ಮಗುವಿಗೆ ಜನ್ಮ ನೀಡಿದ ಭೂಮಿಕಾ.. ಗೌತಮ್‌ ಮಗು ಉಳಿಸಿದ ಪಾರು, ಕರ್ಣ! – ಪುಟಾಣಿ ಎಂಟ್ರಿ.. ಶಕುಂತಲಾಗೆ ಗೇಟ್‌ಪಾಸ್‌

ಮಗುವಿಗೆ ಜನ್ಮ ನೀಡಿದ ಭೂಮಿಕಾ.. ಗೌತಮ್‌ ಮಗು ಉಳಿಸಿದ ಪಾರು, ಕರ್ಣ! – ಪುಟಾಣಿ ಎಂಟ್ರಿ.. ಶಕುಂತಲಾಗೆ ಗೇಟ್‌ಪಾಸ್‌

ಮನೆಗೆ ಮಹಾಲಕ್ಷ್ಮೀ ಬರ್ತಾಳೆ ಅಂತ ಭೂಮಿಕಾ ಹಾಗೂ ಗೌತಮ್‌ ಕನಸು ಕಾಣ್ತಾ ಇದ್ರು.. ಆದ್ರೆ ಕುತಂತ್ರಿಗಳು ಸುಮ್ನೆ ಬಿಡ್ಬೇಕಲ್ವಾ? ಇದೀಗ ಇನ್ನೂ ಪ್ರಪಂಚ ನೋಡದ ಪುಟ್ಟ ಕಂದಮ್ಮ ಮೇಲೆ ಶಕುಂತಲಾ ವಕ್ರ ಕಣ್ಣು ಬಿದ್ದಿದೆ. ಮಗು ಹುಟ್ಟೋಕು ಮುನ್ನವೇ ಕೊಲ್ಬೇಕು ಅಂತಾ ಭೂಮಿಕಾಗೆ ವಿಷ ಕೊಟ್ಟಿದ್ದಾಳೆ ಶಕುಂತಲಾ.. ಇದೀಗ ದಿವಾನ್‌ ಮನೆತನದ ಕುಡಿಯನ್ನ ಉಳಿಸಲು ಸೂಪರ್‌ ಹೀರೋಗಳು ಒಂದಾಗಿದ್ದಾರೆ. ಭೂಮಿಕಾ ಹಾಗೂ ಆಕೆಯ ಮಗುವನ್ನ ಉಳಿಸಲು ಕರ್ಣ, ಶಿವಣ್ಣ ಹಾಗೂ ಪಾರು ಎಂಟ್ರಿ ಕೊಟ್ಟಿದ್ದಾರೆ. ದಿವಾನ್‌ ಮನೆತನದ ಕುಡಿಯನ್ನು ಉಳಿಸಲು ಸೂಪರ್‌ ಹೀರೋಗಳು ಒಟ್ಟಾಗಿದ್ದಾರೆ.

ಇದನ್ನೂ ಓದಿ: RCB ವೇಗಿ ಯಶ್ ದಯಾಳ್ ವಿರುದ್ಧ FIR – IPL ಹೀರೋ ವೃತ್ತಿಜೀವನಕ್ಕೆ ಕಂಟಕ?

ಅಮೃತಧಾರೆ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಜೈದೇವ್‌ ಮಲ್ಲಿಗೆ ಮೋಸ ಮಾಡಿ ದಿಯಾಳನ್ನ ಮದುವೆ ಮಾಡಿಕೊಂಡಿದ್ದಾನೆ. ದೀಯಾಳನ್ನ ಮದುವೆ ಆಗ್ತಿದ್ದಂತೆ ಗೌತಮ್‌ ಆತನನ್ನ ಮನೆಯಿಂದ ಆಚೆ ಹಾಕಿದ್ದಾನೆ. ಆಕೆಯ ಅಣ್ಣ ಕೂಡ ಜೈಲಿನಲ್ಲಿದ್ದಾನೆ. ಇದು ಕುತಂತ್ರಿ ಶಕುಂತಲಾಗೆ ಹಿನ್ನಡೆಯಾಗಿದೆ. ಯಾಕಂದ್ರೆ ಆಕೆಯ ಕೆಟ್ಟ ಕೆಲಸಗಳಿಗೆ ಜೈದೇವ್‌, ಹಾಗೂ ರಮಕಾಂತ್‌ ಸಾಥ್‌ ನೀಡ್ತಿದ್ರು.. ಇದೀಗ ಇವರಿಬ್ಬರಿಲ್ಲದೆ ದಿವಾನ್‌ ಮನೆಯಲ್ಲಿ ಆಕೆ ಒಂಟಿಯಾಗಿದ್ದಾಳೆ. ತನ್ನಿಂದ ಅಣ್ಣ, ಮಗನನ್ನ ದೂರ ಮಾಡಿದ ಭೂಮಿಕಾಗೆ ಸರಿಯಾಗೇ ಪಾಠ ಕಲಿಸ್ಬೇಕು.. ಈ ನೋವು ಆಕೆಯೂ ಗೊತ್ತಾಗ್ಬೇಕು ಅಂತಾ ಭೂಮಿಕಾ ಹಾಲಿನಲ್ಲಿ ವಿಷ ಬೆರೆಸಿಕೊಟ್ಟಿದ್ದಾಳೆ. ಇದೀಗ ಭೂಮಿಕಾ ಜೀವ ಅಪಾಯದಲ್ಲಿದೆ. ಭೂಮಿ, ಹಾಗೂ ಮಗುವನ್ನ ಉಳಿಸಲು ಈಗ ಸೂಪರ್‌ ಹೀರೋಗಳು ಒಟ್ಟಾಗಿದ್ದಾರೆ.

