ಗೌತಮ್‌ ಗೆ ಎರಡನೇ ಮದುವೆ.. ಭೂಮಿಕಾ ಒಪ್ಪಿದ್ಲಾ? – ಶಕುಂತಲಾ ಪ್ಲ್ಯಾನ್‌ ವರ್ಕ್‌ ಆಗುತ್ತಾ? 

ಗೌತಮ್‌ ಗೆ ಎರಡನೇ ಮದುವೆ.. ಭೂಮಿಕಾ ಒಪ್ಪಿದ್ಲಾ? – ಶಕುಂತಲಾ ಪ್ಲ್ಯಾನ್‌ ವರ್ಕ್‌ ಆಗುತ್ತಾ? 

ಗೌತಮ್‌ ಭೂಮಿಕಾ ವಿರುದ್ಧ ಶಕುಂತಲಾ ಕ್ರಿಮಿನಲ್‌ ಐಡಿಯಾ ಒಂದಾ ಎರಡಾ.. ಅವರಿಬ್ಬರ ನೆಮ್ಮದಿ ಹಾಳು ಮಾಡಿ ದಾಂಪತ್ಯದಲ್ಲಿ ಬಿರುಕು ಮೂಡಿಸ್ಬೇಕು ಅಂತಾ ಏನಾದ್ರೂ ಕುತಂತ್ರ ಮಾಡ್ತಾ ಇರ್ತಾಳೆ. ಇದೀಗ ಭೂಮಿಕಾ ಮಗು ಮೇಲೆ ಆಕೆಯ ಕರಿನೆರಳು ಬಿದ್ದಿದೆ. ಭೂಮಿಕಾಗೆ ಮಗು ಆಗಲ್ಲ.. ಆಕೆಗೆ ಸಮಸ್ಯೆ ಇದೆ ಅಂತಾ ಡಾಕ್ಟರ್‌ ಹತ್ರ ಹೇಳಿಸಿದ್ದಾಳೆ. ಇದೀಗ ಕುತಂತ್ರಿ ಶಕುಂತಲಾ ಮತ್ತೊಂದು ಖತರ್ನಾಕ್‌ ಐಡಿಯಾ ಮಾಡಿದ್ದಾಳೆ. ಗೌತಮ್‌ ಗೆ ಎರಡನೇ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಇದೀಗ ಈ ವಿಚಾರವನ್ನ ಭೂಮಿಕಾಗೂ ತಿಳಿಸಿದ್ದಾಳೆ. ಹಾಗಾದ್ರೆ ಭೂಮಿಕಾ ಗೌತಮ್‌ ಎರಡನೇ ಮದುವೆಗೆ ಒಪ್ಪಿದ್ಲಾ? ಶಕುಂತಲಾ ಪ್ಲ್ಯಾನ್‌ ವರ್ಕ್‌ ಆಯ್ತಾ? ಸೀರಿಯಲ್‌ ನಲ್ಲಿ ಏನೆಲ್ಲಾ ಟ್ವಿಸ್ಟ್‌ ಕಾದಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತವರಿನಲ್ಲಿ ಹ್ಯಾಟ್ರಿಕ್ ಸೋಲುಂಡ ಆರ್​ಸಿಬಿ – ಬ್ಯಾಟಿಂಗ್​ನಲ್ಲಿ ಸ್ಮೃತಿ ಮಂದಾನ ಮತ್ತೆ ವಿಫಲ, ಪೆರ್ರಿ ಡಕೌಟ್​

