ಹನಿಮೂನ್ ಗೆ ಸೂಟು ಬೂಟು ಬೇಕಾ? – ಗೌತಮ್ ಮೇಲೆ ವೀಕ್ಷಕರ ಸಿಟ್ಟೇಕೆ?

ಹನಿಮೂನ್ ಗೆ ಸೂಟು ಬೂಟು ಬೇಕಾ? – ಗೌತಮ್ ಮೇಲೆ ವೀಕ್ಷಕರ ಸಿಟ್ಟೇಕೆ?

ಜೀ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಅಮೃತ ಧಾರೆ ಸೀರಿಯಲ್ ಸದ್ಯ ರೋ‍ಚಕ ತಿರುವು ಪಡೆದುಕೊಂಡಿದೆ.. ಗೌತಮ್ ದಿವಾನ್ ಹಾಗೂ ಭೂಮಿಕಾ ಚಿಕ್ಕಮಗಳೂರಿಗೆ ಹೋಗಿದ್ದಾರೆ.. ಮನೆಗೆ ಮುದ್ದಾದ ಮಗು ಬರಲಿ ಅಂತಾ ಅಜ್ಜಿ ಅವರಿಬ್ಬರನ್ನ ಹನಿಮೂನ್ ಗೆ ಕಳುಹಿಸಿದ್ದಾರೆ.. ಅಲ್ಲಿ ಗೌತಮ್ ತನ್ನ ಪ್ರೀತಿಯನ್ನು ಹೇಳಿಕೊಳ್ತಾನಾ ಅಂತಾ ವೀಕ್ಷಕರು ಕುತೂಹಲದಿಂದ ಕಾಯ್ತಾ ಇದ್ದಾರೆ.. ಆದ್ರೀಗ ಗೌತಮ್ ಹಾಗೂ ಭೂಮಿಕಾ ಹನಿಮೂನ್ ಗೆ ಹೋಗಿದ್ದಾರಾ ಅಥವಾ ಆಫೀಸ್ ಟ್ರಿಪ್ ಗೆ ಹೋಗಿದ್ದಾರಾ ಅನ್ನೋ ಪ್ರಶ್ನೆ ವೀಕ್ಷಕರಿಗೆ ಮೂಡುತ್ತಿದೆ..

ಇದನ್ನೂ ಓದಿ: ಭಾಗ್ಯಲಕ್ಷ್ಮೀ ಮಹಾಸಂಚಿಕೆ ಸಂಕಟ! – ಮದುವೆ ಕಾರ್ಡ್‌ ಗಾಗಿ ತಾಂಡವ್‌ ಹೋರಾಟ

ಸದಾ ಹಾವು ಮುಂಗುಸಿಯಂತೆ ಜಗಳವಾಡುತ್ತಿದ್ದ ಭೂಮಿಕಾ ಹಾಗೂ ಗೌತಮ್‌..   ಜೀವನ್ ಹಾಗೂ ಮಹಿಮಾಗೋಸ್ಕರ ಮದುವೆ ಆಗಿದ್ರು.. ಅನಿವಾರ್ಯವಾಗಿ ಮದುವೆ ಆದ್ರೂ ಈಗ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿದೆ..  ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಡುಮ್ಮು ಸರ್ ಪ್ರೀತಿ ನಿವೇದನೆ ಮಾಡಲಿ ಅಂತಾ ಭೂಮಿಕಾ ಕಾಯ್ತಾ ಇದ್ದಾಳೆ.. ಆದ್ರೆ ಗೌತಮ್ ಪ್ರೀತಿ ಹೇಳಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾನೆ.. ಈಗ ಇವರಿಬ್ಬರು ಹನಿಮೂನ್​ ಗೆ ಹೋಗಿದ್ದಾರೆ.. ಚಿಕ್ಕಮಗಳೂರಿನಲ್ಲಿ ಮಲೆನಾಡಿನ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಇದೇ ವೇಳೆ ಮದುವೆಯಾಗಿ ಇಷ್ಟು ದಿನವಾದರೂ, ಭೂಮಿಕಾಗೆ ತಾನು ಏನೂ ಗಿಫ್ಟ್​ ಕೊಟ್ಟಿಲ್ಲ ಎಂದು ಅಜ್ಜಿಯ ಬಳಿ ಹೇಳಿಕೊಂಡ ಗೌತಮ್​, ಚಿಕ್ಕಮಗಳೂರಿನಲ್ಲಿರುವ ಎಸ್ಟೇಟ್​ ಅನ್ನು ಭೂಮಿಕಾ ಹೆಸರಿಗೆ ಬರೆದು ಕೊಡುವುದಾಗಿ ಹೇಳಿದ್ದಾನೆ.  ಅದಕ್ಕೆ ಅಜ್ಜಿಯೂ ಒಪ್ಪಿ ಆಗಿದೆ‌.

