ಜೈದೇವ್‌ಗೆ ಕರ್ಮ ರಿಟರ್ನ್!‌ – ಬೀದಿಗೆ ಬಿದ್ದ ಜೆಡಿ.. ಗೌತಮ್ ತೆಕ್ಕೆಗೆ ಬಂತು ಹಳೇ ಸಾಮ್ರಾಜ್ಯ!

ಜೈದೇವ್‌ಗೆ ಕರ್ಮ ರಿಟರ್ನ್!‌ – ಬೀದಿಗೆ ಬಿದ್ದ ಜೆಡಿ.. ಗೌತಮ್ ತೆಕ್ಕೆಗೆ ಬಂತು ಹಳೇ ಸಾಮ್ರಾಜ್ಯ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಇಷ್ಟು ದಿನ ತಾನಾಡಿದ್ದೇ ಆಟ ಎಂದು ಮೆರೆಯುತ್ತಿದ್ದ ಜೈದೇವ್‌ ಪಾಪದ ಕೊಡ ತುಂಬಿದೆ. ಮಲ್ಲಿಗೆ ಕೈಕೊಟ್ಟು ಬೇಬಿ ಬೇಬಿ ಎಂದು ದೀಯಾ ಹಿಂದೆ ಹೋದ ಜೈದೇವ್‌ಗೆ ಈಗ ಇರೋದನ್ನೆಲ್ಲಾ ಕಳೆದುಕೊಂಡು ಬೀದಿಪಾಲಾಗಿದ್ದಾನೆ. ಮತ್ತೊಂದ್ಕಡೆ ಗೌತಮ್‌ ದಿವಾನ್‌ ತನ್ನ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾನೆ.

ಇದನ್ನೂ ಓದಿ:ಪ್ರಿಯಕರನ ಜೊತೆ ಇರುವ ಫೋಟೋ ಸ್ಟೇಟಸ್‌ ಹಾಕಿದ ಪತ್ನಿ! – ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತ ಗಂಡ ನೇಣಿಗೆ ಶರಣು!

ಶಕುಂತಲಾ ಹಾಗೂ ಜೈದೇವ್‌ ಗೌತಮ್‌ ದಿವಾನ್‌ ವಿರುದ್ದ ಸಾಕಷ್ಟು ಕುತಂತ್ರ ಮಾಡಿದ್ರು. ಎಲ್ಲವನ್ನ ಕಿತ್ತುಕೊಂಡು ಗೌತಮ್‌ ಮನೆ ಬಿಟ್ಟು ಹೋಗಿದ್ರು. ಕರ್ಮ ರಿಟರ್ನ್ಸ್ ಅಂತಾರಲ್ಲ.. ಜೈದೇವ್‌ ವಿಚಾರದಲ್ಲೂ ಹೀಗೆ ಆಗಿದೆ. ಇದೀಗ ಜೈದೇವ್‌ ಕೂಡ ಬೀದಿಗೆ ಬಿದ್ದಿದ್ದಾನೆ. ಗೌತಮ್‌ ಹರಾಜಿನಲ್ಲಿ ತನ್ನ ಮನೆ, ಆಫೀಸ್‌ ಎಲ್ಲವನ್ನ  ಮರಳಿ ಪಡೆದಿದ್ದಾನೆ. ಜೈದೇವ್‌ಗೆ ಕಪಾಳ ಮೋಕ್ಷ ಮಾಡಿ ಸಾಮ್ರಾಜ್ಯದಿಂದ ಹೊರ ಹಾಕಿದ್ದಾನೆ ಗೌತಮ್.‌

ಗೌತಮ್‌ ಗ ಟಕ್ಕರ್‌ ಕೊಡಲು ಹೋದ ಜೈದೇವ್‌ ತನ್ನದೇ ಹೊಸ ಕಂಪನಿ ಶುರು ಮಾಡಿದ್ದ. ಅದಕ್ಕಾಗಿ ಇರೋ ದುಡ್ಡನ್ನೆಲ್ಲಾ ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಜಯದೇವ್ ಪತ್ನಿ ದಿಯಾ ಓಡಿ ಹೋಗಿದ್ದಾಳೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಿದ್ದಾರೆ.

ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.

ಗೌತಮ್‌ ದಿವಾನ್‌ ಈಗ ಜಯದೇವ್‌ನನ್ನು ಮನೆಯಿಂದ ಹೊರಗಡೆ ಹಾಕಿದಮೇಲೂ ಕೂಡ ಅವನಿಗೆ ಬುದ್ಧಿಯೇ ಬಂದಿಲ್ಲ. ಇನ್ನೊಂದು ಕಡೆ ದಿಯಾ ಕೂಡ ಅವನಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದ್ದಾಳೆ. ಮುಂದೆ ಜಯದೇವ್‌, ಗೌತಮ್‌ ಕುಟುಂಬಕ್ಕೆ ತೊಂದರೆ ಕೊಡ್ತಾನಾ? ಅಥವಾ ಶಕುಂತಲಾ, ಜಯದೇವ್‌ ಆಡಿದ ಮತ್ತೆ ನಾಟಕ ಮಾಡಿದ್ರಾ ಅನ್ನೋ ಎಂಬ ಪ್ರಶ್ನೆ ವೀಕ್ಷರಲ್ಲಿ ಇದೆ.

ಈಗಾಗಲೇ ಗೌತಮ್​ಗೆ ಜಯದೇವ್ ಯಾವ ರೀತಿಯ ವ್ಯಕ್ತಿ ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವನು ಈತನ ಬೆಂಬಲಕ್ಕೆ ನಿಲ್ಲೋದು ಅನುಮಾನವೇ.

ಶಕುಂತಲಾ ಬೀದಿ ಪಾಲಾಗಿದ್ದಾಗ ಮತ್ತೆ ಗೌತಮ್‌ ಕರೆದುಕೊಂಡು ಬಂದು ತಾಯಿಯನ್ನು ಸಲಹುತ್ತಿದ್ದಾನೆ. ಭಾಗ್ಯಮ್ಮ ಹಾಗೂ ಶಕುಂತಲಾ ಮುಖಾಮುಖಿ ಆಗಿದ್ದಾರೆ. ಭಾಗ್ಯಮ್ಮ ಕೂಡ ಮಕ್ಕಳನ್ನು ನಾವು ಹೇಗೆ ಸಾಕುತ್ತೇವೋ ಹಾಗೆ ಇರ್ತಾರೆ. ಗೌತಮ್‌ಗೆ ಪ್ರೀತಿ ಕೊಡುದು ಅಷ್ಟೇ ಗೊತ್ತು. ಮತ್ತೆ ವಿಷದ ಹಾವಿಗೆ ಹಾಲು ಎರೆಯುವಂತೆ ಮಾಡಬೇಡ ಎಂದಿದ್ದಾಳೆ.

Shwetha M