ಅಮೃತಧಾರೆ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಭೂಮಿಕಾ ಗುಡ್‌ನ್ಯೂಸ್‌ ಕೊಡ್ತಿದ್ದಂತೆ ಶಕುಂತಲಾ ತನ್ನ ಕುತಂತ್ರ ಬುದ್ದಿ ತೋರಿಸಿಯೇ ಬಿಟ್ಲು.. ಭೂಮಿಕಾಗೆ ಮಕ್ಕಳಾಗಲ್ಲ.. ಆದ್ರೂ ಫ್ಯೂಚರ್‌ ನಲ್ಲಿ ಪ್ರಾಬ್ಲಂ ಆಗುತ್ತೆ ಅಂತಾ ಹೇಳಿಸಿದ್ಲು.. ಇನ್ನೊಂದು ಕಡೆ ತನ್ನಿಂದ ಮಗು ಆಗೋದಿಲ್ಲ ಅಂತ ಗೊತ್ತಾದ್ರೆ ಭೂಮಿಕಾ ನೊಂದುಕೊಳ್ತಾಳೆ ಅಂತ ಗೌತಮ್‌ ತನಗೆ ಸಮಸ್ಯೆ ಇದೆ ಅಂತ ಸುಳ್ಳು ಹೇಳಿದ್ದ. ಭೂಮಿಗೋಸ್ಕರ ಗೌತಮ್‌ ಇಂಥ ಸುಳ್ಳು ಹೇಳಿದ್ದಾನೆ, ಅವನಿಗೆ ಎಷ್ಟು ಧೈರ್ಯ ಇರಬೇಕು ಅಂತ ಲಕ್ಷ್ಮೀಕಾಂತ್‌ ಮಾವ, ಜಯದೇವ್‌ ಕೂಡ ಆಶ್ಚರ್ಯಪಟ್ಟಿದ್ರು.. ಆದ್ರೆ ಶಕುಂತಲಾ ಹೆಲ್ತ್‌ ರಿಪೋರ್ಟ್‌ ಅನ್ನ ಭೂಮಿಕಾ ಕೈಗೆ ಕೊಟ್ಟು ಈ ವಿಚಾರವನ್ನ ತಿಳಿಸಿದ್ದಾಳೆ. ಅಷ್ಟೇ ಅಲ್ಲ, ಗೌತಮ್‌ಗೆ ಇನ್ನೊಂದು ಮದುವೆ ಮಾಡುವ ತನ್ನ ಯೋಜನೆ ಕುರಿತು ಹೇಳಿದ್ದಾಳೆ.

ಹೌದು, ಸತ್ಯ ಗೊತ್ತಾದ ಭೂಮಿಕಾ ಕಣ್ಣೀರು ಹಾಕಿದ್ದಾಳೆ. ಬಳಿಕ ಗೌತಮ್‌ ತಾಯಿ ಬಳಿ ತನ್ನ ನೋವಿನ ವಿಚಾರವನ್ನ ಹೇಳಿ ಅತ್ತಿದ್ದಾಳೆ.. ಈ ಸಮಯದಲ್ಲಿ ಗೌತಮ್‌ ತಾಯಿ ತನ್ನ ಕೈಯಿಂದ ಭೂಮಿಕಾಳ ತಲೆ ನೇವರಿಸಿ ಸಾಂತ್ವಾನ ಮಾಡುತ್ತಾಳೆ. ಆದ್ರೆ ಇತ್ತ ಶಕುಂತಲಾ ಭೂಮಿಕಾಳ ಬಳಿ ಗೌತಮ್‌ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾಳೆ.  ಭೂಮಿಕಾ ಆ ದೇವರು ಇಷ್ಟು ದೊಡ್ಡ ಅನ್ಯಾಯ ಮಾಡ್ತಾನೆ ಅಂತಾ ಅಂದ್ಕೊಂಡಿರ್ಲಿಲ್ಲ.. ಇದೀಗ ಪರಿಹಾರ ನಿನ್ನ ಕೈಯಲ್ಲಿದೆ. ಗಟ್ಟಿ ಮನಸ್ಸು ಮಾಡಿ ಹೇಳ್ತಿದ್ದೀನಿ.. ನೀನೆ ಮುಂದೆ ನಿಂತು ಗೌತಮ್‌ ಗೆ ಇನ್ನೊಂದು ಮದುವೆ ಮಾಡಿಸ್ಬೇಕು ಅಂತಾ ಹೇಳಿದ್ದಾಳೆ. ಇದೀಗ ಶಕುಂತಲಾ ಮಾತು ಕೇಳಿದ ಭೂಮಿಕಾ ಶಾಕ್‌ ಆಗಿದ್ದಾಳೆ. ಭೂಮಿಕಾ ಗೌತಮ್‌ ಎರಡನೇ ಮದುವೆ ಒಪ್ಪುತ್ತಾಳಾ? ಗೌತಮ್‌ ಇನ್ನೊಂದು ಮದುವೆ ಕಥೆಯಲ್ಲಿ ಆತನ ತಾಯಿ ಭಾಗ್ಯ ಹುಷಾರಾಗಿ ಬರ್ತಾಳಾ? ಅನ್ನೋ ಕುತೂಹಲ ಮನೆ ಮಾಡಿದೆ.