ಈಗಾಗಲೇ ಈ ಜೋಡಿ ಜೀಪ್​ನಲ್ಲಿ ಚಿಕ್ಕಮಗಳೂರಿಗೆ ಹೋಗಿದ್ದಾರೆ. ಅದ್ರೆ ಈ ಜೋಡಿಯನ್ನು ನೋಡಿ ನೆಟ್ಟಿಗರು ಸೂಪರ್​ ಎಂದು ಹೇಳುತ್ತಿದ್ದರೂ ಹನಿಮೂನ್​ಗೆ ಹೋಗುವಾಗ್ಲೂ ಗೌತಮ್​ ಸಿಂಪಲ್ಲಾಗಿ ಹೋಗೋದನ್ನು ಬಿಟ್ಟು ಒಳ್ಳೆ ಆಫೀಸ್​ ಟೂರ್​ಗೆ ಹೋದ ರೀತಿಯಲ್ಲಿ ಸೂಟು ಬೂಟು ಹಾಕಿಕೊಂಡಿರೋದು ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಹನಿಮೂನ್​ಗೆ ಹೋಗುವಾಗ ಎಲ್ಲರೂ ಸ್ಟೈಲಿಶ್ ಆಗಿ ಹೋಗ್ತಾರೆ.‌ ಆದ್ರೆ ಅಂಥ ಸಂದರ್ಭದಲ್ಲಿಯೂ ಸೂಟು ಬೂಟು ಧರಿಸಿ ಹೋಗಿರುವುದಕ್ಕೆ ವೀಕ್ಷಕರು ಗೌತಮ್​ ಬಗ್ಗೆ ಮುನಿಸು ತೋರಿಸುತ್ತಿದ್ದಾರೆ. ತಾನು ಶ್ರೀಮಂತ ಅಂತ ತೋರಿಸಿಕೊಳ್ಳಲು ಇಲ್ಲೂ ಈ ವೇಷ ಬೇಕಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.. ಅದ್ರೆ ಇನ್ನೊಂದೆಡೆ,  ಗೌತಮ್​ ಚಿಕ್ಕಮ್ಮ ಈ ಜೋಡಿಯ ಕೊಲೆ ಮಾಡಿಸುವ ಪ್ಲ್ಯಾನ್​ ಮಾಡಿದ್ದರಿಂದ ಇನ್ನೇನು ಆಗಬಹುದು ಎನ್ನುವ ಆತಂಕವೂ ಅಮೃತಧಾರೆ ಅಭಿಮಾನಿಗಳನ್ನು ಕಾಡುತ್ತಿದೆ.  ಮಗ ಗೌತಮ್​ ಮತ್ತು ಸೊಸೆ ಭೂಮಿಕಾ ಎಂದಿಗೂ ಒಂದಾಗಬಾರದು ಎಂದು ಬಯಸ್ತಿರೋ, ಸದಾ ಕುತಂತ್ರ ರೂಪಿಸುತ್ತಿರುವ ಅತ್ತೆ ಶಕುಂತಲಾ ದೇವಿ ಇಬ್ಬರನ್ನೂ ಹನಿಮೂನ್​ಗೆ ಕಳಿಸುವ ಪ್ಲ್ಯಾನ್​ ಏನೋ ಮಾಡಿದ್ದಾಳೆ.

ಇನ್ನೊಂದೆಡೆ ಜೈದೇವ್, ಗೌತಮ್​ ಮತ್ತು ಭೂಮಿಕಾ ಇಲ್ಲದ ವೇಳೆ ಏನೋ ಪ್ಲ್ಯಾನ್​ ಮಾಡಿದ್ದಾನೆ. ತನ್ನನ್ನು ಅಪಹರಿಸಿರುವಂತೆ ನಾಟಕವಾಡಿ, ಅದನ್ನು ಪತ್ನಿಯ ಮೊಬೈಲ್​ಗೆ ವಿಡಿಯೋ ಕಳಿಸಿದ್ದಾನೆ. ಇದನ್ನು ನೋಡಿ ಮಲ್ಲಿ ಗಾಬರಿಯಾಗಿದ್ದಾಳೆ. ಕೊನೆಗೆ ಜೈದೇವ್​ ಕಪಾಟಿನಲ್ಲಿ ಇಟ್ಟಿರೋ ಫೈಲ್​ ಒಂದನ್ನು ತಂದುಕೊಡುವಂತೆ  ಮಲ್ಲಿಗೆ ಹೇಳಿದ್ದಾರೆ. ಇದು ಮೋಸದಾಟ ಎಂದು ಅರಿಯದ ಮಲ್ಲಿ ಫೈಲ್​ ತೆಗೆದಿದ್ದಾಳೆ. ಅದೇ ವೇಳೆ ಭೂಮಿಕಾ ಹೇಳಿದಮಾತು ಅವಳಿಗೆ ನೆನಪಾಗಿದೆ. ಹನಿಮೂನ್​ಗೆ ಹೋಗುವ ಸಂದರ್ಭದಲ್ಲಿ ಭೂಮಿಕಾ ಮಲ್ಲಿಗೆ, ನೀನು ತುಂಬಾ ಎಚ್ಚರದಿಂದ ಇರು. ಏನೇ ಒಂದು ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನನ್ನನ್ನು ಒಂದು ಮಾತು ಕೇಳು ಎಂದಿರುತ್ತಾಳೆ. ಅದು ನೆನಪಾಗಿದೆ. ಬಳಿಕ ಮಲ್ಲಿ ಭೂಮಿಕಾಗೆ ಫೋನ್​ ಮಾಡಿದ್ದಾಳೆ. ಆದರೆ ನೆಟ್​ವರ್ಕ್​ ಸಿಗದೇ ಮಲ್ಲಿ ಮಾತು ಭೂಮಿಗೆ ಸ್ಪಷ್ಟವಾಗಿ ಕೇಳಿಲ್ಲ.. ಬಳಿಕ ಮಲ್ಲಿ ಜೈದೇವ್‌ ಇರುವ ಬಳಿ ಹೋಗಿದ್ದಾಳೆ. ಅಲ್ಲಿ ಆಕೆ ಮೇಲೆ ರೌಡಿಗಳು ಅಟ್ಯಾಕ್‌ ಮಾಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸುತ್ತಾಳೆ. ಆದರೆ ರೌಡಿಗಳು ಆಕೆಯನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಈ ವೇಳೆ ಮಹಿಮಾ ಪೋಲಿಸ್‌ ಜೊತೆ ಎಂಟ್ರಿ ಕೊಟ್ಟಿದ್ದಾಳೆ. ಹೀಗಾಗಿ ಮಲ್ಲಿ ರೌಡಿಗಳಿಂದ ಬಚಾವ್‌ ಆಗಿದ್ದಾಳೆ.

ಇನ್ನೊಂದೆಡೆ, ಭೂಮಿಕಾ ಮತ್ತು ಗೌತಮ್​ ಅವರನ್ನು ಒಂದು ಮಾಡಲು ಗೌತಮ್​ಗೆ ಆನಂದ್​ ದಂಪತಿ ರಾಮರಸ ಕುಡಿಸಿದ್ದಾರೆ. ಇದನ್ನು ಕುಡಿದ ಗೌತಮ್​ ರೊಮ್ಯಾಂಟಿಕ್​ ಆಗಿ ಹಾಡು ಹೇಳಿದ್ದಾನೆ. ಸೋಮರಸದ ಗುಂಗಲ್ಲಿ  ಗೌತಮ್ ತನ್ನ ಪ್ರೀತಿಯನ್ನು ಭೂಮಿಕಾಗೆ ಹೇಳಲು ಮುಂದಾಗಿದ್ದಾನೆ.. ಗೌತಮ್‌ ಭೂಮಿಕಾಗೆ ಪ್ರಪೋಸ್ ಮಾಡುತ್ತಾನಾ? ಇವರಿಬ್ಬರು ಒಂದಾಗ್ತಾರಾ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿರಲಿದೆ ಅಂತಾ ಪ್ರೇಕ್ಷಕರು ಸೀರಿಯಲ್‌ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Shwetha M