ಭೂಮಿಕಾ ಕೈಗೆ ಸಿಕ್ಕಿಬಿದ್ದ ಶಕುಂತಲಾ! – ಗೌತಮ್ ಗೆ ತಾಯಿ ಸತ್ಯ ಗೊತ್ತಾಯ್ತಾ?
ದಿವಾನ್ ಚಿಕ್ಕಮ್ಮನ ಖೇಲ್ ಖಥಂ
ಅಮೃತಧಾರೆ ಸೀರಿಯಲ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಜೀವ ಹಾಗೂ ಮಹಿಮಾಳನ್ನ ಒಂದು ಮಾಡಲು ಭೂಮಿಕಾ ತವರು ಮನೆಗೆ ಸೇರಿದ್ಲು.. ಗೌತಮ್ ಜೊತೆ ಸೇರಿಕೊಂಡು ಹುಸಿ ಮುನಿಸಿನ ಡ್ರಾಮಾ ಮಾಡಿದ್ರು.. ಇದೀಗ ಮಹಿಮಾ ಜೀವ ಒಂದಾಗಿದ್ದಾರೆ.. ಭೂಮಿಕಾ ಮತ್ತೆ ದಿವಾನ್ ಮನೆ ಸೇರಿದ್ದಾಳೆ. ಭೂಮಿಕಾ ಮನೆಗೆ ಬರ್ತಿದ್ದಂತೆ ಶಕುಂತಲಾ ಗೌತಮ್ ತಾಯಿನಾ ಮುಗಿಸೋ ಪ್ಲ್ಯಾನ್ ಮಾಡಿದ್ದಾಳೆ. ಆದ್ರೆ ಅವಳ ಗ್ರಹಚಾರ ಕೆಟ್ಟಿದೆ ಅನ್ಸುತ್ತೆ.. ಇದೀಗ ಭೂಮಿಕಾ ಕೈಗೆ ಸಿಕ್ಕಿಬಿದ್ದಿದ್ದು, ಸರಿಯಾಗೆ ಏಟು ತಿಂದಿದ್ದಾಳೆ.. ಹಾಗಾದ್ರೆ ಗೌತಮ್ ಗೆ ತಾಯಿ ಸತ್ಯ ಗೊತ್ತಾಯ್ತಾ? ಈ ವಿಚಾರ ಗೊತ್ತಾದ ಗೌತಮ್ ಶಕುಂತಲಾಳನ್ನ ಸುಮ್ನೆ ಬಿಡ್ತಾನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಏಕದಿನ ಗೆದ್ರೆ ಚಾಂಪಿಯನ್ಸ್ ಟ್ರೋಫಿ – ಟ್ರಯಲ್ ಸರಣಿ PASS ಆಗ್ತಾರಾ?
ಗೌತಮ್ ಶಕುಂತಲಾಗೆ ತನ್ನ ಲೈಫ್ ನಲ್ಲಿ ವಿಶೇಷ ಸ್ಥಾನ ಕೊಟ್ಟಿದ್ದಾನೆ.. ಆಕೆಯನ್ನ ಅಮ್ಮ ಅಂತಾ ಕರೆಯೋದಲ್ಲದೇ, ದೇವರಂತೆ ಪೂಜಿಸ್ತಾನೆ.. ಆದ್ರೆ ಶಕುಂತಲಾ ಮಾತ್ರ ಗೌತಮ್ ಹಿಂದೆ ಕತ್ತಿ ಮಸೆಯೋ ಕೆಲ್ಸ್ ಮಾಡ್ತಿದ್ದಾಳೆ.. ಅವನನ್ನ ಮುಗಿಸಿ, ಆತನ ಆಸ್ತಿ ಹೊಡೆಯೋ ಪ್ಲ್ಯಾನ್ ಮಾಡ್ತಿದ್ದಾಳೆ. ಇದೀಗ ದಿವಾನ್ ಮನೆಗೆ ಗೌತಮ್ ಅಮ್ಮ, ತಂಗಿ, ಆಕೆಯ ಮಗಳು ಬಂದಿದ್ದಾರೆ.. ಎಲ್ಲಿ ತನ್ನ ರಹಸ್ಯ ಬಯಲಾಗುತ್ತೆ ಅನ್ನೋ ಭಯ ಶಕುಂತಲಾಳನ್ನ ಕಾಡ್ತಿದೆ.. ಹೀಗಾಗಿ ಆಕೆ ಗೌತಮ್ ತಾಯಿಯನ್ನ ಮುಗಿಸೋ ಪ್ಲ್ಯಾನ್ ಮಾಡಿ ಸಿಕ್ಕಿ ಬಿದ್ದಿದ್ದಾಳೆ..
ಅಮೃತಧಾರೆ ಸೀರಿಯಲ್ ಹೊಸ ತಿರುವು ಪಡೆದುಕೊಂಡಿದೆ. ಮಹಿಮಾ ಹಾಗೂ ಜೀವರನ್ನ ಒಂದು ಮಾಡಲು ಮಾಡಿದ್ದ ಪ್ಲ್ಯಾನ್ ಸಕ್ಸಸ್ ಆಗಿದೆ. ಮಹಿಮಾ ಜೀವನ ಮನೆ ಸೇರಿದ್ದಾಳೆ. ಇತ್ತ ಶಕುಂತಲಾ ದೇವಿ ತನ್ನ ಮಗಳನ್ನು ದಾಳವಾಗಿ ಇಟ್ಟುಕೊಂಡು ಭೂಮಿಕಾಳನ್ನು ಈ ಮನೆಗೆ ಬಾರದೇ ಇರುವ ಹಾಗೆ ಮಾಡಬೇಕು ಎಂದು ಅಂದುಕೊಳ್ಳುತ್ತಾಳೆ. ಭೂಮಿಕಾ ಮನೆಗೆ ಬಂದರೆ ಖಂಡಿತವಾಗಿಯೂ ತನ್ನ ಮಾತು ಯಾವುದು ನಡೆಯುವುದಿಲ್ಲ ಎನ್ನುವುದು ಆಕೆಗೆ ಗೊತ್ತಿದೆ. ಹೀಗಾಗೇ ಭೂಮಿಕಾಳನ್ನು ಈ ಮನೆಗೆ ಬಾರದೇ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ತುಂಬಾ ಪ್ರಯತ್ನಪಟ್ಟಿದ್ಲು. ಆದ್ರೆ ಭೂಮಿಕಾ ದಿವಾನ್ ಮನೆಗೆ ರೆಬಲ್ ಆಗಿ ಎಂಟ್ರಿ ಕೊಟ್ಟಿದ್ದಾಳೆ.
ಭೂಮಿಕಾ ಮನೆಗೆ ಎಂಟ್ರಿಕೊಡ್ತಿದ್ದಂತೆ ಶಕುಂತಲಾ ಗೌತಮ್ ತಾಯಿಯನ್ನ ಕೊಲ್ಲಲು ಪ್ರಯತ್ನಪಟ್ಟಿದ್ದಾಳೆ.. ಯಾರು ಇಲ್ಲದ ಸಮಯ ನೋಡ್ಕೊಂಡು ಗೌತಮ್ ತಾಯಿ ರೂಮ್ ಗೆ ಹೋಗಿದ್ದಾಳೆ. ಬಳಿಕ ದಿಂಬಿನಿಂದ ಆಕೆಯ ಮುಖಕ್ಕೆ ಮುಚ್ಚಿ ಉಸಿರುಗಟ್ಟಲು ಪ್ರಯತ್ನಿಸಿದ್ದಾಳೆ. ಈ ಗೊತ್ತಲ್ಲೇ ಗೌತಮ್ ಹಾಗೂ ಭೂಮಿಕಾ ಅಲ್ಲಿಗೆ ಬಂದಿದ್ದಾರೆ.. ಆದ್ರೆ ಶಕುಂತಲಾ ಕರ್ಟನ್ ಒಳಗೆ ಅಡಗಿ ಕೂತಿದ್ಲು. ಎಲ್ಲರೂ ಹೋದ್ಮೇಲೆ ರೂಮ್ ನಿಂದ ಆಚೆ ಹೊರಟಿದ್ಲು.. ಆದ್ರೆ ಆಕೆ ಭೂಮಿಕಾ ಕೈಗೆ ಸಿಕ್ಕಿಬಿದ್ದಿದ್ದಾಳೆ. ಭೂಮಿಕಾ ಕತ್ತಲಲ್ಲಿ ಕೋಲಿನಿಂದ ಶಕುಂತಲಾ ತಲೆಗೆ ಹೊಡೆದಿದ್ದಾಳೆ. ಇದೀಗ ಗೌತಮ್ ತಾಯಿಯನ್ನ ಕೊಲ್ಲಲು ಪ್ರಯತ್ಮ ಪಟ್ಟಿದ್ದು ಶಕುಂತಲಾ ಅಂತಾ ಗೊತ್ತಾಯ್ತಾ? ಸತ್ಯ ಗೊತ್ತಾದ ಭೂಮಿಕಾ ಏನ್ ಮಾಡ್ತಾಳೆ. ಗೌತಮ್ ಗೆ ಶಕುಂತಲಾ ಹಾಗೂ ತಾಯಿ ರಹಸ್ಯ ಗೊತ್ತಾದ್ರೆ ಏನ್ ಮಾಡ್ತಾನೆ? ಆಕೆಯನ್ನ ಮನೆಯಿಂದ ಆಚೆ ಹಾಕ್ತಾನಾ ಅಂತಾ ಕಾದುನೋಡ್ಬೇಕು.