ಗೌತಮ್ ಘರ್ಜನೆ.. ಜೈದೇವ್ ಗಡಗಡ.. ಕೇಡಿ ಜೇಡಿಗೆ ಕೇಡುಗಾಲ ಶುರು! – ಶಕುಂತಲಾನೂ ಗೌತಮ್ ಪರನಾ?

ಗೌತಮ್ ಘರ್ಜನೆ.. ಜೈದೇವ್ ಗಡಗಡ.. ಕೇಡಿ ಜೇಡಿಗೆ ಕೇಡುಗಾಲ ಶುರು! – ಶಕುಂತಲಾನೂ ಗೌತಮ್ ಪರನಾ?

ಜೈದೇವ್‌ನಿಂದ ದೂರವಾದ ಮಲ್ಲಿ ಈಗ ಹೊಸ ಜೀವನ ಶುರುಮಾಡಿದ್ದಾಳೆ. ಆದ್ರೆ ಮಲ್ಲಿ ಖುಷಿಯಾಗಿರೋದನ್ನ ಜೈದೇವ್‌ಗೆ ಸಹಿಕೊಳ್ಳೋದಿಕ್ಕೆ ಆಗ್ತಿಲ್ಲ. ಆಕೆಯ ನೆಮ್ಮದಿ ಹಾಳು ಮಾಡ್ಬೇಕು ಅಂತ ಏನಾದ್ರೂ ಕುತಂತ್ರ ಮಾಡ್ತಿರ್ತಾನೆ. ಇದೀಗ ಮಲ್ಲಿ ಹಾಗೂ ಸುನಿಯನ್ನ ಮುಗಿಸಲು ಜೈದೇವ್‌ ರೌಡಿಗಳಿಗೆ ಸುಪಾರಿ ಕೊಟ್ಟಿದ್ದ. ಆದ್ರೆ ಗೌತಮ್‌ ಇಬ್ಬರನ ಬಚಾಬ್‌ ಮಾಡಿದ. ಇದೀಗ ಜೈದೇವ್‌ಗೆ ಬ್ಯಾಡ್‌ ಟೈಮ್‌ ಶುರುವಾಗಿದೆ. ಇದೀಗ ಮನೆಯಲ್ಲೂ ಜೈದೇವ್‌ ವಿರುದ್ದ ಶಕುಂತಲಾ ಸಿಟ್ಟಾಗಿದ್ದಾಳೆ.

ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಗೆ ಶಾಕ್‌! – ಮೂರನೇ ಬಾರಿ ಗಡಿಪಾರಿಗೆ ನೋಟಿಸ್ ಜಾರಿ!

ಅಮೃತಧಾರೆ ಸೀರಿಯಲ್‌ ಸದ್ಯ ರೋಚಕ ಘಟ್ಟ ತಲುಪಿದೆ. ಇದೀಗ ಭೂಮಿಕಾ ಹಾಗೂ ಗೌತಮ್‌ ಒಂದಾಗಿದ್ದು, ಹೊಸ ಜೀವನ ಶುರು ಮಾಡಿದ್ದಾರೆ. ಭೂಮಿಕಾ ಸಿಕ್ಕಿದ್ಮೇಲೆ ಗೌತಮ್‌ ಹೊಸ ಬ್ಯುಸಿನೆಸ್‌ ಕೂಡ ಶುರುಮಾಡಿದ್ದಾನೆ. ಮತ್ತೊಂದ್ಕಡೆ ಮಲ್ಲಿ ಮದುವೆ ಕೂಡ ಮಾಡ್ತಿಸ್ತಿದ್ದಾನೆ. ಇದನ್ನೆಲ್ಲಾ ನೋಡಿದ ಜೈದೇವ್‌ಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಹೀಗಾಗಿ ಮಲ್ಲಿ ಜೀವನದಲ್ಲಿ ಮತ್ತೆ ಆಟವಾಡಲು ಒಂದಾದ ಮೇಲೋಂದು ಕುತಂತ್ರ ಮಾಡ್ತಾನೆ ಇರ್ತಾನೆ. ಇದೀಗ ಜೈದೇವ್‌ ಗೌತಮ್‌ ಕೈಗೆ ಸಿಕ್ಕಿ ಬೀಳ್ತಾನಾ ಅನ್ನೋ ಕುತೂಹಲ ಮೂಡಿದೆ.

ಹೌದು, ಮಲ್ಲಿ ಈಗ ಹೈಯರ್‌ ಎಜುಕೇಷನ್‌ ಮಾಡ್ತಿದ್ದಾಳೆ. ಎಕ್ಸಾಂ ಬರೆಯುತ್ತಿದ್ದಾಳೆ. ಆದ್ರೆ ಜೈದೇವ್‌  ಮಲ್ಲಿಯ ಕನಸಿಗೆ ಕಲ್ಲು ಹಾಕುವ ಪ್ರಯತ್ನವನ್ನು ಮಾಡಿದ್ದಾನೆ. ರೌಡಿಗಳು ಅಟ್ಯಾಕ್‌ ಮಾಡ್ತಿದ್ದಂತೆ ಮಲ್ಲಿ ಗೌತಮ್‌ಗೆ ಕಾಲ್‌ ಮಾಡಿದ್ದಾಳೆ. ಆದ್ರೆ ಅಷ್ಟರಲ್ಲಿ ರೌಡಿಗಳು ಮಲ್ಲಿ ಕೈಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ರು. ಅದೇ ಟೈಮ್‌ಗೆ ಗೌತಮ್‌ ಎಂಟ್ರಿಯಾಗಿದ್ದು ಪುಡಿ ರೌಡಿಗಳನ್ನು ಹೊಡೆದುರುಳಿಸಿದ್ದಾನೆ. ಪುಡಿ ರೌಡಿಗಳಿಂದ ಮಲ್ಲಿಯನ್ನ ಕಾಪಾಡಿ, ಎಕ್ಸಾಮ್‌ ಹಾಲ್‌ಗೆ ಬಿಟ್ಟಿದ್ದಾನೆ. ಸದ್ಯ  ಮಲ್ಲಿ ಎಲ್ಲಾ ಅಡೆತಡೆಗಳನ್ನು ದಾಟಿ ಪರೀಕ್ಷೆಯನ್ನು ಕೂಡ ಬರೆದು ಆಗಿದೆ. ಇನ್ನೂ ಇದೆಲ್ಲದರ ಹಿಂದೆ ಜೈದೇವ್‌ ಕೈವಾಡ ಇದೆ ಅನ್ನೋದು ಇನ್ನೂ ಗೌತಮ್‌ಗೆ ಗೊತ್ತಿಲ್ಲ. ಒಂದು ವೇಳೆ ಗೊತ್ತಾದರೆ ಜೈದೇವ್‌ನ ಗೌತಮ್ ಇನ್ನೊಮ್ಮೆ ಸುಮ್ಮನೆ ಬಿಡಲ್ಲ. ಸರಿಯಾಗೇ ಪಾಠ ಕಲಿಸ್ತಾನೆ.

ಮತ್ತೊಂದ್ಕಡೆ ಗೌತಮ್‌ ಹೊಸ ಬ್ಯುಸಿನೆಸ್‌ ಶುರುಮಾಡಿದ್ದಾನೆ. ಇದೀಗ ಆತನ ಜೊತೆ ಪಾರ್ಥ ಹಾಗೂ ಅಪೇಕ್ಷ ಕೂಡ ಕೈ ಜೋಡಿಸಿದ್ದಾರೆ. ಈ ವಿಚಾರ ಜೈದೇವ್‌ಗೆ ಗೊತ್ತಾಗಿದೆ. ಅಪೇಕ್ಷ, ಪಾರ್ಥ ಮನೆಗೆ ಬರ್ತಿದ್ದಂತೆ ಕೇಡಿ, ಜೇಡಿ ಅವರ ಮೇಲೆ ಕೂಗಾಡಿದ್ದಾನೆ. ಆಗ ಅಪೇಕ್ಷ ಹಾಗೂ ಪಾರ್ಥ ಜೈದೇವ್‌ಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದ್ರಿಂದ ಕೆರಳಿದ ಜೈದೇವ್ ಇನ್ನೇನೂ ಪಾರ್ಥನ ವಿರುದ್ದ ತಿರುಗಿ ಬೀಳಬೇಕು, ಅಷ್ಟರಲ್ಲಿ ಶಕುಂತಲಾ ಅಲ್ಲಿಗೆ ಬಂದಿದ್ದಾಳೆ. ಬಳಿಕ ಮುದ್ದಿನ ಮಗ, ಕ್ರೈಂ ಪಾರ್ಟ್ನರ್‌ ಜೈದೇವ್‌ ಮೇಲೆ ಸಿಟ್ಟಾಗಿದ್ದಾಳೆ. ಇದರಿಂದ ಜೈದೇವ್ ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮತ್ತೊಂದು ಕಡೆ ಪಾರ್ಥ ಕೂಡ ಅಪೇಕ್ಷಾ ಜೊತೆ ಮನೆಯಿಂದ ಹೊರ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಒಂದ್ವೇಳೆ‌ ಪಾರ್ಥ ಕೂಡ ಮನೆ ಬಿಟ್ಟರೆ ಶಕುಂತಲಾ ಯಾರ ಪರ ನಿಲ್ಲುತ್ತಾಳೆ. ಪಾರ್ಥ ಜೊತೆ ಹೋಗ್ತಾಳಾ ಅಥವಾ, ಗೌತಮ್‌ ಮನೆಗೆ ಬರ್ತಾಳಾ ಎನ್ನುವ ಕುತೂಹಲ ಮೂಡಿದೆ. ಒಟ್ನಲ್ಲಿ ಅಮೃತಧಾರೆ ಸೀರಿಯಲ್ ನಲ್ಲಿ ಸಾಕಷ್ಟು ಟ್ವಿಸ್ಟ್‌ ಇರಲಿದೆ.  ಮುಂಬರುವ ದಿನಗಳಲ್ಲಿ ಈ ಸೀರಿಯಲ್‌ ಯಾವ ತಿರುವು ಪಡೆಯುತ್ತೆ? ಮಲ್ಲಿ ಪರೀಕ್ಷೆ ಪಾಸಾಗ್ತಾಳಾ? ಜೈದೇವ್‌ಗೆ ಗೌತಮ್ ಬುದ್ದಿ ಕಲಿಸುತ್ತಾನಾ? ಮಲ್ಲಿ ಮತ್ತು ಸುನಿ ಮದುವೆಯಾಗುತ್ತಾರಾ ಅನ್ನೋದನ್ನು ಕೂಡ ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *