ಒಂದಾದ ಅಮ್ಮ ಮಗ – ಶಕುಂತಲಾಗೆ ಶಾಕ್‌ ಕೊಟ್ಟ ಭೂಮಿಕಾ

ಒಂದಾದ ಅಮ್ಮ ಮಗ – ಶಕುಂತಲಾಗೆ ಶಾಕ್‌ ಕೊಟ್ಟ ಭೂಮಿಕಾ

ಅಮೃತಧಾರೆ ಸೀರಿಯಲ್‌ ಈಗ ರೋಚಕ ತಿರವು ಪಡೆದುಕೊಂಡಿದೆ. ಸತ್ತಿದ್ದಾರೆ ಅಂದುಕೊಂಡಿದ್ದ ಗೌತಮ್‌ ತಾಯಿ ಹಾಗೂ ತಂಗಿ ಸಿಕ್ಕಿದ್ದಾರೆ. ಇದೀಗ ಗೌತಮ್‌ ತಾಯಿ ತಂಗಿಯನ್ನ ಮನೆಗೆ ಕರೆತಂದು ಕುತಂತ್ರಿ ಶಕುಂತಳಾಗೆ ಶಾಕ್‌ ಕೊಟ್ಟಿದ್ದಾನೆ. ಇದೀಗ ಶಕುಂತಳಾ ಪ್ಲ್ಯಾನ್‌ ಉಲ್ಟಾ ಆಗಿದೆ. ಅಷ್ಟೇ ಅಲ್ಲ ಗೌತಮ್‌ ಮನೆಗೆ ಮತ್ತೊಬ್ಬಳ ಎಂಟ್ರಿಯಾಗಿದೆ.

ಇದನ್ನೂ ಓದಿ: ಸುಮಲತಾ ಅಂಬರೀಶ್‌ ಬಳಸುತ್ತಿದ್ದ ಕಾರು ಬೇಡ ಅಂದ್ರಾ ಹೆಚ್‌ಡಿಕೆ? – ಏನಿದು ಕಾರ್‌ ವಾರ್?‌

ಅಮೃತಧಾರೆ ಸೀರಿಯಲ್ ನಲ್ಲಿ ಗೌತಮ್‌ ಹಾಗೂ ಆತನ ತಾಯಿ ಒಂದೇ ಮನೆಯಲ್ಲಿದ್ರು.. ಅವರಿಬ್ಬರು ಭೇಟಿ ಆಗ್ತಾರೆ ಅಂತಾ ಅಂದ್ಕೊಳ್ಳುವಾಗಲೇ ಡೈರೆಕ್ಟರ್‌ ಏನಾದ್ರೂ ಒಂದು ಟ್ವಿಸ್ಟ್‌ ಕೊಟ್ಟು ತಪ್ಪಿಸ್ತಾ ಇದ್ರು.. ಬಳಿಕ ಅಮ್ಮ ಸತ್ತಿದ್ದಾಳೆ ಅಂತಾ ಅಂದ್ಕೊಂಡು ಆತ ಕಾರ್ಯ ಕೂಡ ಮಾಡಿದ್ದ.. ಆದ್ರೀಗ ಕೊನೆಗೂ ಅಮ್ಮ ಮಗ ಒಂದಾಗಿದ್ದಾರೆ. ಗೌತಮ್‌ ಕಣ್ಣಮುಂದೆ ಈಗ ಭಾಗ್ಯ ಬಂದಿದ್ದಾಳೆ. ಆತನನ್ನ ಗುಂಡು ಅಂತಾ ಪತ್ತೆ ಮಾಡಿದ್ದಾಳೆ.. ಅಮ್ಮನನ್ನ ನೋಡಿದ ಗೌತಮ್‌ ಸಣ್ಣ ಮಗುವಿನಂತೆ ಕಣ್ಣೀರಿಟ್ಟಿದ್ದಾನೆ. ಇದೀಗ ಅಮ್ಮ ಮಗನ ಸಮ್ಮಿಲನ ನೋಡಿ ಗೌತಮ್‌ ಮನೆಯವರು ಮಾತ್ರ ಸೀರಿಯಲ್‌ ವೀಕ್ಷಕರು ಕೂಡ ಭಾವುಕರಾಗಿದ್ದಾರೆ..

ಆದ್ರೆ ಇತ್ತ ಶಕುಂತಲಾ ಫುಲ್ ಹ್ಯಾಪಿ ಮೂಡ್‌ನಲ್ಲಿ ಇರುತ್ತಾಳೆ. ಭಾಗ್ಯಾ, ಸುಧಾ ಸಿಕ್ಕಿ ಬಿದ್ದಿದ್ದಾರೆ. ಅವರ ಪ್ರಾಣವನ್ನು ತೆಗೆದ್ರೆ ತನಗಿರುವ ಸಂಕಷ್ಟ ಬಹಳ ಸುಲಭವಾಗಿ ಕಳೆದು ಹೋಗುತ್ತದೆ. ಅದಾದ ನಂತರ ಈ ಇಡೀ ಮನೆ ತನ್ನ ಹಿಡಿತದಲ್ಲೇ ಇರುತ್ತದೆ ಎಂದು ಖುಷಿಯಾಗಿದ್ದಾಳೆ. ಇದೇ ಸಮಯಕ್ಕೆ ಸರಿಯಾಗಿ ಗೆಳತಿಯ ಫೋನ್ ಕಾಲ್ ಬಂದಿದ್ದು, ವಿದೇಶದಿಂದ ಮನೆಗೆ ಬರುತ್ತಿರುವಂತೆ ಹೇಳುತ್ತಾಳೆ. ಇದ್ರಿಂದಾಗಿ ಶಕುಂತಲಾ ಭಾಗ್ಯಾಳನ್ನು ಕೊಲ್ಲಬೇಕು ಎಂದುಕೊಂಡ ಸಮಯವನ್ನು ಮುಂದಕ್ಕೆ ಹಾಕುತ್ತಾಳೆ. ತನ್ನ ಸ್ನೇಹಿತೆ ಬಂದು ಹೋದ ಬಳಿಕ ಮಾಡೋಣ, ಹೇಗಿದ್ದರೂ ಭಾಗ್ಯಾ ತಮ್ಮ ಸುಪರ್ಧಿಯಲ್ಲಿದ್ದಾಳೆ ಎಂದು ಭಾವಿಸಿದ್ದಾಳೆ. ಆದ್ರೆ ಈ ಖುಷಿ ಹೆಚ್ಚು ಕಾಲ ಉಳಿಲಿಲ್ಲ. ಯಾಕ್ರಂದ್ರೆ ಅಷ್ಟೊತ್ತಿಗಾಗಲೇ ಭಾಗ್ಯ ಹಾಗೂ ಸುಧಾ ಗೌತಮ್‌ ಮನೆಗೆ ಕಾಲಿಟ್ಟಿದ್ದಾರೆ.

ಇನ್ನು ದಮಯಂತಿ ಎಂಬ ಹೊಸ ಪಾತ್ರ ಮನೆಗೆ ಬರುತ್ತಿದ್ದು, ಆಕೆ ಯಾರಿರಬಹುದು? ಈಗ ಯಾಕೆ ಈ ಹೊಸ ಪಾತ್ರ ಆಗಮಿಸುತ್ತಿದೆ ಎಂಬ ಕುತೂಹಲ ಮೂಡಿದೆ. ಇದರ ಜೊತೆಗೆ ಭಾಗ್ಯಾ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಸಮಾಧಾನವಾಗಿರುವ ಶಕುಂತಲಾಳಿಗೆ ಗೌತಮ್ ತನ್ನ ಕುಟುಂಬವನ್ನು ಮನೆಗೆ ಕರೆದುಕೊಂಡು ಬಂದಾಗ ಏನು ಮಾಡುತ್ತಾಳೆ. ಇನ್ನು ಯಾರನ್ನ ಆಕೆ ಕಿಡ್ನ್ಯಾಪ್ ಮಾಡಿಸಿದ್ದು..? ಇದೆಲ್ಲಾ ಕನಸಾಗಿರಬಹುದಾ ಎಂಬ ಪ್ರಶ್ನೆಗಳು ಎದ್ದಿವೆ. ಈ ಎಲ್ಲಾ ಪ್ರಶ್ನೆಗಳಿಗೂ ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ಸಿಗ್ಬೋದು.

Shwetha M

Leave a Reply

Your email address will not be published. Required fields are marked *