ಭೂಮಿಕಾ ಮಗು ಗಂಡು or  ಹೆಣ್ಣು? – ಶಕುಂತಲಾ ಕೈಯಲ್ಲಿ ಗೌತಮ್‌ ಮಗು?

ಭೂಮಿಕಾ ಮಗು ಗಂಡು or  ಹೆಣ್ಣು? – ಶಕುಂತಲಾ ಕೈಯಲ್ಲಿ ಗೌತಮ್‌ ಮಗು?

ಭೂಮಿಕಾ ಕಡೆಗೂ ಮದುವೆಗೆ ಜನ್ಮ ನೀಡಿದ್ದಾರೆ. ಆದ್ರೆ  ಹುಟ್ಟಿರೋ ಮಗು ಹೆಣ್ಣಾ ಗಂಡ.. ಅನ್ನೋ ಕ್ಯೂರಿಯಾಸಿಟಿ ವೀಕ್ಷಕರದ್ದು. ಕಡೆಗೂ ಸೂಪರ್‌ ಹೀರೋಗಳು ಭೂಮಿಕಾ ಮಗು ಉಳಿಸಿದ್ದಾರೆ.. ಆದ್ರೀಗ ಶಕುಂತಲಾ ಕೈಗೆ ಭೂಮಿಕಾ ಮಗು ಸೇರುತ್ತಾ ಅನ್ನೋ ಪ್ರಶ್ನೆ ಕೂಡ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ಕ್ರಿಕೆಟ್ ಲೋಕದಲ್ಲಿ ಇಟಲಿ ಮ್ಯಾಜಿಕ್- 2026ರ ಟಿ20 ವಿಶ್ವಕಪ್‌ ಅರ್ಹತೆಗೆ ಇನ್ನೊಂದೇ ಹೆಜ್ಜೆ

ಅಮೃತಧಾರೆ ಸೀರಿಯಲ್‌ ಸ್ಟೋರಿ ಈಗ ರೋಚಕ ಘಟ್ಟ ತಲುಪಿದೆ.. ಭೂಮಿಕಾ ಹಾಗೂ ಆಕೆಯ ಮಗುವನ್ನ ಸಾಯಿಸ್ಬೇಕು ಅಂತಾ ಕುತಂತ್ರಿ ಶಕುಂತಲಾ ದೊಡ್ಡದಾಗೇ ಪ್ಲ್ಯಾನ್‌ ಮಾಡಿದ್ದಾಳೆ.. ಮಗುವನ್ನ ಕೊಲ್ಬೇಕು ಅಂತಾ ಹಾಲಿನಲ್ಲಿ ವಿಷ ಬೆರೆಸಿಕೊಟ್ಟಿದ್ಲು.. ಇದ್ರಿಂದಾಗಿ ಭೂಮಿಕಾಗೆ ಜಾಂಡಿಸ್‌ ಆಗಿತ್ತು.. ಆಕೆಗೆ ಹಳ್ಳಿಯಲ್ಲಿ ಚಿಕಿತ್ಸೆ ಕೊಡಿಸ್ಬೇಕು ಅಂತಾ ಗೌತಮ್‌ ಹಾಗೂ ಆನಂದ್‌ ಹಳ್ಳಿಗೆ ಕರ್ಕೊಂಡು ಹೊರಟಿದ್ರು.. ಅಷ್ಟೊತ್ತಿಗೆ.. ಶಕುಂತಲಾ ಮತ್ತೊಂದು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ಲು.. ಆಕೆಯೇ ಕಾರ್‌ ಡ್ರೈವರ್‌ ಅನ್ನ ಅಪಾಯಿಂಟ್ ಮಾಡಿದ್ಲು.. ಕಾಡಿನ ರಸ್ತೆ ಮಧ್ಯೆ ಕಾರು ನಿಲ್ಲಿಸುವಂತೆ ಹೇಳಿದ್ಲು.. ಬಳಿಕ ಡ್ರೈವರ್ ಕಾರನ್ನ ಅಲ್ಲೇ ಬಿಟ್ಟು ಎಸ್ಕೇಪ್‌ ಆಗಿದ್ದ.. ಆತನನ್ನ ಹಿಂಬಾಲಿಸಿಕೊಂಡು ಆನಂದ್‌ ಹೊರಟಿದ್ದ.. ಅಷ್ಟೊತ್ತಿಗೆ ರೌಡಿಗಳು ಎಂಟ್ರಿಯಾಗಿದ್ದಾರೆ.. ಆನಂದ್‌ ನ ಪ್ರಜ್ಷೆ ತಪ್ಪುವಂತೆ ಮಾಡಿ, ಭೂಮಿಕಾ ಹಾಗೂ ಗೌತಮ್‌ ನ ಸಾಯಿಸಲು ಹೊರಟಿದ್ರು.. ಆದ್ರೆ ಅಲ್ಲಿಗೆ ಅಣ್ಣಯ್ಯ ಸೀರಿಯಲ್‌ ಶಿವಣ್ಣ ಎಂಟ್ರಿ ಕೊಟ್ಟಿದ್ದ.. ಭೂಮಿಕಾ ಹಾಗೂ ಗೌತಮ್‌ ನ ಕಾಪಾಡಿದ.. ಬಳಿಕ ಭೂಮಿಕಾಳನ್ನ ಹಳ್ಳಿ ವೈದ್ಯರ ಬಳಿ ಕರ್ಕೊಂಡು ಹೋಗಿದ್ದಾನೆ.. ಎಲ್ಲ ಸರಿಹೋಯ್ತು ಅನ್ನುವಷ್ಟರಲ್ಲಿ ಭೂಮಿಕಾಗೆ ಹೆರಿಗೆ ನೋವು ಶುರುವಾಗಿದೆ.. ಇದೀಗ ಆಕೆಯನ್ನ ಶಿವಣ್ಣ ಆಸ್ಪತ್ರೆಗೆ ಸೇರಿಸಿದ್ದಾನೆ.. ಅಲ್ಲಿಗೆ ಪಾರು ಕೂಡ ಬಂದಿದ್ದು, ಆಕೆ ಡಾಕ್ಟರ್‌ ಕರ್ಣನನ್ನು ಅಲ್ಲಿಗೆ ಕರೆಸಿದ್ದಾಳೆ..

