ಭೂಮಿಕಾ ಪ್ರೆಗ್ನೆಂಟ್‌.. ಮಗು ಮೇಲೆ ಶಕುಂತಲಾ ಕರಿನೆರಳು? – ಗೌತಮ್‌ ಮಲತಾಯಿ ಇವಳಲ್ವಾ?

ಭೂಮಿಕಾ ಪ್ರೆಗ್ನೆಂಟ್‌.. ಮಗು ಮೇಲೆ ಶಕುಂತಲಾ ಕರಿನೆರಳು? – ಗೌತಮ್‌ ಮಲತಾಯಿ ಇವಳಲ್ವಾ?

ಭೂಮಿಕಾ ದಿವಾನ್‌ ಮನೆಗೆ ಬಂದ್ಮೇಲೆ ಶಕುಂತಲಾ ಆಟ ನಡೆಯುತ್ತಿಲ್ಲ.. ಜೈದೇವ್‌, ಶಕುಂತಲಾ ಸೇರ್ಕೊಂಡು ದಿವಾನ್‌ ಸಾಮ್ರಾಜ್ಯವನ್ನ ಬೀಳಿಸಲು ಏನೇನೋ ತಂತ್ರ ರೂಪಿಸ್ತಾ ಬರ್ತಿದ್ದಾರೆ.. ಆದ್ರೆ ಭೂಮಿಕಾ ಇದಕ್ಕೆ ಅಡ್ಡಿ ಆಗ್ತಿದ್ದಾಳೆ. ಇದ್ರ ನಡುವೆ ಭೂಮಿಕಾ ಗುಡ್‌ನ್ಯೂಸ್‌ ಕೊಟ್ಟಿದ್ದಾಳೆ.  ಭೂಮಿಕಾ ತಾಯಿ ಆಗ್ತಿರೋ ವಿಚಾರವನ್ನ ಅಜ್ಜಿ ಮುಂದೆ ಹೇಳಿಕೊಂಡಿದ್ದಾಳೆ.. ಭೂಮಿಕಾ ತಾಯಿ ಆಗ್ತಿರೋ ಸುದ್ದಿ ತಿಳಿಯುತ್ತಿದ್ದಂತೆ ಆ ಮಗುಗೆ ಆಪತ್ತು ಕಾದಿದೆ ಅನ್ನೋ ಸೂಚನೆಯೂ ಸಿಕ್ಕಿದೆ. ಅಷ್ಟೇ ಅಲ್ಲ ಶಕುಂತಲಾ ಗೌತಮ್‌ ಮಲತಾಯಿ ಅಲ್ವಾ? ಶಕುಂತಲಾ ಹಿನ್ನೆಲೆ ಏನು ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಅಷ್ಟಕ್ಕೂ ಆಗಿದ್ದೇನು? ಸೀರಿಯಲ್ ನಲ್ಲಿ ಏನೇನು ಟ್ವಿಸ್ಟ್‌ ಕಾದಿದೆ ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ:  ಅತ್ತೆಯನ್ನ ಸಾಯಿಸ್ಬೇಕು.. ಮಾತ್ರೆ ಕೊಡಿ ಡಾಕ್ಟ್ರೇ..! –  ಸೊಸೆ ಖತರ್ನಾಕ್ ಪ್ಲ್ಯಾನ್‌ ಗೆ ಡಾಕ್ಟರ್‌ ಸುಸ್ತು!

