ಭಾಗ್ಯಗೆ ಹಳೇ ನೆನಪು ವಾಪಾಸ್‌.. ಶಕುಂತಲಾ ಆಟಕ್ಕೆ ಬ್ರೇಕ್‌! – ಗೌತಮ್‌ ಅಸಲಿ ಸ್ಟೋರಿ ರಿವೀಲ್‌

ಭಾಗ್ಯಗೆ ಹಳೇ ನೆನಪು ವಾಪಾಸ್‌.. ಶಕುಂತಲಾ ಆಟಕ್ಕೆ ಬ್ರೇಕ್‌! – ಗೌತಮ್‌ ಅಸಲಿ ಸ್ಟೋರಿ ರಿವೀಲ್‌

ಗೌತಮ್‌ ವಿರುದ್ಧ ಶಕುಂತಲಾ ಏನೇ ಕುತಂತ್ರ ಮಾಡಿದ್ರೂ ಅದು ವಕೌಟ್‌ ಆಗಲ್ಲ.. ಗೌತಮ್‌ ಸಣ್ಣ ವಯಸ್ಸಲ್ಲಿ ಇರುವಾಗ್ಲೇ ಅಮ್ಮನಿಂದ ಆಕೆ ದೂರ ಮಾಡಿದ್ಲು.. ಆದ್ರೆ ವಿಧಿ ಅಮ್ಮ ಮಗ ಮತ್ತೆ ಒಂದಾಗುವಂತೆ ಮಾಡಿದೆ. ಇದೀಗ ಭಾಗ್ಯಗೆ  ಹಳೆಯದ್ದೆಲ್ಲಾ ನೆನಪಾಗಿದೆ. ನಾನಿರೋದು ತನ್ನ ಸ್ವಂತ ಮನೆಯಲ್ಲಿ ಅನ್ನೋದು ಆಕೆಗೆ ಗೊತ್ತಾಗಿದೆ. ಇನ್ನುಮುಂದೆ ಅಸಲಿ ಆಟ ಶುರುವಾಗಲಿದೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಹಿರಿಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ – ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

ವೀಕ್ಷಕರು ತುಂಬಾ ಇಷ್ಟಪಟ್ಟು ನೋಡ್ತಿರೋ ಸೀರಿಯಲ್‌ಗಳಲ್ಲಿ ಅಮೃತಾಧಾರೆ ಸೀರಿಯಲ್‌ ಕೂಡ ಒಂದು. ಇಲ್ಲಿಯವರೆಗೆ ಬಂದಿರುವ ಬೇರೆ ಬೇರೆ ಭಾಷೆಗಳ ಸೀರಿಯಲ್​ಗಳ ಪೈಕಿ ಹೆಚ್ಚಿನ ಸೀರಿಯಲ್‌ ಗಳು ಮಹಿಳಾ ಕೇಂದ್ರೀಕೃತವೇ ಆಗಿದ್ದರೂ ಅದರಲ್ಲಿ ಅಳುಮುಂಜಿ ಸೊಸೆ, ವಿಲನ್​ ಅತ್ತೆಯನ್ನೇ ತೋರಿಸ್ಕೊಂಡು ಬರಲಾಗ್ತಿತ್ತು. ಆದರೆ ಅಮೃತಧಾರೆ ಸೀರಿಯಲ್‌ ಸ್ಟೋರಿ ತುಂಬಾ ಡಿಫರೆಂಟ್​. ಮಧ್ಯವಯಸ್ಸಿನವರ ನವೀರಾದ ಪ್ರೇಮದ ಕಥೆ ಇದಾಗಿದ್ದರೂ, ಇಲ್ಲಿ ವಿಲನ್​ ಅತ್ತೆಯ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಲೇ ಇರುವ ಸೊಸೆ.  ಗಂಡ-ಹೆಂಡತಿಯನ್ನು  ಬೇರೆ ಬೇರೆ ಮಾಡಲು ಅತ್ತೆ ಶಕುಂತಲಾ ದೇವಿ ಹೂಡುತ್ತಿರುವ ಪ್ಲ್ಯಾನೇ ಗಂಡ-ಹೆಂಡತಿಯನ್ನು ಮತ್ತಷ್ಟು, ಇನ್ನಷ್ಟು ಹತ್ತಿರ ಮಾಡುತ್ತಿದೆ. ಶಕುಂತಲಾದೇವಿ ಏನೇ ಪ್ಲ್ಯಾನ್​ ಮಾಡಿದ್ರೂ ಅದಕ್ಕೆ ತಕ್ಕ ಉತ್ತರ ಕೊಡುತ್ತಲೇ ಬಂದವಳು ಸೊಸೆ ಭೂಮಿಕಾ.  ಹೀಗಾಗೇ ಅನೇಕರು ಸೀರಿಯಲ್‌ ನ ತುಂಬಾ ಇಷ್ಟಪಟ್ಟು ನೋಡ್ತಾ ಬಂದಿದ್ದಾರೆ. ಆದ್ರೀಗ ಸೀರಿಯಲ್‌ ಸ್ಟೋರಿ ಹಲವು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ. ಇದೀಗ ಗೌತಮ್‌ ತಾಯಿ, ತಂಗಿ ಮನೆಗೆ ಬಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರೋ ಭಾಗ್ಯಗೆ ಈಗ ಹಳೆಯದ್ದೆಲ್ಲಾ ನೆನಪಿಗೆ ಬಂದಿದೆ.