ಹೌದು.. ಭೂಮಿಕಾಳನ್ನ ಗೌತಮ್‌ ಹಾಗೂ ಶಿವಣ್ಣ ಆಸ್ಪತ್ರೆಗೆ ಕರ್ಕೊಂಡು ಬಂದಿದ್ದಾರೆ.  ಪಾರು  ಭೂಮಿಕಾ ಹೆರಿಗೆ ಮಾಡಿಸಲು ಕರ್ಣನನ್ನ ಕೂಡ ಕರೆಸಿದ್ದಾಳೆ. ಆದ್ರೆ ಶಕುಂತಲಾ ಮತ್ತೆ ಅಲ್ಲಿಗೆ ರೌಡಿಗಳನ್ನ ಕಳಿಸಿದ್ದಾಳೆ.. ಗೌತಮ್‌ ಹಾಗೂ  ರೌಡಿಗ ಅಣ್ಣಯ್ಯ ರೌಡಿಗಳ ಜೊತೆಗೆ ಫೈಟ್‌ ಮಾಡ್ತಿರುವಾಗ ಕರ್ಣ ಕೂಡ ಎಂಟ್ರಿ ಕೊಟ್ಟಿದ್ದಾನೆ. ಇದೀಗ ಕರ್ಣ ಹಾಗೂ ಪಾರು, ಭೂಮಿಗೆ ಹೆರಿಗೆ ಮಾಡಿಸಿದ್ದಾನೆ. ಇದೀಗ ಭೂಮಿ ಮಗು ಗಂಡಾ.. ಹೆಣ್ಣ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ.  ಮತ್ತೊಂದ್ಕಡೆ  ಹುಟ್ಟಿದ ಮಗು  ಭೂಮಿಕಾ ಕೈಗೆ ಸೇರೋದಿಲ್ವಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಯಾಕಂದ್ರೆ ಕುತಂತ್ರಿ ಶಕುಂತಲಾ ಅಮ್ಮ ಮಗುವನ್ನ ದೂರ ಮಾಡೋದಾಗಿ ಶಪತ ಮಾಡಿ ಆಗಿದೆ.. ಹೀಗಾಗಿ ಆಕೆ ಆಸ್ಪತ್ರೆಗೆ ಯಾರನ್ನಾದ್ರೂ ಕಳ್ಸಿ ಮಗುವನ್ನ ಕಿಡ್ನ್ಯಾಪ್‌ ಮಾಡಿಸೋ ಎಲ್ಲಾ ಸಾಧ್ಯತೆ ಇದೆ.. ಹೀಗಾಗಿ ಭೂಮಿಕಾಳಿಂದ ಮಗು ದೂರ ಆಗೋ ಎಲ್ಲಾ ಲಕ್ಷಣ ಕಾಣ್ತಿದೆ..  ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.

Shwetha M