ಬೀದಿಗೆ ಬಿದ್ದ ಶಕುಂತಲಾಗೆ ಗೌತಮ್ ಆಸರೆ! – ಮನೆಗೆ ಚಿಕ್ಕಮ್ಮನ ಕರ್ಕೊಂಡು ಬರ್ತಾನಾ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಅಮೃತಧಾರೆ ಸೀರಿಯಲ್ನಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ. ಇಷ್ಟು ವರ್ಷ ಗೌತಮ್ ಕಟ್ಟಿದ ಸಾಮ್ರಾಜ್ಯದಲ್ಲಿ ಶಕುಂತಲಾ ಮಜಾ ಮಾಡ್ತಾ, ಗೌತಮ್ ವಿರುದ್ದವೇ ಷಡ್ಯಂತರ ಮಾಡಿದ್ಲು. ಕರ್ಮ ರಿಟನ್ಸ್ ಅಂತಾರಲ್ಲ.. ಈಗ ಶಕುಂತಲಾಗೂ ಹಾಗೇ ಆಗಿದೆ. ಜೈದೇವ್ ಹೆತ್ತಮ್ಮನನ್ನೇ ಬೀದಿ ಪಾಲು ಮಾಡಿದ್ದಾನೆ. ಇದೀಗ ಆಕೆಯನ್ನ ಕಾಪಾಡಲು ಗೌತಮ್ ಬರಬೇಕಾಗಿದೆ.
ಇದನ್ನೂ ಓದಿ: ಪ್ರಿಯಾ ಆಟಕ್ಕೆ ನಂದಕುಮಾರ್ ಬ್ರೇಕ್.. ಮೀನಾಗೆ ಸಿಕ್ತು ಬೆಸ್ಟ್ ಸೊಸೆ ಪಟ್ಟ! – ಚಿಕ್ಕ ಸೊಸೆ ರಾಕ್.. ದೊಡ್ಡ ಸೊಸೆ ಶಾಕ್!
ಮಗ ಮಗ ಅಂತ ಬೀಗುತ್ತಿದ್ದ ಶಕುಂತಲಾ, ತಲೆ ತಗ್ಗಿಸುವಂತಾಗಿದೆ. ಜಯದೇವ್ ತನ್ನ ತಾಯಿ ಶಕುಂತಲಾಳನ್ನು ಮನೆಯಿಂದ ಹೊರಹಾಕಿದ್ದಾನೆ. ತನ್ನ ತಾಯಿ ಹಣ ಕೇಳಿದ್ದಕ್ಕೆ ಸಿಟ್ಟಾದ ಜಯದೇವ್, ಕೋಪದಲ್ಲಿ ತಾಯಿಗೆ ಹೊಡೆದು ಮನೆಯಿಂದ ದೂರಕ್ಕೆ ತಳ್ಳಿದ್ದಾನೆ. ಆಕೆಯ ಸಹಾಯಕ್ಕೆ ಗೌತಮ್ ಬರಲಿದ್ದಾನೆ. ಆನಂದ್ ಕೂಡ ಮಾವನಿಗೆ ಈ ವಿಚಾರ ಗೌತಮ್ಗೆ ಹೇಳದಂತೆ ಇರಲು ಹೇಳಿದ್ದರು. ಮಾವ ಗೌತಮ್ಗೆ ಈ ವಿಚಾರ ತಲುಪಿಸಿದ್ದಾನೆ. ಇದೀಗ ಶಕುಂತಲಾ ಮಾಡಿದ ತಪ್ಪಿಗೆ ಪಶ್ಚತ್ತಾಪ ಪಡುವಂತಾಗಿದೆ.
ಕ್ಲಬ್ಗೆ ತೆರಳಿದ್ದ ಶಕುಂತಲ, 3 ಕೋಟಿ ರೂಪಾಯಿ ಕಳೆದುಕೊಂಡಳು ಮತ್ತು ಈ ವೇಳೆ ಸಹಾಯಕ್ಕಾಗಿ ಜಯದೇವ್ ಬಳಿ ಹಣ ಕೇಳಿದಳು. ಅಷ್ಟೇ ಅಲ್ಲ ಗೌತಮ್ನನ್ನು ಹೊಗಳಿದ್ದಾಳೆ. ಇದು ಜಯದೇವ್ ಕೋಪಕ್ಕೆ ಕಾರಣ ಆಯಿತು. ಆತ ಕೂಗಾಡಿದ್ದಾನೆ. ಈ ಕೂಗಾಟದ ಬಳಿಕ ಮತ್ತಷ್ಟು ಸಿಟ್ಟಾದ ಜೆಡಿ, ಆಕೆಯನ್ನು ಕತ್ತು ಹಿಡಿದು ಹೊರಕ್ಕೆ ತಳ್ಳಿದ್ದಾನೆ. ಇದೇ ಶಕುಂತಲಾ ತನ್ನ ಮಕ್ಕಳೊಂದಿಗೆ ಬೀದಿ ಪಾಲಾದಾಗ ಗೌತಮ್ ಅವರನ್ನು ಸಾಕಿ ಸಲಹುತ್ತಾನೆ. ಅದೇ ಪರಿಸ್ಥಿತಿ ಮತ್ತೆ ಶಕುಂತಲಾಗೆ ಎದುರಾಗಿದೆ.
ಇಷ್ಟೇ ಅಲ್ಲ ಶಕುಂತಲಾ ಗೆಳತಿ ಕೂಡ ಸಿಕ್ಕಿದ್ದೇ ಚಾನ್ಸ್ ಅಂತ, ಶಕುಂತಲಾಗೆ ಅವಮಾನ ಮಾಡಿದ್ದಾಳೆ. ಹಣ ಕೊಡದೇ ಇದ್ದಾಗ, ಶಕುಂತಲಾ ಮೈ ಮೇಲೆ ಇದ್ದ ಎಲ್ಲ ಒಡವೆಗಳನ್ನು ಕಸಿದುಕೊಂಡುಹಳೆಯ ಸೀರೆಯನ್ನು ಉಡಿಸಿದ್ದಾಳೆ. ಬಳಿಕ ಆಕೆಯ ಕಣ್ಣು ಕಿಡ್ನಿ ಮಾರಲು ಮುಂದಾಗಿದ್ದಾಳೆ. ಅಷ್ಟರ ಮಟ್ಟಿಗೆ ಶಕುಂತಲಾಗೆ ಟಾರ್ಚರ್ ಕೊಟ್ಟಿದ್ದಾಳೆ. ಇದೀಗ ಗೌತಮ್ಗೆ ಶಕುಂತಲಾ ವಿಚಾರ ಗೊತ್ತಾಗಿದೆ. ಈಗ ಶಕುಂತಲಾಳನ್ನ ಗೌತಮ್ ಕಾಪಾಡ್ತಾನಾ? ಮತ್ತೆ ಕರೆದುಕೊಂಡು ಬರ್ತಾನಾ? ಈಗ ಶಕುಂತಲಾ ಬದಲಾಗಿ ಗೌತಮ್ ಪರ ಇರ್ತಾಳಾ? ಜೈದೇವ್ಗೂ ಕೇಡು ಕಾಲಬರುತ್ತಾ? ಗೌತಮ್ ಮುಂದಿನ ನಡೆಯೇನು ಎನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ನೋಡಿರಿ