ಅಮೃತಧಾರೆ ಸೀರಿಯಲ್‌ ಈಗ ಹೊಸ ತಿರುವು ಪಡೆದುಕೊಳ್ತಿದೆ. ದಿವಾನ್‌ ಕುಟುಂಬದ ನೆಮ್ಮದಿ ಹಾಳು ಮಾಡ್ಬೇಕು.. ಇಡೀ ಆಸ್ತಿಗೆ ತಾನೇ ಒಡತಿ ಆಗ್ಬೇಕು ಅಂತಾ ಶಕುಂತಲಾ ಏನೇನೋ ಪ್ಲ್ಯಾನ್‌ ಮಾಡ್ತಿದ್ದಾಳೆ. ಇದಕ್ಕೆ ಆಕೆಯ ಅಣ್ಣ, ಮಗ ಸಾಥ್‌ ಕೊಟ್ಟಿದ್ದಾರೆ.. ಮೊನ್ನೆಯಷ್ಟೇ ಗೌತಮ್‌ ನ ಸೋಲಿಸಲು ಶಕುಂತಲಾ ಹಾಗೂ ಜೈದೇವ್‌ ರಾಜೇಂದ್ರ ಭೂಪತಿ ಜೊತೆಗೆ ಕೈಜೋಡಿಸಿದ್ರು.. ಇನ್ನೇನು ಗೌತಮ್‌ ಚೇರ್‌ಮೆನ್‌ ಸ್ಥಾನದಿಂದ ಕೆಳಗಿಳಿಬೇಕು ಅನ್ನುವಷ್ಟರಲ್ಲಿ ಭೂಮಿಕಾ ಬಂದು ಕುತಂತ್ರಿಗಳ ಪ್ಲ್ಯಾನ್‌ ಉಲ್ಟಾ ಮಾಡಿದ್ಲು.. ಭೂಮಿಕಾ ಸುಧಾಳನ್ನ ಕರ್ಕೊಂಡು ಬಂದು ಗೌತಮ್‌ ನ ಬಚಾವ್‌ ಮಾಡಿದ್ಲು.. ಎಲ್ಲರೂ ಈಗ ಕಂಪನಿ ಉಳಿಸಿಕೊಂಡ ಸಂಭ್ರಮದಲ್ಲಿ ತೇಲಾಡ್ತಿದ್ದಾರೆ. ಈ ಹೊತ್ತಲ್ಲೇ ಭೂಮಿಕಾ ಗುಡ್‌ನ್ಯೂಸ್‌ ಕೊಟ್ಟಿದ್ದಾಳೆ. ಇದ್ರಿಂದ ಸಂಬ್ರಮ ಡಬಲ್‌ ಆಗಿದೆ.

ಗೌತಮ್-ಭೂಮಿಕಾ ಮದುವೆ ತುಂಬಾ ಲೇಟ್‌ ಆಗಿ ಆಗಿತ್ತು.. ಇಬ್ಬರಿಗೂ ತುಂಬಾ ಏಜ್‌ ಆಗಿದೆ. ಹೀಗಾಗಿ ಭೂಮಿಕಾ ತಾಯಿಯಾಗೋದು ಸ್ವಲ್ಪ ಕಷ್ಟ ಇದೆ ಎಂದು ವೈದ್ಯರು ಹೇಳಿದ್ದರು. ಆದ್ರೆ ಭೂಮಿಕಾ ಮಾತ್ರ ಮಗುವಿಗಾಗಿ ಹಂಬಲಿಸಿದ್ದಳು. ಇನ್ನು ಗೌತಮ್‌ ಗೂ ಮಕ್ಕಳಂದ್ರೆ ಪಂಚ ಪ್ರಾಣ.. ಹೀಗಾಗಿ ಮಕ್ಕಳಾಗಲಿಲ್ಲ ಅಂತಾ ಇಬ್ಬರೂ ಕೊರಗ್ತಿದ್ರು.. ಆದ್ರೀಗ ಭೂಮಿಕಾ ತಾಯಿಯಾಗ್ತಿದ್ದಾಳೆ.. ಇದ್ರ ಪ್ರೋಮೋವನ್ನ ಜೀಕನ್ನಡ ವಾಹಿನಿ ರಿಲೀಸ್‌ ಮಾಡಿದೆ. ಭೂಮಿ ಒಡಲಲ್ಲಿ ಹೊಸ ಕನಸು ಚಿಗುರಿದೆ ಎಂಬ ಟೈಟಲ್‌ ನೀಡಿ ಪ್ರೋಮೋ ರಿಲೀಸ್‌ ಮಾಡಲಾಗಿದೆ. ಪ್ರೋಮೋದಲ್ಲಿ ಭೂಮಿಕಾ ಗೌತಮ್‌ ಗೆ ಕಾಫಿ ಕೊಟ್ಟಿದ್ದಾಳೆ.. ಆಗ ಇದೇನು ಇಷ್ಟು ಸ್ವೀಟ್‌ ಮಾಡಿದ್ದೀರಾ ಅಂತಾ ಕೇಳುವಾಗ ಭೂಮಿಕಾ ವಾಮಿಟ್‌ ಮಾಡಿಕೊಂಡಿದ್ದಾಳೆ.. ಅದಾದ ಬಳಿಕ ನಿಮಗೆ ಬೆಲ್ಲದ ಕಾಫಿ ಮಾಡ್ಕೊಂಡು ಬರ್ತೇನೆ ಅಂತಾ ಹೊರಟಿದ್ದಾಳೆ. ನಾಚಿಕೊಂಡು ಬರ್ತಿದ್ದ ಭೂಮಿಕಾ ನೋಡಿ ಅಜ್ಜಿ ಕೇಳಿದ್ದಾರೆ. ಆಗ ಭೂಮಿಕಾ ನಾನು ವಾಮಿಟ್‌ ಮಾಡಿಕೊಂಡೆ ಅಂತಾ ಹೇಳಿದ್ದಾಳೆ. ಭೂಮಿಕಾ ಮಾತು ಕೇಳಿದ ಅಜ್ಜಿ ಇದು ಅದೇ.. ಅನುಮಾನವೇ ಇಲ್ಲ ಅಂತಾ ಹೇಳಿದ್ದಾಳೆ. ಆದ್ರೀಗ ಈ ಮಾತನ್ನ ಶಕುಂತಲಾ ಅಣ್ಣ ಲಕ್ಷ್ಮೀಕಾಂತ್ ಕೇಳಿಸ್ಕೊಂಡಿದ್ದಾನೆ..ಇದೀಗ ಲಕ್ಷ್ಮೀಕಾಂತ್‌ ಶಕುಂತಲಾಗೆ ಈ ವಿಚಾರ ಹೇಳೇ ಹೇಳ್ತಾನೆ.. ಆಕೆಗೆ ಈ ವಿಚಾರ ಗೊತ್ತಾದ್ರೆ ಮಗು ಹುಟ್ಟೋದೇ ಡೌಟ್‌ ಅಂತಾ ಪ್ರೋಮೋ ನೋಡಿದ ವೀಕ್ಷಕರು ಹೇಳ್ತಿದ್ದಾರೆ.

ಇದೀಗ ಸೀರಿಯಲ್‌ ಫ್ಯಾನ್ಸ್‌ ನಾನಾ ಕಾಮೆಂಟ್‌ ಮಾಡ್ತಿದ್ದಾರೆ. ಭೂಮಿಕಾ 99% ತಾಯಿಯಾಗಿದ್ದಾಳೆ. ಇದನ್ನು ಕೂಡ ಕನಸಿನ ಥರ ತೋರಿಸೋದಿಲ್ಲ ಎಂದು ಕಾಣುತ್ತದೆ. ಭೂಮಿಕಾ ತಾಯಿಯಾದರೆ ಆ ಮಗುವಿಗೆ ಎಲ್ಲ ಆಸ್ತಿ ಸೇರುತ್ತದೆ ಎನ್ನೋದು ಶಾಕುಂತಲಾ ಪ್ಲ್ಯಾನ್.‌ ಗೌತಮ್‌ಗೆ ತಾನು ತಂದೆ ಆಗ್ತಿದೀನಿ ಎನ್ನುವ ವಿಷಯ ಗೊತ್ತಾದ್ರೆ ಅವನು ಕುಣಿದು ಕುಪ್ಪಳಿಸುತ್ತಾನೆ. ಈ ವಿಷಯ ಎಲ್ಲರಿಗೂ ಗೊತ್ತಾದರೆ ಭೂಮಿ ಮಗುಗೆ ಅಪಾಯ ಕಟ್ಟಿಟ್ಟಬುತ್ತಿ. ಈಗ ಜಯದೇವ್‌ ಮಾವನಿಗೆ ಭೂಮಿಕಾ ಪ್ರಗ್ನೆಂಟ್‌ ಅನ್ನೋದು ಗೊತ್ತಾಗಿದೆ. ಈ ವಿಷಯ ಶಾಕುಂತಲಾ ಕಿವಿ ತಲುಪಿದೆ. ಈಗ ಶಾಕುಂತಲಾ ಆ ಮಗುಗೆ ಅಪಾಯ ತರಬಹುದು.. ಇನ್ನೊಂದಷ್ಟು ದಿನ ಈ ಸ್ಟೋರಿನಾ ರಬ್ಬರ್‌ ತರ ಎಳಿಬೋದು ಎಂದು ಕಾಮೆಂಟ್‌ ಮಾಡಿದ್ದಾರೆ .

ಮತ್ತೊಂದ್ಕಡೆ ಶಕುಂತಲಾ ರಹಸ್ಯ ಒಂದೊಂದಾಗೇ ರಿವೀಲ್‌ ಆಗ್ತಿದೆ.. ಆಕೆ ಯಾರು? ಆಕೆಯ ಹಿನ್ನೆಲೆ ಏನು ಅಂತಾ ಹಂತ ಹಂತವಾಗೇ ಗೊತ್ತಾಗ್ತಿದೆ.. ಸುಧಾಳನ್ನ ಗೌತಮ್‌ ನಿಂದ ದೂರ ಮಾಡಿದ್ದು ಆಕೆಯೇ ಅಂತಾ ಗೊತ್ತಾಗಿತ್ತು.. ಇದೀಗ ಗೌತಮ್‌ ತಂದೆ ಹಾಗೂ ಶಕುಂತಲಾಗೂ ಏನ್‌ ಸಂಬಂಧ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಗೌತಮ್‌ ಚೇರ್‌ಮೇನ್‌ ಸ್ಥಾನ ಗಟ್ಟಿಯಾಗ್ತಿದ್ದಂತೆ ಜೈದೇವ್‌ ಆಕ್ರೋಶದ ಮಾತುಗಳನ್ನಾಡಿದ್ದಾನೆ. ತಮ್ಮ ಈ ಸ್ಥಿತಿಗೆ ತಂದೆಯೇ ಕಾರಣ. ಅವನನ್ನು ಹೇಗೆ ನೀನು ಮದುವೆಯಾದೆ.. ನೋಡಲು ದೊಡ್ಡ ಮನೆ, ದಿವಾನ್ ಕುಟುಂಬ. ಆದ್ರೆ ನಾವೆಲ್ಲಾ ಗುಲಾಮರಂತೆ ಬದುಕುತ್ತಿದ್ದೇವೆ. ನಮ್ಮ ಇಂದಿನ ಈ ದಯನೀಯ ಸ್ಥಿತಿಗೆ ನಿನ್ನ ಗಂಡನೇ ಕಾರಣ. ನಮಗೆ ಆಗುತ್ತಿರೋ ಅನ್ಯಾಯ ಯಾರಿಗೂ ಕಾಣಿಸುತ್ತಿಲ್ಲ.. ಯಾವ ಸೌಭಾಗ್ಯಕ್ಕೆ ನಮ್ಮನ್ನು ಹುಟ್ಟಿಸಬೇಕಿತ್ತು? ನಮ್ಮನ್ನು ಹುಟ್ಟಿಸಿದ ಅಪ್ಪ, ನಿನ್ನ ಗಂಡ ಒಬ್ಬ ನಾಲಾಯಕ್.  ಎಲ್ಲಾ ಆಸ್ತಿಯನ್ನು ಅವರಿಬ್ಬರ  ಹೆಸರಿಗೆ ಬರೆದರೆ ನಾವೇನು ಮಾಡಬೇಕು ಎಂದು ಜೈದೇವ್ ಪ್ರಶ್ನೆ ಮಾಡಿದ್ದಾನೆ. ಇದೀಗ ಜೈದೇವ್‌ ಗೌತಮ್ ದಿವಾನ್ ಎರಡು ಮದುವೆಯಾಗಿದ್ರೆ ಶಕುಂತಲಾ ಮತ್ತು ಆಕೆಯ ನಾಲ್ಕು ಮಕ್ಕಳಿಗೂ ಆಸ್ತಿ ಕೊಡಬೇಕಿತ್ತು. ಆದ್ರೆ ಇಲ್ಲಿ ಎಲ್ಲವೂ ಗೌತಮ್ ಮತ್ತು ಸುಧಾ ಹೆಸರಿನಲ್ಲಿದೆ. ಹಾಗಾದ್ರೆ ಶಕುಂತಲಾ ಮಲತಾಯಿ ಅಲ್ಲವಾ? ದಿವಾನ್ ಕುಟುಂಬಕ್ಕೂ ಶಕುಂತಲಾಗೆ ಲಿಂಕ್ ಏನು? ಹಾಗಾದ್ರೆ ಶಕುಂತಲಾ ಗಂಡ ಯಾರು ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕರನ್ನ ಕಾಡ್ತಿದೆ. ಇದೀಗ ಶಕುಂತಲಾ ಯಾರು ಎಂಬ ಪ್ರಶ್ನೆಯನ್ನು ಮುನ್ನಲೆಗೆ ತರೋ ಸುಳಿವನ್ನು ನಿರ್ದೇಶಕರು ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *