ಅಮೃತಧಾರೆ ಬಿಟ್ಟ ಮತ್ತೊಬ್ಬ ನಟಿ? – ಮಲ್ಲಿ ಪಾತ್ರಕ್ಕೆ ರಾಧಾ ಗುಡ್‌ಬೈ?
ಮಲ್ಲಿ ಈಗ ಭಾರ್ಗವಿ LLB!

ಅಮೃತಧಾರೆ ಸೀರಿಯಲ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಒಂದ್ಕಡೆ ಜೀವ ಹಾಗೂ ಮಹಿಮಾ ಸಂಸಾರದಲ್ಲಿ ಬಿರುಕು ಬಿದ್ದಿದೆ. ಮತ್ತೊಂದ್ಕಡೆ ಜೈದೇವ್ ಕಳ್ಳಾಟ ಮಲ್ಲಿಗೆ ಗೊತ್ತಾಗಿದೆ. ಇದೀಗ ಸತ್ಯ ಗೊತ್ತಾದ ಮಲ್ಲಿ ಮುಂದೇನು ಮಾಡ್ತಾಳೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ಈ ಹೊತ್ತಲ್ಲೇ ಮಲ್ಲಿ ಸೀರಿಯಲ್ ಫ್ಯಾನ್ಸ್ ಶಾಕಿಂಗ್ ನ್ಯೂಸ್ ಕೊಟ್ರಾ ಅನ್ನೋ ಅನುಮಾನ ಮೂಡಿದೆ. ಇದೀಗ ಮಲ್ಲಿ ಪಾತ್ರಧಾರಿ ರಾಧಾ ಭಗವತಿ ಅಮೃತಧಾರೆ ಸೀರಿಯಲ್ ಬಿಡ್ತಾರಾ ಅನ್ನೋ ಪ್ರಶ್ನೆ ಕಾಡ್ತಿದೆ. ಇದಕ್ಕೆ ಕಾರಣ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಹೊಸ ಸೀರಿಯಲ್.. ಇದ್ರಲ್ಲಿ ರಾಧಾ ನಾಯಕಿಯಾಗಿ ನಟಿಸ್ತಿದ್ದಾರೆ.
ಇದನ್ನೂ ಓದಿ: ಅಬ್ಬಾ.. ದಿನಕ್ಕೆ ಬಾರತದಲ್ಲಿ ಇಷ್ಟೊಂದು ಮಕ್ಕಳು ಹುಟ್ಟುತ್ತಾರಾ!?
ಅಮೃತಧಾರೆ ಸೀರಿಯಲ್ ವೀಕ್ಷಕರ ಮನಗೆದ್ದಿದೆ. ಟಿ ಆರ್ ಪಿ ರೇಸ್ ನಲ್ಲೂ ಸೀರಿಯಲ್ ಮುಂದಿದೆ. ಭೂಮಿಕಾ ಡುಮ್ಮುಸರ್ ಕಾಂಬಿನೇಷನ್ ವೀಕ್ಷಕರಿಗೆ ಸಖತ್ ಇಷ್ಟ.. ಪ್ರತಿಯೊಂದು ಪಾತ್ರವೂ ಅಚ್ಚುಕಟ್ಟಾಗಿ ಮೂಡಿ ಬರುತ್ತಿದೆ. ಇದೀಗ ಜೈದೇವ್ ಕಳ್ಳಾಟ ಮತ್ತೊಮ್ಮೆ ಮಲ್ಲಿ ಮುಂದೆ ಬಯಲಾಗಿದೆ. ಇದೀಗ ಮುಂದೇನಾಗುತ್ತೆ ಅಂತಾ ವೀಕ್ಷಕರು ಕುತೂಹಲದಿಂದ ಕಾಯ್ತಿದ್ದಾರೆ.
ಹೌದು, ಗಂಡನ ಮತ್ತೊಂದು ಮುಖವನ್ನು ಮಲ್ಲಿ ಅರಿತಿದ್ದಳು. ಒಂದು ಸಲ ಗಂಡ ಮಾಡಿದ ತಪ್ಪನ್ನು ಕ್ಷಮಿಸಿದ್ದ ಮಲ್ಲಿ, ಇದೀಗ ಮತ್ತೊಂದು ಸಲವೂ ತನಗೆ ಮೋಸ ಮಾಡ್ತಿದ್ದಾನೆ ಅನ್ನೋದು ಮಲ್ಲಿಗೆ ಗೊತ್ತಾಗಿದೆ. ಇದೀಗ ಗಂಡನ ಕಳ್ಳಾಟ ಪ್ರತ್ಯಕ್ಷ ಕಂಡ ನಂತರ ಮೊದಲಿಗೆ ಅತ್ತು ತನ್ನನ್ನು ತಾನು ಬೈದು ಕೊಂಡರೆ, ಕೊನೆಗೆ ಇಲ್ಲ ನಾನೇ ಬದಲಾಗಬೇಕು.. ಜೈದೇವ್ ಗೆ ಸರಿಯಾದ ಪಾಠ ಕಲಿಸಬೇಕು ಎಂದು ಹೊರಟಿದ್ದಾಳೆ.. ಇತ್ತೀಚೆಗೆ ಪ್ರಸಾರವಾದ ಪ್ರೊಮೋದಲ್ಲಿ ಮಲ್ಲಿ ಇದ್ದಕ್ಕಿದ್ದಂತೆ ತನ್ನ ತಾತನ ಮನೆಗೆ ಹೋಗಿದ್ದಾಳೆ. ಭೂಮಿಕಾ ಮಲ್ಲಿ ಜೊತೆ ಫೋನಲ್ಲಿ ಮಾತನಾಡುತ್ತಾ, ನೀನು ಅಲ್ಲಿ ಆರಾಮಾಗಿರು.. ಇಲ್ಲಿಯ ಬಗ್ಗೆ ಟೆನ್ಶನ್ ಬೇಡ ಎಂದಿದ್ದಾಳೆ. ಈ ಸಂಭಾಷಣೆ ನೋಡಿದ ವೀಕ್ಷಕರಿಗೆ ಸದ್ಯದಲ್ಲಿ ಮಲ್ಲಿ ಪಾತ್ರಧಾರಿ ಬದಲಾಗ್ತಾರೆ ಎನ್ನುವ ಸೂಚನೆ ಸಿಕ್ಕಿದೆ.
ಅಮೃತಧಾರೆ ಸೀರಿಯಲ್ ನಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆಗಳು ಆಗಿವೆ. ಸೀರಿಯಲ್ ನಲ್ಲಿ ಪಾತ್ರಳಿಗೂ ಟ್ವಿಸ್ಟ್ ಕೊಡಲಾಗಿದೆ. ಈ ಹಿಂದೆ ಮಹಿಮಾ ನೆಗೆಟಿವ್ ರೋಲ್ ನಲ್ಲಿದ್ರೆ, ಜೀವ ಪಾಸಿಟಿವ್ ರೋಲ್ ಮಾಡ್ತಿದ್ರು.. ಇದೀಗ ಇಬ್ಬರು ಬದಲಾಗಿದ್ದಾರೆ.. ಅವರ ವರ್ತನೆ ಬದಲಾಗುತ್ತಿದ್ದಂತೆ ನಟ ನಟಿಯರನ್ನೂ ಬದಲಾವಣೆ ಮಾಡಲಾಗಿತ್ತು.. ಸಾರಾ ಅಣ್ಣಯ್ಯ ಮತ್ತು ಶಶಿ ಹೆಗ್ಡೆ ಸೀರಿಯಲ್ ನಿಂದ ಆಚೆ ಬಂದಿದ್ದರು. ಇದೀಗ ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದ ರಾಧಾ ಭಗವತಿ ಕೂಡ ಸೀರಿಯಲ್ನಿಂದ ಹೊರ ಬಂದಿದ್ದಾರೆ ಎಂಬ ಅನುಮಾನ ಮೂಡಿದೆ.
ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ವಿಶೇಷವಾಗಿ ಗುರುತಿಸಿಕೊಂಡಿದೆ. ಜಯದೇವನ ಕುತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿರುವ ಭೂಮಿಕಾಗೆ ಮಲ್ಲಿ ಸಾಥ್ ಕೊಡುತ್ತಿದ್ದಾಳೆ. ಮಲ್ಲಿಯನ್ನು ಹಂತ ಹಂತವಾಗಿ ಕಾಪಾಡ್ತಿದ್ದಾಳೆ ಭೂಮಿಕಾ. ಮಲ್ಲಿ-ಭೂಮಿಕಾ ಕಾಂಬಿನೇಷನ್ ಹೊಸ ತಿರುವಿಗೆ ಕಾರಣವಾಗಿದೆ. ಇನ್ನೂ, ಮಲ್ಲಿ ಪಾತ್ರಕ್ಕೆ ಜೀವ ತುಂಬಿರೋ ರಾಧಾ ಭಗವತಿ ವೀಕ್ಷಕರಿಗೆ ಹತ್ತಿರವಾಗಿರೋ ಸುಂದರಿ. ರಾಮಾಚಾರಿಯ ತಂಗಿ ಶೃತಿ ಪಾತ್ರದ ಮೂಲಕ ರಂಜಿಸಿದ್ದ ರಾಧಾ ಭಗವತಿ ಅಮೃತಧಾರೆಯ ಮಲ್ಲಿ ಆಗಿಯೂ ಇಷ್ಟವಾಗಿದ್ದರು. ಇದೀಗ ದಿಢೀರ್ ಅಂತ ಮತ್ತೊಂದು ಹೊಚ್ಚ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ನಟಿ ರಾಧಾ ಭಗವತಿ ಸದ್ಯದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭಾರ್ಗವಿ LLB ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಸೀರಿಯಲ್ ಪ್ರೋಮೋ ಕೂಡ ಸಖತ್ ಸದ್ದು ಮಾಡುತ್ತಿದೆ. ಸ್ವಪ್ನ ಕೃಷ್ಣರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ಹೊಸ ಕಥೆಗೆ ರಾಧಾ ಭಗವತಿ ನಾಯಕಿಯಾಗಿದ್ದಾರೆ. ಇನ್ನು ಈ ಹೊಸ ಧಾರಾವಾಹಿಯ ಪ್ರೊಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿಲ್ಲ. ಆದ್ರೆ ಪ್ರೋಮೋ ನೋಡಿದ ಸೀರಿಯಲ್ ಫ್ಯಾನ್ಸ್ ಧಾರಾವಾಹಿ ರಿಮೇಕ್ ಎಂದು ಹೇಳಿದ್ದಾರೆ. ಈ ಧಾರಾವಾಹಿಯೂ ಮೂಲತಃ ಮರಾಠಿಯಲ್ಲಿ ಪ್ರಸಾರವಾಗಿದ್ದು, ಅದನ್ನು ತೆಲುಗುವಿನಲ್ಲಿ ರಿಮೇಕ್ ಮಾಡಲಾಗಿದೆ. ತೆಲುಗುವಿನಲ್ಲಿ ಗೀತಾ LLB ಎಂದು ಧಾರಾವಾಹಿ ಪ್ರಸಾರವಾಗುತ್ತಿದೆ. ಈಗ ಇದನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗಿದೆ. ಕನ್ನಡದಲ್ಲಿ ರಾಧಾ ಭಗವತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ನಟಿ ರಾಧಾ ಭಗವತಿ ಕನ್ನಡ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಮಿಂಚುತ್ತಿದ್ದು, ಒಂದ್ಸಲ ಮೀಟ್ ಮಾಡೋ ಣ, ಅಪಾಯವಿದೆ ಎಚ್ಚರಿಕೆ ಹಾಗೂ ವಸಂತಕಾಲದ ಹೂವುಗಳು ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯ ಅಪಾಯವಿದೆ ಎಚ್ಚರಿಕೆ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಲ್ಲಿ ಲಾಯರ್ ಆಗಿ ಮಿಂಚಲಿದ್ದಾರೆ. ಸೀರಿಯಲ್ ಪ್ರೋಮೋ ರಿಲೀಸ್ ಆಗ್ತಿದ್ದಂತೆ ಅಮೃತಧಾರೆ ಸೀರಿಯಲ್ ಕತೆ ಏನು ಅಂತಾ ಕೇಳ್ತಿದ್ದಾರೆ ಫ್ಯಾನ್ಸ್.