ದಾಖಲೆ ಬರೆದ ಫಸ್ಟ್ ನೈಟ್ ಸೀನ್ – ಗೌತಮ್ ಭೂಮಿಕಾ ಒಂದಾದ್ರು
ಅಮೃತಧಾರೆ ಸೀರಿಯಲ್ ಧಮಾಕಾ

ದಾಖಲೆ ಬರೆದ ಫಸ್ಟ್ ನೈಟ್ ಸೀನ್ – ಗೌತಮ್ ಭೂಮಿಕಾ ಒಂದಾದ್ರುಅಮೃತಧಾರೆ ಸೀರಿಯಲ್ ಧಮಾಕಾ

ಸೀರಿಯಲ್ ಪ್ರಿಯರು ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಅಮೃತಧಾರೆ ಸೀರಿಯಲ್ ಹೀರೋ ಡುಮ್ಮ ಸಾರ್ ಇನ್ಮುಂದೆ ಪಕ್ಕಾ ಫ್ಯಾಮಿಲಿಮ್ಯಾನ್ ಆಗ್ತಿದ್ದಾರೆ. ಯಾಕೆಂದ್ರೆ, ಲವ್ ಯೂ ಅಂತಾ ಹೇಳೋಕೆ ನಾಚಿಕೊಳ್ತಿರೋ ಗೌತಮ್ ದಿವಾನ್ ಕೊನೆಗೂ ಭೂಮಿಕಾ ಜೊತೆ ಸಂಸಾರ ಶುರುಮಾಡಿದ್ದಾರೆ. ಆದ್ರೆ, ಅಮೃತಧಾರೆ ಸೀರಿಯಲ್ ಇದೀಗ ಪ್ರೋಮೋದಲ್ಲೂ ದಾಖಲೆ ಬರೆದಿದೆ. ಫಸ್ಟ್ ನೈಟ್ ಸೀನ್ ಪ್ರೋಮೋ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ.

ಇದನ್ನೂ ಓದಿ: ಬಿಗ್ ಬಾಸ್ ಜೋಡಿ ಡಿವೋರ್ಸ್ – ನಿವೇದಿತಾ-ಚಂದನ್ ಬದುಕಲ್ಲಿ ಆಗಿದ್ದೇನು?

ಅಮೃತಧಾರೆ ಸೀರಿಯಲ್ ಈಗ ಒಂದು ಹಂತಕ್ಕೆ ಬಂದಿದೆ. ಭೂಮಿಕಾ ಮತ್ತು ಗೌತಮ್​ ಜೋಡಿ ಯಾವಾಗ ಒಂದಾಗುತ್ತೋ ಎಂದು ಕಾಯುತ್ತಿದ್ದ  ಅಭಿಮಾನಿಗಳಿಗಂತೂ ಈಗ ಹಿಗ್ಗೋ ಹಿಗ್ಗು. ಅಜ್ಜಿ ಹೇಳಿದ ಒಂದು ಸುಳ್ಳಿನಿಂದ ಗಂಡ ಹೆಂಡ್ತಿ ಫಸ್ಟ್​ ನೈಟ್​ ತನಕ ಬಂದಿದ್ದಾರೆ. ಫಸ್ಟ್ ನೈಟ್ ಸೀನ್‌ನಲ್ಲೂ ಗೌತಮ್ ಮತ್ತು ಭೂಮಿಕಾ ನಟನೆ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಣ್ ಕಣ್ ಸಲಿಗೆಯಲ್ಲೇ ಸೀರಿಯಲ್ ನಿರ್ದೇಶಕರು ಪ್ರೋಮೋ ಮುಗಿಸಿದ್ದಾರೆ. ಹೇಳಿ ಕೇಳಿ ಗೌತಮ್​ ಪಾತ್ರಧಾರಿ ರಾಜೇಶ್​  ನಟರಂಗ ಅವರು. ಅಭಿನಯದಲ್ಲಿ ಇವರು ಪಂಟರು. ಕಣ್ಣಿನಲ್ಲಿಯೇ ನಟನೆ ಮಾಡಿ ಮೋಡಿ ಮಾಡೋ ಕಲಾವಿದ. ಇವರ ಎದುರಿಗೆ ಅಭಿನಯಿಸುತ್ತಿರುವ ಭೂಮಿಕಾ ಅರ್ಥಾತ್​ ಛಾಯಾ ಸಿಂಗ್​ ಕೂಡ ಏನೂ ಕಡಿಮೆ ಇಲ್ಲ. ಇದು ಸೀರಿಯಲ್​ ಅನ್ನೋದನ್ನೂ ಮರೆತು, ತಮ್ಮ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಇವರ ಕಣ್ಣೋಟದ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿಮ್ಮಿಬ್ಬರ ನಟನೆಗೆ ಹ್ಯಾಟ್ಸ್​ಆಫ್​ ಎನ್ನುತ್ತಿದ್ದಾರೆ. ಅಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಸೀನ್ ಪ್ರೋಮೋ ಬಿಟ್ಟ ಝೀ ಕನ್ನಡ ವಾಹಿನಿ ದಾಖಲೆ ಬರೆದಿದೆ. ಈ ಸೀರಿಯಲ್‌ನ ಪ್ರೊಮೋಕ್ಕೆ 35 ರಿಂದ 40 ಲಕ್ಷ ವೀಕ್ಷಣೆ ಸಿಕ್ಕಿದೆ. ಕೇವಲ ಇನ್ಸ್‌ಸ್ಟಾ ಗ್ರಾಂ ಒಂದರಲ್ಲೇ ಈ ಸೀರಿಯಲ್ ಪ್ರೋಮೋ ವೀಕ್ಷಣೆ 35 ಲಕ್ಷಕ್ಕೂ ಅಧಿಕವಾಗಿದೆ. ಅದು ಕೂಡಾ ಸೀರಿಯಲ್ ಪ್ರೋಮೋ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ವೀಕ್ಷಣೆ ಕಂಡು ಬಂದಿದೆ.

