ಅಪ್ಪುಗೆ ಗೊತ್ತಾಯ್ತು ಗೌತಮ್ ಸತ್ಯ.. ಮಗನಿಗಾಗಿ ಒಂದಾದ ಭೂಮಿ ಗೌತಮ್? – 3 ಸಿನಿಮಾದ ಕತೆ ಅಮೃತಧಾರೆ!

ಭೂಮಿಕಾ ಮನೆ ಬಿಟ್ಟು ಬಂದ್ಮೇಲೆ ಗೌತಮ್ ಒಂಟಿಯಾಗಿದ್ದ.. ಇರೋ ಆಸ್ತಿಯನ್ನೆಲ್ಲಾ ಶಕುಂತಲಾ, ಜೈದೇವ್ ಹೆಸರಿಗೆ ಬರೆದಿಟ್ಟು ಮನೆ ತೊರೆದಿದ್ದ.. ಪ್ರೀತಿಯ ಮಗ, ಮಡಗಿಗಾಗಿ ಹಂಬಲಿ ಊರೂರು ಅಲೆದಾಡಿದ್ದ. ಇದೀಗ ಗೌತಮ್ ಗೆ ಮುದ್ದಿನ ಮಡದಿ, ಮಗ ಕೊನೆಗೂ ಸಿಕ್ಕಿದ್ದಾರೆ. ಮಗನ ಹುಟ್ಟುಹಬ್ಬಕ್ಕೂ ಗೌತಮ್ ದಿವಾನ್ ಸ್ಪೆಷಲ್ ಗಿಫ್ಟ್ ಕೊಡಿಸಿದ್ದಾನೆ.
ಇದನ್ನೂ ಓದಿ: ಮ್ಯಾಕ್ಸ್ ನಿರ್ದೇಶಕರಿಗೆ ಕಿಚ್ಚನ ಗಿಫ್ಟ್! – ದುಬಾರಿ ಉಡುಗೊರೆ ಕೊಟ್ಟ ಸುದೀಪ್!
ಅಮೃತಧಾರೆ ಸೀರಿಯಲ್ ಯಾರೂ ನಿರೀಕ್ಷೆ ಮಾಡದಂತಹ ತಿರುವುಗಳನ್ನು ಪಡೆದುಕೊಳ್ತಿದೆ. ಕೇಡಿ ಜೈದೇವ್, ಶಕುಂತಲಾ ಕುತಂತ್ರದಿಂದಾಗಿ ಭೂಮಿಕಾ ಮನೆ ಬಿಟ್ಟು ಹೋಗಿದ್ಲು. ಮುದ್ದಿನ ಗಂಡನಿಗೂ ಹೇಳದೇ, ಯಾವುದೇ ಸುಳಿವು ನೀಡದೇ ಭೂಮಿಕಾ ಎಲ್ಲರಿಂದ ದೂರ ಹೋಗಿದ್ದಾಳೆ. ಅದ್ರೆ ಮುದ್ದಿನ ಮಡದಿಗಾಗಿ ಗೌತಮ್ ಇರೋ ಆಸ್ತಿಯನ್ನೆಲ್ಲಾ ಜೈದೇವ್ ಶಕುಂತಲಾ ಹೆಸರಿಗೆ ಬರೆದು ಮನೆ ಬಿಟ್ಟಿದ್ದ. ಭೂಮಿಕಾಳನ್ನ ಹುಡುಕಿಕೊಂಡು ಗೌತಮ್ ಊರೂರು ಅಲೆದಿದ್ದ.. ಕಡೆಗೂ ಗೌತಮ್ ಕಣ್ಣಿಗೆ ಭೂಮಿಕಾ ಬಿದ್ದಿದ್ದಾಳೆ. ಆಕೆಗೆ ಒಲವಿನ ಪತ್ರ ಕೊಟ್ಟು ಸಾಲು ಸಾಲು ಪ್ರಶ್ನೆಗಳನ್ನ ಕೇಳಿದ್ದ. ಆದ್ರೆ ಭೂಮಿಕಾ ನೀವು ನನಗೆ ಮೋಸ ಮಾಡಿದ್ರಿ ಎಂದು ಗೌತಮ್ ಗೆ ಬೈದು ಕಳುಹಿಸಿದ್ದಾಳೆ. ಇದೀಗ ಗೌತಮ್ ಗೆ ತನ್ನ ಮಗ ಯಾರು ಅನ್ನೋದು ಗೊತ್ತಾಗಿದೆ. ಇಷ್ಟ ದಿನ ತನ್ನ ಜೊತೆ ಮಾತಾಡ್ತಿದ್ದ ಅಪ್ಪುವೇ ಮಗ ಅನ್ನೋದು ಗೌತಮ್ ಮುಂದೆ ರಿವೀಲ್ ಆಗಿದೆ. ಮಗ ಎಂದು ಗೊತ್ತಾಗ್ತಿದ್ದಂತೆ ಗೌತಮ್ ಆಕಾಶ್ ನ ಮುದ್ದಾಡಿದ್ದಾನೆ. ಇದೀಗ ಗೌತಮ್ ನೀನೆ ನನ್ನ ಮಗ ಅಂತಾ ಆಕಾಶ್ ಗೆ ಹೇಳ್ತಾನಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.