ಹೌದು, ಭೂಮಿಕಾಗೆ ಮಗು ಆಗ್ಬಾರ್ದು ಎಂದು ಶಕುಂತಲಾ ಒಂದಲ್ಲ ಒಂದು ಪ್ಲ್ಯಾನ್‌ ಮಾಡ್ತಾನೇ ಇದ್ಲು.. ಆದ್ರೆ ಆ ಪ್ಲ್ಯಾನ್‌ ಎಲ್ಲಾ ಠುಸ್‌ ಆಗ್ತಾ ಬಂತು. ಇದೀಗ ಭೂಮಿಕಾ ಮಗುವನ್ನ ಸಾಯಿಸ್ಬೇಕು ಅಂತಾ ಶಕುಂತಲಾ ಹಾಲಿಗೆ ವಿಷ ಹಾಕಿದ್ದಳು. ಅದರ ಪರಿಣಾಮ ಭೂಮಿಗೆ ಜಾಯಿಂಡೀಸ್‌ ಆಗಿದೆ. ಹೀಗಾಗಿ ಆಕೆಯನ್ನ ಚಿಕಿತ್ಸೆಗಾಗಿ ನಾಟಿ ವೈದ್ಯರ ಹತ್ರ ಕರ್ಕೊಂಡು ಹೊರಟಿದ್ರು. ಆದ್ರೆ ಅಷ್ಟೊತ್ತಿಗೆ ಆಕೆ ಹೆರಿಗೆ ನೋವು ಶುರುವಾಗಿದೆ.. ಈ ವೇಳೆಯೇ ಶಕುಂತಲಾ ರೌಡಿಗಳನ್ನ ಕಳುಹಿಸಿದ್ದಾಳೆ.. ಗೌತಮ್‌ ರೌಡಿಗಳ ಜೊತೆ ಫೈಟ್‌ ಮಾಡ್ತಿದ್ದಂತೆ, ಇದೀಗ ಭೂಮಿಕಾ ಹಾಗೂ ಮಗುವನ್ನ ಉಳಿಸಲು ಪಾರು, ಕರ್ಣ, ಶಿವು ಎಂಟ್ರಿ ಕೊಟ್ಟಿದ್ದಾರೆ.

ಹೌದು, ಭೂಮಿಕಾಗೆ ಹೆರಿಗೆ ನೋವು ಶುರುವಾಗಿದೆ ಎಂದು ಅಣ್ಣಯ್ಯ ಸೀರಿಯಲ್‌ ಶಿವಣ್ಣ ಹೇಳಿದ್ದಾಳೆ. ಬಳಿಕ ಪಾರುವನ್ನ ಕರ್ಕೊಂಡು ಬಂದಿದ್ದಾನೆ. ಅಷ್ಟೊತ್ತಿದೆ ಕರ್ಣ ಕೂಡ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾನೆ. ಅಣ್ಣಯ್ಯ ಹಾಗೂ ಗೌತಮ್‌ ರೌಡಿಗಳ ಜೊತೆ ಫೈಟ್‌ ಮಾಡ್ತಿದ್ರೆ, ಕರ್ಣ ಹಾಗೂ ಪಾರು ಭೂಮಿಕಾ ಮಗುವನ್ನ ಉಳಿಸಲು ಹೋರಾಡ್ತಿದ್ದಾರೆ. ಜಾಂಡಿಸ್‌ ಬಂದಿರೋದಿಕ್ಕೆ ಭೂಮಿಗೆ ಹೆರಿಗೆ ಮಾಡಿಸಿ, ತಾಯಿ-ಮಗುವಿನ ಜೀವ ಉಳಿಸೋದು ದೊಡ್ಡ ಟಾಸ್ಕ್‌ ಆಗಿದೆ. ಇದೀಗ ಭೂಮಿಗೆ ಗಂಡು ಮಗು ಹುಟ್ಟುತ್ತೋ ಅಥವಾ ಹೆಣ್ಣಾಗತ್ತೋ ಅಥವಾ ಅವಳಿಯೋ ಎಂಬ ಚರ್ಚೆ ಶುರುವಾಗಿದೆ. ಅದ್ರ ಜೊತೆ ಶಕುಂತಲಾ ರೌಡಿಗಳನ್ನ ಕಳುಹಿಸಿದ್ದಾಳೆ. ಮಗು ಹುಟ್ಟಿದ್ರು ಕುತಂತ್ರಿ ಶಕುಂತಲಾ ಸುಮ್ನೆ ಇರೋದಿಲ್ಲ.. ಮಗುವನ್ನ ಕಿಡ್ನ್ಯಾಪ್‌  ಮಾಡಿಸಿ ಭೂಮಿಕಾಳಿಂದ ದೂರ ಮಾಡೋ ಸಾಧ್ಯತೆ ಹೆಚ್ಚಾಗಿದೆ. ಒಟ್ಟಿನಲ್ಲಿ ಅಮೃತಧಾರೆ ಸೀರಿಯಲ್‌ ಮುಂಬರುವ ಎಪಿಸೋಡ್‌ ಮಾತ್ರ ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.

Shwetha M