ಮುಖಕ್ಕೆ ಸರ್ಜರಿ ಮಾಡಿಸಿಕೊಂಡಿದ್ಯಾಕೆ ಖಲಿಸ್ತಾನಿ ಕಿರಾತಕ? – ಅಮೃತ್ಪಾಲ್ ಸಿಂಗ್ ಬಂಧನಕ್ಕೆ ಖಾಕಿ ಹೈ ಅಲರ್ಟ್

ಪೊಲೀಸರ ಕಣ್ಣೆದುರಿಗೇ ಎಸ್ಕೇಪ್ ಆಗಿ ಕಳೆದ ಕೆಲ ವಾರಗಳಿಂದ ತಲೆಮರೆಸಿಕೊಂಡಿರುವ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ ಇನ್ನೂ ಕೂಡ ಖಾಕಿ ಕೈಗೆ ಸಿಕ್ಕಿಲ್ಲ. ಇದೀಗ ಅಮೃತ್ಪಾಲ್ ಸಿಂಗ್ ಪಂಜಾಬ್ನ ಸಿಖ್ಖರ ಜೊತೆಗೆ ಸಭೆ ನಡೆಸಲು ಪ್ಲ್ಯಾನ್ ಮಾಡಿದ್ದಾನೆ ಎನ್ನಲಾಗಿದೆ. ಏಪ್ರಿಲ್ 14ರಂದು ಸಿಖ್ಖರ್ ಬೈಸಖಿ ಹಬ್ಬದಂದೇ ಮೀಟಿಂಗ್ ಮಾಡೋಕೆ ಅಮೃತ್ಪಾಲ್ ಮುಂದಾಗಿದ್ದಾನಂತೆ. ಹೀಗಾಗಿ ಪಂಜಾಬ್ ಪೊಲೀಸರು ಅಲರ್ಟ್ ಅಗಿದ್ದು, ಏಪ್ರಿಲ್ 14ರವರೆಗೆ ಸಿಬ್ಬಂದಿಗೆ ಯಾವುದೇ ರಜೆ ನೀಡದಿರಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ.
ಯಾವ ಪೊಲೀಸ್ ಸಿಬ್ಬಂದಿ ಕೂಡ ಏಪ್ರಿಲ್ 14ರವರೆಗೆ ರಜೆ ಕೇಳುವಂತಿಲ್ಲ ಅಂತ ಪೊಲೀಸ್ ಇಲಾಖೆ ಖಡಕ್ ಸೂಚನೆ ಕೊಟ್ಟಿದೆ. ಅಮೃತ್ಪಾಲ್ ಶರಣಾಗುತ್ತಾನೆ ಅಂತಾ ಹೇಳಲಾಗಿತ್ತಾದ್ರೂ, ಇದುವರೆಗೂ ಆತ ಶರಣಾಗಿಲ್ಲ. ಪೊಲೀಸರಿಗೆ ಕೂಡ ಆತನನ್ನ ಬಂಧಿಸೋಕೆ ಸಾಧ್ಯವಾಗಿಲ್ಲ. ಈ ನಡುವೆ, ಅಮೃತ್ಪಾಲ್ ಪಾಕಿಸ್ತಾನಕ್ಕೆ ಪಲಾಯನ ಮಾಡೋಕೆ ತಂತ್ರ ಹೆಣೆದಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದ್ದು, ಪಂಜಾಬ್ ಮತ್ತು ಪಾಕಿಸ್ತಾನ ಗಡಿಯಲ್ಲಿ ವಿಶೇಷ ಭದ್ರತಾ ತಂಡಗಳನ್ನ ಕೂಡ ನಿಯೋಜಿಸಲಾಗಿದೆ.
ಈ ಮಧ್ಯೆ ಅಮೃತ್ಪಾಲ್ ಸಿಂಗ್ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗವಾಗಿದೆ. ವಿದೇಶದಿಂದ ಭಾರತಕ್ಕೆ ಬರೋ ಮುನ್ನ ಖಲಿಸ್ತಾನಿ ಮೂಲಭೂತವಾದಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ರೀತಿ ಕಾಣಿಸಿಕೊಳ್ಳೋಕೆ ಅಮೃತ್ಪಾಲ್ ಸಿಂಗ್ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದನಂತೆ. ಇದು ಪ್ಲಾಸ್ಟಿಕ್ ಸರ್ಜರಿ ಮಾದರಿಯ ಮುಖದ ರೂಪ ಬದಲಿಸುವಂಥಾ ಸರ್ಜರಿಯಾಗಿದ್ದು, ಪಂಜಾಬ್ ಜನರು ನನ್ನಲ್ಲಿ ಭಿಂದ್ರನ್ವಾಲೆಯಲ್ಲಿ ಕಾಣಲಿ ಅನ್ನೋ ದೃಷ್ಟಿಯಿಂದ. ಯುವಕರನ್ನ ಸೆಳೆಯುವ ಉದ್ದೇಶದಿಂದಲೇ ಅಮೃತ್ಪಾತ್ ವಿಶೇಷ ಸರ್ಜರಿಗೆ ಒಳಗಾಗಿದ್ದನಂತೆ. ಈ ವಿಚಾರವನ್ನ ಬಂಧಿತರಾಗಿರುವ ಆತನ ಸಹಚರರೇ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಕೆಂಪುಕೋಟೆ ಮೇಲೆ ಹಂಗಾಮ ಮಾಡಿ ದೀಪ್ ಸಿಧು ಸಾವಿನ ಬಳಿಕ ದುಬೈನಲ್ಲಿ ಟ್ರಕ್ ಡ್ರೈವರ್ ಆಗಿದ್ದ ಅಮೃತ್ಪಾಲ್ ಭಾರತಕ್ಕೆ ಮರಳಿದ್ದ. ದೀಪ್ಸಿಧುವಿನ ವಾರಿಸ್ ಪಂಜಾಬ್ ದೆ ಸಂಘಟನೆಯ ನೇತೃತ್ವ ವಹಿಸಿಕೊಂಡು, ಭಿಂದ್ರನ್ವಾಲೆ ರೀತಿ ವೇಷಭೂಷಣ ಮಾಡಿಕೊಂಡು ಪ್ರಚೋದನಾಕಾರಿ ಭಾಷಣಗಳನ್ನು ಮಾಡ್ತಿದ್ದ.