ಇನ್ನು ಪ್ರೋಮೋ ವೀಕ್ಷಣೆಯ ನಡುವೆಯೇ ವೀಕ್ಷಕರು ಡುಮ್ಮಾ ಸರ್​ ಕಾಲೆಳೆಯುವುದನ್ನು ಮಾತ್ರ ಬಿಟ್ಟಿಲ್ಲ. ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಗೌತಮ್​ ಸೂಟು ಬೂಟು ಹಾಕಿಕೊಂಡು ಹೋಗಿದ್ದ. ಇದನ್ನು ನೋಡಿ ನೆಟ್ಟಿಗರು ಸಕತ್​ ಕಾಲೆಳೆದಿದ್ದರು. ಹೋಗ್ತಿರೋದು ಆಫೀಸ್​ ಟೂರ್​ಗಲ್ಲ, ಹನಿಮೂನ್​ಗೆ ಅಂದಿದ್ದರು. ಇದೀಗ ಫಸ್ಟ್​ ನೈಟ್​ಗೆ ಅಪ್ಪಟ ಮದುಮಗನ ರೀತಿ ಬಂದಿರುವುದನ್ನು ನೋಡಿ ಅಭಿಮಾನಿಗಳು ಹಿರಿಹಿರಿ ಹಿಗ್ಗಿದ್ದಾರೆ. ಕೊನೆಗೂ ಸೂಟು ಬೂಟು ಹಾಕಿಕೊಂಡು ಬಂದಿಲ್ವಲ್ಲಾ ಎನ್ನುತ್ತಿದ್ದಾರೆ.

ಇನ್ನು ಫಸ್ಟ್​ ನೈಟ್​ ಸೀನ್ ಕೂಡಾ ಯಾವುದೇ ಸಿನಿಮಾಕ್ಕೂ ಕಡಿಮೆಯಿಲ್ಲದಂತೆ ಚಿತ್ರೀಕರಿಸಲಾಗಿದೆ. ಭೂಮಿಕಾ ಕೈಯಲ್ಲಿ ಹಾಲು ಹಿಡಿದು ಪ್ರವೇಶಿಸುತ್ತಾಳೆ.  ಆದರೆ ಗೌತಮ್​ಗೆ ತುಂಬಾ ಭಯ. ಆಗ ಭೂಮಿಕಾ ಗೌತಮ್‌ ಕೈ ಹಿಡಿದು, ನಿಮಗೆ ನಾನು ಇಷ್ಟ ಇಲ್ವ, ನನ್ನನ್ನು ಪತ್ನಿಯಾಗಿ ಸ್ವೀಕರಿಸಿಲ್ವ ಎಂದು ಕೇಳುತ್ತಾಳೆ. ಈ ಪ್ರಶ್ನೆಗೆ ಕ್ಲೀನ್ ಬೋಲ್ಡ್ ಆದ ಗೌತಮ್ ಪತ್ನಿಯನ್ನು ತಬ್ಬಿಕೊಳ್ಳುತ್ತಾನೆ. ಈ ವೇಳೆ ಸಾಂಗ್ ಪ್ಲೇ ಮಾಡೋ ಮೂಲಕ ನಿರ್ದೇಶಕರೂ ಸಿನಿಮಾ ಟಚ್ ಕೊಟ್ಟಿದ್ದಾರೆ. ಅಂತೂ ಗೌತಮ್ ಭೂಮಿಕಾ ಒಂದಾಗುವುದನ್ನೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ತೋರಿಸುತ್ತಿದ್ದ ಸೀರಿಯಲ್ ಡೈರೆಕ್ಟರ್ ಕೊನೆಗೂ ಇಬ್ಬರನ್ನೂ ಒಂದು ಮಾಡಿದ್ದಾರೆ. ಈ ಮೂಲಕ ವೀಕ್ಷಕರ ಕಾಯುವಿಕೆಯೂ ಕೊನೆಗೊಂಡಿದೆ.

Shwetha M

Leave a Reply

Your email address will not be published. Required fields are marked *