್ತಿ. ಹೀಗಾಗಿ ಭೂಮಿಕಾ ಪ್ರೆಗ್ನೆಂಟ್ ಅಂತಾ ಗೊತ್ತಾಗಿನಿಂದ ಶಕುಂತಲಾ ಮಗುವನ್ನ ಸಾಯಿಸ್ಬೇಕು ಅಂತಾ ಏನೇನೋ ಕುತಂತ್ರ ಮಾಡ್ತಾನೆ ಇದ್ದಾಳೆ. ಆದ್ರೆ ಭೂಮಿಕಾ ಇದ್ರಿಂದ ಹೇಗೋ ಬಚಾವ್ ಆಗ್ತಾ ಬಂದ್ಲು. ಇದೀಗ ಮಗುವಿಗೆ ಭೂಮಿ ಜನ್ಮ ನೀಡಿದ್ದಾಳೆ. ಆದ್ರೆ ಸಿರಿಯಲ್ ಡೈರೆಕ್ಟರ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.
ಹೌದು, ಜೈದೇವ್ ದೀಯಾಳನ್ನ ಮದುವೆ ಆಗ್ತಿದ್ದಂತೆ ಆತನನ್ನ ಗೌತಮ್ ಮನೆಯಿಂದ ಆಚೆ ಹಾಕಿದ್ದ. ಮತ್ತೊಂದ್ಕಡೆ ಶಕುಂತಲಾ ಅಣ್ಣ ಕೂಡ ಜೈಲಿನಲ್ಲಿದ್ದಾನೆ. ತಾನು ಒಂಟಿ ಆದೇ.. ತನ್ನಿಂದ ಮಗ, ಅಣ್ಣನನ್ನ ದೂರ ಮಾಡಿದ ನೋವು ಭೂಮಿಕಾಗೆ ಗೊತ್ತಾಗ್ಬೇಕು ಅಂತಾ ಹಾಲಿನಲ್ಲಿ ವಿಷ ಬೆರೆಸಿಕೊಟ್ಟಿದ್ಲು. ಇದ್ರಿಂದ ಭೂಮಿಕಾಗೆ ಜಾಂಡಿಸ್ ಆಗಿತ್ತು. ಬಳಿಕ ಭೂಮಿಕಾಗೆ ಹಳ್ಳಿ ಔಷಧ ಕೊಡಿಸಲು ಹಳ್ಳಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ರೌಡಿಗಳನ್ನು ಬಿಟ್ಟು ಭೂಮಿಕಾಳ್ನ ಸಾಯಿಸುವ ಪ್ಲ್ಯಾನ್ ಮಾಡಿದ್ರು. ಆದ್ರೆ ಅಲ್ಲಾಗಿದ್ದೇ ಬೇರೆ. ಅಣ್ಣಯ್ಯ ಧಾರಾವಾಹಿಯ ಶಿವು ಹಾಗೂ ಪಾರು ಬಂದು ಮಗುವನ್ನು ಕಾಪಾಡಲು ಪ್ರಯತ್ನಿಸಿದರು. ಸಾಯಿಸಲು ಬಂದ ರೌಡಿಗಳನ್ನು ಶಿವು ಹೊಡೆದು ಓಡಿಸಿದರೆ, ಭೂಮಿಕಾಗೆ ಮಗು ಹುಟ್ಟಲು ಡಾ. ಪಾರು ಹಾಗೂ ಡಾ. ಕರ್ಣ ಸಹಾಯ ಮಾಡಿದ್ರು. ಭೂಮಿಕಾಗೆ ಕರ್ಣ ನಾರ್ಮಲ್ ಡೆಲೆವರಿ ಮಾಡಿಸಿದ್ರು. ಹೆಣ್ಣು ಮಗು ಆಯ್ತು ಅಂತಾ ಗೌತಮ್ ಖುಷಿಯಲ್ಲಿ ತೇಲಾಡ್ತಿದ್ದ. ಆದ್ರೆ ಜೈದೇವ್ ಆ ಮಗುವನ್ನ ಕಿಡ್ನ್ಯಾಪ್ ಮಾಡಿದ್ದಾನೆ. ಆದ್ರೆ ಶಕುಂತಲಾ, ಜೈದೇವ್‌ಗೆ ಮತ್ತೆ ಬಿಗ್ ಶಾಕ್ ಎದುರಾಗಿದೆ.
ಹೌದು, ಜದೇವ್ ಹೆಣ್ಣು ಮಗುವನ್ನ ಕಿಡ್ನ್ಯಾಪ್ ಮಾಡ್ತಿದ್ದಂತೆ ಗೌತಮ್ ಕುಟುಂಬ ಕುಡಿ ನಾಶ ಆಯಿತು ಅನ್ನೋ ಖುಷಿಯಲ್ಲಿ ಶಕುಂತಲಾ ಹಾಗೂ ಜೈದೇವ್ ಇದ್ರು. ಆದರೆ, ಅಲ್ಲಿ ಒಂದು ಅಚ್ಚರಿಯ ಘಟನೆ ನಡೆಯಿತು. ಅದೇನೆಂದರೆ ಹೊಟ್ಟೆಯಲ್ಲಿ ಮತ್ತೊಂದು ಮಗು ಇದೆ ಎಂಬ ವಿಚಾರ ಗೊತ್ತಾಯ್ತು.. ಒಂದ್ಕಡೆ ಮಗು ಕಳೆದು ಹೋಯಿತು ಎಂದು ಟೆನ್ಶನ್ನಲ್ಲಿ ಇದ್ದ ಗೌತಮ್ಗೆ ಈ ವಿಚಾರ ಕೇಳಿ ಅಳಬೇಕೋ ಅಥವಾ ಖುಷಿಪಡಬೇಕೋ ಎಂಬುದು ಗೊತ್ತೇ ಆಗಿಲ್ಲ. ಭೂಮಿಕಾಗಿ ಅವಳಿ ಮಕ್ಕಳಿದ್ದಾರೆ ಎಂಬ ವಿಚಾರವನ್ನು ತಿಳಿದು ಜೆಡಿ ಹಾಗೂ ಶಂಕುತಲಾಗೆ ಶಾಕ್ ಆಗಿದೆ.. ಇದೀಗ ಆ ಮಗು ಹುಟ್ಬಾರ್ದು ಅಂತಾ ಶಕುಂತಲಾ ಆಸ್ಪತ್ರೆಯಲ್ಲಿ ಪವರ್ ಕಟ್ ಮಾಡಿದ್ಲು. ಆದ್ರೂ ಕೂಡ ಶಿವು ತಲೆ ಓಡಿಸಿ ಪವರ್ ಬಾಕ್ಸ್ ತಂದು ಲೈಟ್ ಹಾಕಿಸಿದ್ದಾರೆ. ಇದೀಗ ಭೂಮಿಕಾ ಎರಡನೇ ಮಗುವಿಗೂ ಜನ್ಮ ನೀಡಿದ್ದಾಳೆ. ಗೌತಮ್ ಮನೆಗೆ ರಾಜಕುಮಾರ ಎಂಟ್ರಿಕೊಟ್ಟಿದ್ದಾನೆ.

ನೋಡಿರಿ