ಹೌದು.. ಗೌತಮ್ ಭೂಮಿಕಾಗೇ ಗೊತ್ತಾಗದ ಹಾಗೇ ಮಗ ಆಕಾಶ್‌ನನ್ನು ಮೀಟ್ ಆಗ್ತಿದ್ದಾನೆ. ಅಪ್ಪು ಹುಟ್ಟುಹಬ್ಬದ ದಿನ ಆತ ಕೇಳಿದ್ದನ್ನೆಲ್ಲಾ ಗೌತಮ್ ಕೊಡಿಸಿದ್ದಾನೆ. ಅಪ್ಪು ಕೂಡ ಭೂಮಿಕಾ ಬಳಿ ಗೌತಮ್ ವಿಚಾರ ಮುಚ್ಚಿಟ್ಟಿದ್ದಾನೆ. ಹುಟ್ಟು ಹಬ್ಬದ ದಿನ ಗೌತಮ್ ಕೊಡಿಸಿದ ಗಿಫ್ಟ್‌ಅನ್ನ ನನ್ನ ಫ್ರೆಂಡ್ಸ್ ಅಪ್ಪ ಅಮ್ಮ ಕೊಡಿಸಿದ್ದು ಎಂದು ಸುಳ್ಳು ಹೇಳಿದ್ದಾನೆ. ಮತ್ತೊಂದ್ಕಡೆ ಗೌತಮ್ ಮಲ್ಲಿಯನ್ನ ಕೂಡ ಮೀಟ್ ಮಾಡಿದ್ದಾನೆ. ಭೂಮಿಕಾ ಮನೆ ಬಿಟ್ಟು ಬರಲು ಕಾರಣ ಏನು ಅನ್ನೋದನ್ನ ಕೂಡ ಕೇಳಿದ್ದಾನೆ. ಆದ್ರೆ ಮಲ್ಲಿ ಸದ್ಯಕ್ಕಂತೂ ಈ ಕಾರಣವನ್ನ ಗೌತಮ್ ಬಳಿ ಹೇಳೋದು ಡೌಟ್.. ಆದ್ರೀಗ ಗೌತಮ್‌ಗಾಗಿ ಮಲ್ಲಿ ಭೂಮಿಕಾ ಮಾಡಿರೋ ಗುಲಾಬ್ ಜಾಮೂನ್ ನ ಕಳುಹಿಸಿದ್ದಾಳೆ.
ಅಪ್ಪು ಪದೇ ಪದೇ ಗೌತಮ್ ನ ಭೇಟಿ ಮಾಡ್ತಿದ್ದಾನೆ. ಭೂಮಿಕಾಗೆ ಈ ವಿಚಾರ ಗೊತ್ತಿಲ್ಲ.. ಆದ್ರೆ ಅಪ್ಪು ಗೌತಮ್ ನ ಮೀಟ್ ಆಗಲು ಹೋಗ್ತಿದ್ದಾನೆ ಅನ್ನೋದು ಮಲ್ಲಿಗೆ ಗೊತ್ತಾಗಿದೆ. ಅಪ್ಪು ಮಲ್ಲಿ ಮುಂದೆ ನನ್ನ ಫ್ರೆಂಡ್ ನೋಡಲು ನನ್ನ ಹಾಗೆಯೇ ಇದ್ದಾನೆ. ನನ್ನದು ಚಿಕ್ಕ ಹೊಟ್ಟೆ, ಫ್ರೆಂಡ್ ಹೊಟ್ಟೆ ಸ್ವಲ್ಪ ದೊಡ್ಡದು. ದೊಡ್ಡವನಾದ ಮೇಲೆ ನನಗೆ ಮೀಸೆ ಬಂದ್ರೆ ನಾನು ಹಾಗೆ ಕಾಣುತ್ತೀನಿ ಎಂದು ಹೇಳಿದ್ದಾನೆ. ಇದನ್ನೆಲ್ಲಾ ಕೇಳಿದ ಮೇಲೆ ಅಪ್ಪು ಗೆಳೆಯ ಗೌತಮ್ ಅಂತ ಮಲ್ಲಿ ಅಂದಾಜಿಸಿದ್ದಾಳೆ. ಹೀಗಾಗಿ ಮಲ್ಲಿ ಅಪ್ಪು ಕೈಯಲ್ಲಿ ಭೂಮಿಕಾ ಮಾಡಿರುವ ಗುಲಾಬ್ ಜಾಮೂನು ಕಳುಹಿಸಿದ್ದಾಳೆ. ಗುಲಾಬ್ ಜಾಮೂನ್ ನೋಡ್ತಾ ಇದ್ದಂತೆ ಗೌತಮ್ ಫುಲ್ ಖುಷಿಯಾಗಿದ್ದಾನೆ. ಬಾಯಿ ಚಪ್ಪರಿಸಿಕೊಂಡು ಸ್ವೀಟ್ ತಿಂದಿದ್ದಾನೆ. ಈ ಸೀನ್ ನೋಡ್ತಿದ್ದಂತೆ ವೀಕ್ಷಕರಿಗೆ ಕನ್ನಡದ ಮೂರು ಸಿನಿಮಾಗಳು ಕಣ್ಮುಂದೆ ಬಂದಿವೆ.
ಹೌದು ಅಮೃತಧಾರೆ ಸೀರಿಯಲ್ ಸ್ಟೋರಿ ನೋಡಿ ವೀಕ್ಷಕರಿಗೆ 3 ಸಿನಿಮಾದ ದೃಶ್ಯಗಳು ನೆನಪಾಗಿದೆ. ಗೌತಮ್ ಗುಲಾಬ್ ಜಾಮೂನ್ ತಿನ್ನುವ ದೃಶ್ಯ ನೋಡಿಸ ಸೀರಿಯಲ್ ಪ್ರೇಮಿಗಳು ಸೂರ್ಯವಂಶ ಸಿನಿಮಾದ ಗಸಗಸ ಪಾಯಸ ತಿನ್ನುವ ಸೀನ್ ಗೆ ಹೋಲಿಕೆ ಮಾಡಿದ್ದಾರೆ. ಸೂರ್ಯವಂಶದಲ್ಲಿ ಅಜ್ಜ – ಮೊಮ್ಮಗ, ಅಮೃತಧಾರೆಯಲ್ಲಿ ಅಪ್ಪ – ಮಗನ ಸೀನ್ ನ ಹೋಲಿಕೆ ಮಾಡಿದ್ದಾರೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ನಟನೆಯ ‘ಮನೆದೇವ್ರು’ ಸಿನಿಮಾದಲ್ಲಿ ಕೂಡ ಇದೇ ರೀತಿಯ ದೃಶ್ಯಗಳಿವೆ. ಹೆಂಡ್ತಿ ಮತ್ತು ಮಗನಿಂದ ಹೀರೋ ದೂರವಾಗಿರುತ್ತಾರೆ. ಎದುರಿನ ಮನೆಯಲ್ಲಿದ್ರೂ ಮಗನಿಗೆ ತಂದೆ ಯಾರು ಎಂದು ಗೊತ್ತಿರಲ್ಲ. ಶಾಲೆಗೆ ಬರುವ ಮಗನನ್ನು ಹೀರೋ ಪತ್ನಿಗೆ ತಿಳಿಯದಂತೆ ಭೇಟಿಯಾಗುತ್ತಿರುತ್ತಾನೆ. ಸದ್ಯ ಅಮೃತಧಾರೆ ಸೀರಿಯಲ್ ನಲ್ಲೂ ಇದೇ ತರ ಕತೆ ಸಾಗ್ತಿದೆ. ಇನ್ನು ಶಶಿಕುಮಾರ್ ಮತ್ತು ಶೃತಿ ಅಭಿನಯದ, ಎದುರು ಮನೆಯಲ್ಲಿ ಗಂಡ, ಪಕ್ಕದ ಮನೆಯಲ್ಲಿ ಹೆಂಡತಿ ಸಿನಿಮಾದಲ್ಲಿಯೂ ಇದೇ ರೀತಿಯ ಕಥೆಯನ್ನು ನೋಡಬಹುದು. ಇಲ್ಲಿ ಮಗನೇ ಬೇರೆಯಾಗಿರುವ ತಂದೆ-ತಾಯಿಯನ್ನು ಒಂದು ಮಾಡುತ್ತಾನೆ.
ಇದೀಗ ಸೀರಿಯಲ್ ಸ್ಟೋರಿ ನೋಡ್ತಿದ್ದಂತೆ ದೂರವಾಗಿರೋ ಭೂಮಿಕಾ ಗೌತಮ್ ಮಗನಿಂದಾಗಿಯೇ ಒಂದಾಗ್ತಾರಾ? ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಂದು ವೇಳೆ ಗೌತಮ್ ಮಗನನ್ನು ಭೇಟಿಯಾಗುತ್ತಿರುವ ವಿಷಯ ತಿಳಿದ್ರೆ ಭೂಮಿಕಾ ಮುಂದೇನು ಮಾಡ್ತಾಳೆ? ಮಗನಿಗಾಗಿ ಭೂಮಿಕಾ ಮುನಿಸು ಮರೆಯುತ್ತಾಳಾ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ.

ನೋಡಿರಿ