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ಮಾತ್ರ ಅಸಮಧಾನ ಹೊರ ಹಾಕಿದ್ದಾರೆ. ವಾಮಿಟ್‌ ಮಾಡಿದಾಗ ಭೂಮಿಕಾಗೆ ಪ್ರೆಗ್ನೆಂಟ್‌ ಅಂತಾ ಗೊತ್ತಾಯ್ತು. ಡಾಕ್ಟರ್‌ ಹೇಳಿದ್ಮೇಲೆ ಅದ್ಹೇಗೆ ಭೂಮಿಕಾ ಪ್ರೆಗ್ನೆಂಟ್‌ ಅಲ್ಲ ಅಂತಾ ಅಂದ್ಕೊಂಡ್ರು.. ಕತೆಗೆ ಲಾಜಿಕ್‌ ಬೇಡ್ವಾ? ಮದುವೆ ಮಾಡಿಸಿರೋರ್ಗೆಲ್ಲ ಮಕ್ಕಳಾಗಲ್ಲ ಅಂತ ಹೇಳ್ಬಿಟ್ಟು ಒಂದತ್ತು ಮದುವೆ ಮಾಡಿಸಿ ಬಿಡ್ರಿ.. ಸೀರಿಯಲ್ ನಲ್ಲಿ ಆಕ್ಟಿಂಗ್ ಮಾಡಕ್ಕೆ ಹುಡುಗೀರಿಗೆ ಚಾನ್ಸ್ ಸಿಗುತ್ತೆ ಅಂತಾ ಕಾಮೆಂಟ್‌ ಮಾಡಿದ್ದಾರೆ. ಮತ್ತೆ ಕೆಲವರು, ಶಕುಂತಲಾ ಮಾಡಿರೋ ಕುತಂತ್ರ ದಿಂದ ಗೌತಮ್ ಭೂಮಿಕಾ ಇನ್ನು ಹತ್ತಿರ ಆಗ್ತಾರೆ. ನೀಚ ಬುದ್ದಿ ಕೆಲಸ ಮಾಡಲ್ಲ.. ಇನ್ನುಮುಂದೆ ಭಾಗ್ಯಮ್ಮ ದರ್ಬಾರ್ ಬರುತ್ತೆ ಅಂತಾ ಹೇಳಿದ್ದಾರೆ. ಮತ್ತೆ ಕೆಲವರು ಯಾವ ಸೀರಿಯಲ್‌ ಇರ್ಲಿ.. ಎಂತಹ ದೊಡ್ಡ ಪಾತ್ರ ಆದ್ರೂ, ಮದುವೆ & pregnancy ಗಳಿಗೆ ಮಾತ್ರ ಇದೇ ತರ ಸೀನ್‌ ಇರಬೇಕಂತ ರೂಲ್ಸ್‌ ಇದೆ ಅನ್ಸುತ್ತೆ. ಅದನ್ನು ಚೇಂಜ್‌ ಮಾಡೋಕೆ ಯಾವ ಡೈರೆಕ್ಟರ್‌ ಗಳಿಗೂ ಧಮ್ ಇಲ್ಲ.. ಇದ್ರಿಂದ ಸಮಾಜಕ್ಕೆ ಏನ್‌ ಸಂದೇಶ ನೀಡ್ತಾ ಇದ್ದೀರಾ.. ಚೆನ್ನಾಗಿದ್ದ ಸೀರಿಯಲ್‌ ನ ಹಳ್ಳ ಹಿಡಿಯೋತರ ಮಾಡಿದ್ದೀರಾ ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M