ಹೌದು, ಗೌತಮ್‌ ಭೂಮಿಕಾ ಮ್ಯಾಚ್‌ ನೋಡ್ತಿದ್ರು.. ಈ ವೇಳೆ ಇಂಡಿಯಾ ಮ್ಯಾಚ್‌ ವಿನ್‌ ಆಗಿದೆ. ಇದೇ ಖುಷಿಯಲ್ಲಿ ಗೌತಮ್‌ ಪಟಾಕಿ ಸಿಡಿಸಿದ್ದಾನೆ.. ಈ ವೇಳೆ ಮಲಗಿದ್ದ ಭಾಗ್ಯಗೆ ಎಚ್ಚರವಾಗಿದೆ. ಪಟಾಕಿ ಸಿಡಿಸುವಲ್ಲಿ ಬಂದು ನೋಡ್ತಾಳೆ. ಅಷ್ಟೊತ್ತಿಗೆ ಗೌತಮ್‌ ಬಾಲ್ಯ ಆಕೆಗೆ ನೆನಪಾಗಿ, ಅಲ್ಲೇ ಕುಸಿದು ಬೀಳ್ತಾಳೆ.  ತಾನೆಲ್ಲಿ ಇದ್ದೇನೆ, ನನಗೇನು ಆಯ್ತು ಎಂದು ನೋಡಿದಾಗ, ಅತ್ತೆಯ ಫೋಟೋ ಕಾಣಿಸಿದೆ. ಆಗ ಆಕೆಗೆ ತಾನು ತನ್ನ ಮನೆಯಲ್ಲಿಯೇ ಇದ್ದೇನೆ ಎನ್ನುವುದು ತಿಳಿಯುತ್ತೆ.

ಇದೀಗ ಭಾಗ್ಯಮ್ಮನಿಗೆ ನೆನಪು ಮರುಕಳಿಸಿದೆ. ಇನ್ನುಮುಂದೆ ಅಸಲಿ ಆಟ ಶುರುವಾಗಲಿದೆ. ಆಕೆ ಶಕುಂತಲಾ ಮಾಡಿರೋ ಅನ್ಯಾಯ ನೆನಪಾದ್ರೆ ಅವಳ ಕಥೆ ಮುಗಿದಂತೆಯೇ. ಭಾಗ್ಯ ಶಕುಂತಲಾ ಯಾರು? ಆಕೆ ಮಾಡಿರೋ ಅನ್ಯಾಯದ ಬಗ್ಗೆ  ಗೌತಮ್​ಗೆ ಹೇಳೋ ಸಾಧ್ಯತೆ ಇರುತ್ತೆ. ಗೌತಮ್‌ ತನ್ನ ಚಿಕ್ಕಮ್ಮನಿಗೆ ತಕ್ಕ ಶಾಸ್ತಿ ಮಾಡ್ತಾನೆ ಅಂತಾ ಸೀರಿಯಲ್​  ಪ್ರೇಮಿಗಳ ಮಾತು ಹೇಳ್ತಿದ್ದಾರೆ. ಈ ಕತೆಯನ್ನ ಹೀಗೆ ರಬ್ಬರ್‌ ತರ ಎಳೆಯದೇ ಇದ್ರೆ ಸಾಕು..  ಟ್ವಿಸ್ಟ್​ ರೂಪದಲ್ಲಿ ಇನ್ನೊಂದಿಷ್ಟು ಕಥೆಗಳನ್ನು ತುರುಕಿದರೆ ಸೀರಿಯಲ್​ ಬೋರ್​ ಆಗುವುದಂತೂ ಗ್ಯಾರೆಂಟಿ ಅಂತಾ ವೀಕ್ಷಕರು ಹೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *