ಕೇಡಿ JD ಸೊಕ್ಕಡಗಿಸಿದ ಗೌತಮ್.. ಜೈದೇವ್ ಸಿಟ್ಟಿಗೆ ಶಕುಂತಲಾ ಬೀದಿ ಪಾಲು! – ಭೂಮಿಕಾ ಮನೆಗೆ ಕುತಂತ್ರಿ ಎಂಟ್ರಿ!

ಕೇಡಿ ಜೆಡಿಗೆ ಕೇಡುಗಾಲ ಶುರುವಾಗಿದೆ. ಗೌತಮ್ನ ಎದುರು ಹಾಕಿಕೊಂಡಿರೋ ಜೈದೇವ್ಗೆ ಹೆಜ್ಜೆ ಹೆಜ್ಜೆಗೂ ಸೋಲಾಗ್ತಿದೆ. ಇದೀಗ ಗೌತಮ್ ಏಟಿಗೆ ತಿರುಗೇಟು ಕೊಡುತ್ತಿದ್ದು, ಜೈದೇವ್ಗೆ ತಡ್ಕೊಳೋದಿಕ್ಕೆ ಆಗ್ತಿಲ್ಲ.. ಇದೇ ಸಿಟ್ಟಿಗೆ ಜೈದೇವ್ ಹೆತ್ತ ಅಮ್ಮನನ್ನೇ ಬೀದಿ ಪಾಲು ಮಾಡಿದ್ದಾನೆ. ಮಗನ ವರ್ತನೆಯಿಂದ ಶಕುಂತಲಾ ವಿಲ ವಿಲ ಅಂತ ಒದ್ದಾಡಿದ್ದಾಳೆ. ಮತ್ತೊಂದ್ಕಡೆ ಗೌತಮ್ – ಭೂಮಿ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಿದೆ. ಭೂಮಿ ಟೀಚರ್ಗೆ ಡುಮ್ಮುಸರ್ ಹೊಸ ಜವಾಬ್ದಾರಿ ಬೇರೆ ನೀಡಿದ್ದಾರೆ.
ಇದನ್ನೂ ಓದಿ: ಕುಡಿದು ಬಂದ ವ್ಯಕ್ತಿಗೆ ಟೆಸ್ಟ್ ಡ್ರೈವ್ ನೀಡಿದ ಕಾರು ಶೋ ರೂಂ ಸಿಬ್ಬಂದಿ! – 4 ವಾಹನ ಜಖಂ.. ವ್ಯಕ್ತಿ ಕಾಲು ಕಟ್!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಜೈದೇವ್ ಅಟ್ಟಹಾಸ ದಿನದಿಂದ ದಿನಕ್ಕೂ ಹೆಚ್ಚಾಗುತ್ತಿದೆ. ಗೌತಮ್ನ ಸಕ್ಸಸ್ ತಡೆದುಕೊಳ್ಳೋದಿಕ್ಕೆ ಆಗ್ತಿಲ್ಲ. ಹೀಗಾಗಿ ಏನಾದ್ರೂ ಕುತಂತ್ರ ಮಾಡ್ತಾ ಇದ್ದಾನೆ. ಗೌತಮ್ ಹೊಸ ಕಂಪನಿ ಶುರು ಮಾಡ್ತಿದ್ದಂತೆ ಲೋಗೋ ವಿಚಾರವಾಗಿ ಜೈದೇವ್ ಕೇಸ್ ಹಾಕಿದ್ದ. ಈ ಕೇಸ್ ಹಾಕ್ತಿದ್ದಂತೆ ಮೂಲ ಲೋಗೋ ಲೀಗಲ್ ಡಾಕ್ಯುಮೆಂಟ್ನ ಪಾರ್ಥ, ಗೌತಮ್ಗೆ ತಂದು ಕೊಟ್ಟಿದ್ದಾನೆ. ಬಳಿಕ ಗೌತಮ್ ಪ್ರೆಸ್ ಮೀಟ್ ಕರೆದು, ಅದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಲೋಗೋ ತನ್ನ ಹೆಸರಲ್ಲಿದೆ ಎಂದು ಜೈದೇವ್ಗೆ ಕ್ಲಾರಿಟಿನೂ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ತನ್ನ ಕುಟುಂಬದ ಸುದ್ದಿಗೆ ಬರದಂತೆ ಜೈದೇವ್ಗೆ ವಾರ್ನ್ ಮಾಡಿದ್ದಾನೆ. ಗೌತಮ್ ನಡೆಗೂ ಶಾಕ್ ಆಗಿದ್ದಾನೆ ಜೈದೇವ್. ಗೌತಮ್ ಮುಂದೆ ಸೋಲುತ್ತಿದ್ದಂತೆ ಜೈದೇವ್ ಸಿಟ್ಟು, ದ್ವೇಷ ಹೆಚ್ಚಾಗಿದೆ. ಈ ಹೊತ್ತಲ್ಲೇ ಶಕುಂತಲಾ ಕೂಡ ಆತನಿಗೆ ಶಾಕ್ ಕೊಟ್ಟಿದ್ದಾಳೆ. ಇದ್ರಿಂದ ಕೆರಳಿ ಕೆಂಡವಾಗಿದ್ದಾನೆ ಕೆಡಿ ಜೇಡಿ.
ಲೋಗೋ ವಿಚಾರಕ್ಕೆ ಕೆರಳಿ ಕೆಂಡವಾಗಿದ್ದ ಜೈದೇವ್ಗೆ ಶಕುಂತಲಾ ಶಾಕ್ ಕೊಟ್ಟಿದ್ದಾಳೆ. ಶಕುಂತಲಾ ಜೈದೇವ್ ಬಳಿ ಬಂದು ಚೆಕ್ಗೆ ಸಹಿ ಹಾಕಲು ಹೇಳಿದ್ದಾಳೆ. ಆಗ ಕೊಟ್ಟ ದುಡ್ಡನ್ನ ಏನು ಮಾಡಿದೆ ಎಂದು ಕೇಳಿದ್ದಕ್ಕೆ ಅದನ್ನ ಕಳೆದುಕೊಂಡೆ ಎಂದಿದ್ದಾಳೆ. ಅದಕ್ಕೆ ಜೈದೇವ್ ಶಾಕ್ ಆಗಿದ್ದಾನೆ. ಮೂರು ಕೋಟಿಯನ್ನ ಮೂರು ಸಾವಿರ ತರ ಕೇಳುತ್ತೀಯಲ್ಲ ಅಂತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಶಕುಂತಲಾ, ಗೌತಮ್ಗೂ ನಿನಗೂ ಎಷ್ಟು ವ್ಯತ್ಯಾಸ ಇದೆ ನೋಡೋ ಅಂತ ಹೇಳಿದ್ದಾಳೆ. ಇದ್ರಿಂದ ಸಿಟ್ಟಾದ ಜೈದೇವ್ ಶಕುಂತಲಾಳಿಗೆ ಬೈದು, ಹೆಡೆಮುರಿ ಕಟ್ಟಿ, ನನ್ನ ಮುಂದೆಯೇ ನನ್ನ ಶತ್ರು ಹೋಗಳುತ್ತೀಯಾ ಅಂತ, ಹೆತ್ತ ತಾಯಿಯನ್ನೇ ಕುತ್ತಿಗೆ ಹಿಡಿದು ಮನೆಯಿಂದ ಆಚೆ ಹಾಕಿದ್ದಾನೆ. ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿ ಕಣ್ಣೀರಿಟ್ಟಿದ್ದಾಳೆ ಶಕುಂತಲಾ. ಆದ್ರೆ ಇದು ಗೌತಮ್ ನ ಮತ್ತೆ ಸೋಲಿಸಬೇಕು ಅಂತ ಜೈದೇವ್ ಹಾಗೂ ಶಕುಂತಲಾ ಮಾಡಿರೋ ಪ್ಲ್ಯಾನಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಗೌತಮ್ ಹಂತ ಹಂತವಾಗಿ ಸಕ್ಸಸ್ ಕಾಡುತ್ತಿದ್ದಾನೆ. ಶಕುಂತಲಾ ಗೌತಮ್ ವಂಶವನ್ನು ನಿರ್ವಂಶ ಮಾಡಬೇಕು ಎಂದೇ ಗೌತಮ್ ಮನೆಗೆ ಕಾಲಿಟ್ಟಿದ್ದು. ಇದೀಗ ಈ ಮೂಲಕ ಮತ್ತೆ ಭೂಮಿ ಮನೆ ಸೇರಲು ಪ್ಲ್ಯಾನ್ ಮಾಡಿದ್ದಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಮತ್ತೊಂದ್ಕಡೆ ಇಷ್ಟು ದಿನ ವನವಾಸದಲ್ಲಿದ್ದ ಭೂಮಿ – ಗೌತಮ್ ಬಾಳಲ್ಲಿ ಹೊಸ ಚೈತನ್ಯ ಬಂದಿದೆ. ಗಂಡ ಹೆಂಡ್ತಿ ಒಂದಾಗಿ ಮತ್ತೆ ಹೊಸ ಸಾಮ್ರಾಜ್ಯ ಕಟ್ಟಿ ಬೆಳೆಸುತ್ತಿದ್ದಾರೆ. ಇದೀಗ ಗೌತಮ್ ಭೂಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಿದೆ. ಹಂತ ಹಂತಕ್ಕೂ ಸಕ್ಸಸ್ ಸಿಕ್ತಿದೆ. ಇದೀಗ ಗೌತಮ್ ಭೂಮಿಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ್ದಾನೆ. ಭೂಮಿಗೆ ಸ್ಕೂಲ್ ನಡೆಸುವ ಜವಾಬ್ದಾರಿ ನೀಡಿದ್ದಾನೆ. ಇದ್ರಿಂದಾಗಿ ಭೂಮಿಕಾ ಫುಲ್ ಎಮೋಷನಲ್ ಆಗಿದ್ದಾಳೆ. ಇದೀಗ ಭೂಮಿಕಾ ಗಂಡ ಕೊಟ್ಟ ಜವಾಬ್ದಾರಿಯನ್ನ ಸರಿಯಾಗೇ ನಿಭಾಯಿಸ್ತಿದ್ದಾಳೆ.
ಒಟ್ಟಾರೆ ಅಮೃತಧಾರೆ ಸೀರಿಯಲ್ ಮುಂದಿನ ದಿನಗಳಲ್ಲಿ ರೋಚಕತೆಯಿಂದ ಕೂಡಿರಲಿದೆ. ಬೀದಿಗೆ ಬಿದ್ದ ಶಕುಂತಲಾ ಮುಂದೇನು ಮಾಡ್ತಾಳೆ? ಶಕುಂತಲಾ ಸಹಾಯ ಕೇಳ್ಕೊಂಡು ಗೌತಮ್ ಮನೆಗೆ ಬರ್ತಾಳಾ? ಮುಂದೆ ಗೌತಮ್ ದಿವಾನ್, ಜೈದೇವ್ ಮುಂದೆ ಎತ್ತರಕ್ಕೆ ಬೆಳೆಯುತ್ತಾನಾ? ದಿಶಾ ಹಣೆದ ಬಲೆಗೆ ಜೈದೇವ್ ಸಿಕ್ಕಿಕೊಳ್ತಾನಾ? ಜೈದೇವ್ ಇದ್ದ ಆಸ್ತಿಯನ್ನೂ ಕಳೆದುಕೊಳ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

