ಅಪ್ಪುಗೆ ಗೊತ್ತಾಯ್ತು ಅಪ್ಪನ ರಹಸ್ಯ! – ಗೌತಮ್‌ನ ಅಪ್ಪಿಕೊಂಡ ಆಕಾಶ್‌

ಅಪ್ಪುಗೆ ಗೊತ್ತಾಯ್ತು ಅಪ್ಪನ ರಹಸ್ಯ! – ಗೌತಮ್‌ನ ಅಪ್ಪಿಕೊಂಡ ಆಕಾಶ್‌

ಶಕುಂತಲಾ ಹಾಗೂ ಜೈದೇವ್‌ ಕುತಂತ್ರದಿಂದ ಗೌತಮ್‌ ಹಾಗೂ ಭೂಮಿಕಾ ದೂರವಾಗಿದ್ದಾರೆ. ಒಂದೇ ವಠಾರದಲ್ಲಿ ಇದ್ರೂ ಅಪರಿಚಿತರಂತೆ ಬೇರೆ ಬೇರೆ ಮನೆಯಲ್ಲಿ ಜೀವನ ಸಾಗಿಸ್ತಾ ಇದ್ದಾರೆ. ಆದ್ರೀಗ ಸೀರಿಯಲ್‌ನಲ್ಲಿ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ ಸೀರಿಯಲ್‌ ಡೈರೆಕ್ಟರ್.‌ ಇದೀಗ ಭೂಮಿಕಾ ಹಾಗೂ ಗೌತಮ್‌ ಮುಚ್ಚಿಟ್ಟಿದ್ದ ಗುಟ್ಟು ರಟ್ಟಾಗಿದೆ. ಅಪ್ಪುಗೆ ಗೌತಮ್‌ ತನ್ನ ಅಪ್ಪ ಅಂತ ಗೊತ್ತಾಗಿದೆ.

ಇದನ್ನೂ ಓದಿ: ರಕ್ಷಿತಾ ಆಟಕ್ಕೆ ಮನೆಮಂದಿ ಶಾಕ್‌! – ರಕ್ಷು ಆಟದ ಬಗ್ಗೆ ಅಪಸ್ವರ ತೆಗೆದ ಕಾವ್ಯಾ

ಆಕಾಶ್‌ ಸಣ್ಣ ಮಗು ಇರುವಾಗ್ಲೇ ಭೂಮಿಕಾ ಮನೆಬಿಟ್ಟು ಬಂದಿದ್ಲು. ಯಾರ ಸಂಪರ್ಕಕ್ಕೂ ಇರ್ಲಿಲ್ಲ. ಇನ್ನು ಗೌತಮ್‌ ಕೂಡ ಮನೆ, ಆಸ್ತಿ ಎಲ್ಲವನ್ನ ತೊರೆದು, ಒಂಟಿಯಾಗಿ ಜೀವನ ಸಾಗಿಸ್ತಾ ಇದ್ದ. ಆದ್ರೀಗ ಗೌತಮ್‌ ಗೆ ಭೂಮಿಕಾ ಸಿಕ್ಕಿದ್ರೂ ಬೇರೆ ಬೇರೆ ಮನೆಯಲ್ಲಿ ಇದ್ದಾರೆ. ಅಪ್ಪುಗೆ ತನ್ನ ತಂದೆ ಯಾರು ಅನ್ನೋದು ಗೊತ್ತಿರ್ಲಿಲ್ಲ. ಗೌತಮ್‌ ಗೆ ಅಪ್ಪು ತನ್ನ ಮಗ ಅಂತ ಗೊತ್ತಿದ್ರೂ ಇಷ್ಟು ದಿನ ಸತ್ಯ ಹೇಳಿರ್ಲಿಲ್ಲ. ಆದ್ರೀಗ ಮಿಂಚು ಹಾಗೂ ಅಪ್ಪುಗೆ ಸತ್ಯ ಗೊತ್ತಾಗಿದೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಭೂಮಿಕಾ ಕಪಾಟಿನ ಮೇಲ್ಭಾಗದ ಸ್ಯೂಟ್​ಕೇಸ್​​ನಲ್ಲಿ ಗೌತಮ್ ಜೊತೆಗಿನ ಮದುವೆ ಫೋಟೋ ಇಟ್ಟಿದ್ದಳು. ಬ್ಯಾಗ್ ತೆಗೆಯುವಾಗ ಫೋಟೋ ಇಟ್ಟ ಸ್ಯೂಟ್​ಕೇಸ್ ಬಿದ್ದು ಹೋಗಿದೆ. ಈ ವೇಳೆ ಫೋಟೋ ಕೂಡ ಬಿದ್ದಿದೆ. ಫೋಟೋ ನೋಡುತ್ತಿದ್ದಂತೆ ಆಕಾಶ್​ಗೆ ಶಾಕ್ ಆಗಿದೆ. ಆತನಿಗೆ ತಂದೆ ಯಾರು ಎಂಬ ಸತ್ಯ ಗೊತ್ತಾಗಿದೆ.

ಗೌತಮ್ ಅವರು ನನ್ನ ತಂದೆನಾ ಎಂದು ಮನಸ್ಸಿಲ್ಲೇ ಅಂದುಕೊಂಡಿದ್ದಾನೆ ಆಕಾಶ್. ನಂತರ ಓಡೋಡಿ ಬಂದು ಗೌತಮ್​ನ ಹಗ್ ಮಾಡಿಕೊಂಡಿದ್ದಾನೆ. ನೀವು ನನ್ನ ತಂದೆನಾ ಎಂದು ಖುಷಿಪಟ್ಟಿದ್ದಾನೆ. ಇಷ್ಟು ದಿನ ತಂದೆ ಇಲ್ಲ ಎಂಬ ನೋವು ಆತನಿಗೆ ಬಹುವಾಗಿ ಕಾಡುತ್ತಾ ಇತ್ತು. ಈಗ ತಂದೆ ಸಿಕ್ಕಿರೋದು ಆತನಿಗೆ ಖುಷಿ ಕೊಟ್ಟಿದೆ. ಈಗ ಗೌತಮ್ ಮಿಂಚುವನ್ನ ದತ್ತು ಪಡೆದಿದ್ದಾನೆ. ಮಿಂಚುಗೂ ಗೌತಮ್‌ ಮದುವೆ ಫೋಟೋ ಸಿಕ್ಕಿದೆ. ಇದೀಗ ಮಿಂಚು ರಹಸ್ಯ ಕೂಡ ರಿವೀಲ್‌ ಆಗುತ್ತಾ? ಮಿಂಚು ಗೌತಮ್-ಭೂಮಿಕಾ ಮಗಳು ಅನ್ನೋದು ಗೊತ್ತಾಗುತ್ತಾ ಅನ್ನೋ ಕ್ಯೂರಿಯಾಸಿಟಿ ವೀಕ್ಷರಲ್ಲಿ ಮೂಡಿದೆ.

Shwetha M