17 ವರ್ಷದ ಬಾಲಕಿ ಪ್ರಾಣ ತೆಗೆದ ಪಿಜ್ಜಾ, ಬರ್ಗರ್! – ಫಾಸ್ಟ್‌ಫುಡ್ ತಿನ್ನುವವರೇ ನೀವು ಜೋಪಾನ!

ಈಗೀನ ಕಾಲದಲ್ಲಿ ಎಲ್ಲರಿಗೂ ಫಾಸ್ಟ್ ಫುಡ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಮನೆಯಲ್ಲಿ ಮಾಡಿರುವ ರುಚಿಕರ ಆಹಾರ ತಿನ್ನೋದನ್ನ ಬಿಟ್ಟು, ಪಿಜ್ಜಾ, ಬರ್ಗರ್ ತಿನ್ನು ಹೊಟ್ಟೆ ತುಂಬಿಸಿಕೊಳ್ತಾರೆ. ಇಲ್ಲೊಬ್ಬಳು ಬಾಲಕಿ ಪಿಜ್ಜಾ, ಬರ್ಗರ್ ತಿಂದು ತನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾಳೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಸಮರ! – 15 ಖಾತೆ, 150 ಪೋಸ್ಟ್ ವಿರುದ್ಧ ವಿಜಯಲಕ್ಷ್ಮಿ ದೂರು
ಈಗಿನ ಕಾಲದಲ್ಲಿ ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ ಹೊರಗಿನ ಆಹಾರವನ್ನೇ ಹೆಚ್ಚು ಇಷ್ಟಪಡುತ್ತಾರೆ. ಪ್ರತಿ ದಿನ ಫಾಸ್ಟ್ ಫುಡ್ ಸೇವನೆ ಮಾಡ್ತಾರೆ. ಇದೀಗ ಇಲ್ಲೊಂದು ಕಡೆ ಪಿಜ್ಜಾ, ಬರ್ಗರ್ ತಿಂದ ಬಾಲಕಿ ಸಾವನ್ನಪ್ಪಿದ್ದಾಳೆ.
ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದ ಅಫ್ಘಾನ್ ಮೊಹಲ್ಲಾದಲ್ಲಿ ನಡೆದಿದೆ. 11ನೇ ತರಗತಿಯ ವಿದ್ಯಾರ್ಥಿನಿ ಫಾಸ್ಟ್ ಫುಡ್ ಸೇವಿಸಿ, ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ. ಅಹಾನಾ ಎಂಬ ಬಾಲಕಿ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಅಹಾನಾಗೆ ಚಿಕ್ಕ ವಯಸ್ಸಿನಿಂದಲ್ಲೂ ಚೌಮಿನ್, ಪಿಜ್ಜಾ ಮತ್ತು ಬರ್ಗರ್‌ಗಳಂತಹ ಫಾಸ್ಟ್ ಫುಡ್‌ಗಳನ್ನು ಇಷ್ಟಪಡುತ್ತಿದ್ದಳು. ಮನೆಯಲ್ಲಿ ಮಾಡುವ ಆಹಾರಗಳನ್ನು ಅಷ್ಟೊಂದು ಇಷ್ಟ ಪಡುತ್ತಿರಲಿಲ್ಲ. ಹೀಗಾಗಿ ಅಹಾನಾ ಹಲವು ಸಮಯದಿಂದ ಹೊರಗಿನ ಆಹಾರಗಳನ್ನು ಹೆಚ್ಚು ಸೇವನೆ ಮಾಡಿತ್ತಿದ್ದಳು. ಆದ್ರೆ ಇತ್ತೀಚೆಗೆ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆಕೆಯ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಆಕೆಯ ಕರುಳುಗಳು ಒಟ್ಟಿಗೆ ಅಂಟಿಕೊಂಡಿವೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕಿಗೆ ವೈದ್ಯರು ಚಿಕಿತ್ಸೆ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಇನ್ನು ಅಹಾನ ಪಿಜ್ಜಾ ಬರ್ಗರ್ ಸೇವಿಸಿದ್ದರಿಂದಲೇ ಆಕೆಯ ಆರೋಗ್ಯ ಹಾಳಾಗಿದೆ. ಫಾಸ್ಟ್ ಫುಡ್ ತಿಂದ ಕಾರಣ ಅಹಾನ ಸಾವನ್ನಪ್ಪಿದ್ದಾಳೆ. ಕೊನೆಗೂ ನಮ್ಮ ಮಗಳನ್ನು ಉಳಿಸಿಕೊಳ್ಳಲು ಆಗಿಲ್ಲ ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ.
ವೈದ್ಯರು ಹೇಳಿರುವ ಪ್ರಕಾರ, ಅತಿಯಾಗಿ ಫಾಸ್ಟ್ ಫುಡ್ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ, ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಗಂಭೀರ ಹಾನಿಯಾಗುತ್ತದೆ. ಇಂದು ನಡೆದಿರುವ ಈ ಘಟನೆಗೂ ಕೂಡ ಅದೇ ಕಾರಣ, ಅನಾರೋಗ್ಯಕರ ಆಹಾರ ಪದ್ಧತಿಗಳು ಚಿಕ್ಕ ವಯಸ್ಸಿನಲ್ಲಿಯೇ ಮಾರಕ ಪರಿಣಾಮಗಳನ್ನು ಬೀರುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನೋಡಿರಿ

