ಸೀತೆಯಂತೆ ಭೂಮಿಕಾ ಕೊಟ್ಟ ಕುರುಹು! – ಗೌತಮ್ ಹಣೆಯಲ್ಲಿ ಪ್ರೀತಿ ಬರೆದಿಲ್ವಾ?

ಅಮೃತಧಾರೆ ಸೀರಿಯಲ್ ವೀಕ್ಷಕರಿಗೆ ಇಷ್ಟವಾಗೋದೇ ಡುಮ್ಮ ಸರ್ ಮತ್ತು ಭೂಮಿಕಾ ಜೋಡಿ ನೋಡಲು. ಮದ್ವೆಯಾಗಿ ಎಷ್ಟು ದಿನ ಆಯ್ತು. ಹೆಂಡ್ತಿಗೆ ಲವ್ ಯೂ ಹೇಳಿ ಅಂತಾ ವೀಕ್ಷಕರು ಮೇಲಿಂದ ಮೇಲೆ ಹೇಳ್ತಾನೇ ಇದ್ರು. ಕೊನೆಗೂ ಗೌತಮ್ ದಿವಾನ್ ಹೆಂಡ್ತಿಗೆ ಎಲ್ಲಾ ಹೇಳಿಬಿಡಬೇಕು ಅಂತಾ ಹನಿಮೂನ್‌ಗೆ ಕರ್ಕೊಂಡ್ ಬಂದ್ರೆ ಸೀನ್ ಫುಲ್ ಉಲ್ಟಾ. ಗೌತಮ್ ಪರದಾಟ, ಭೂಮಿಗಾಗಿ ಹುಡುಕಾಟ ಶುರುವಾಗಿದೆ. ಇನ್ನು ಸೀತೆ ಅಪಹರಣಕ್ಕೂ, ಭೂಮಿ ಅಪಹರಣಕ್ಕೂ ವೀಕ್ಷಕರು ಸಂಬಂಧ ಕಲ್ಪಿಸಿದ್ದಾರೆ.
ಇದನ್ನೂ ಓದಿ:ಸೀತಾಗೆ ಸೀರೆ ಸೆನ್ಸ್ ಇಲ್ವಾ? – ಸಿಹಿ, ಸೀತಾ ಮೇಲೆ ವೀಕ್ಷಕರು ಸಿಟ್ಟಾಗಿದ್ದೇಕೆ?
ಮದ್ವೆಯಾದ್ರೂ ಬ್ಯುಸಿನೆಸ್ ಅಂತಾ ಸಿಕ್ಕಾಪಟ್ಟೆ ಬ್ಯುಸಿಯಾಗಿರೋ ಗೌತಮ್ ದಿವಾನ್ ಕೊನೆಗೂ ಹೆಂಡ್ತಿ ಭೂಮಿಕಾ ಜೊತೆ ಹನಿಮೂನ್ ಟ್ರಿಪ್ ಹೋಗಿರೋದು ವೀಕ್ಷಕರಿಗೂ ಸ್ವಲ್ಪ ಸಮಾಧಾನ ತಂದಿದೆ. ಇನ್ನಾದ್ರೂ ಇವರಿಬ್ಬರು ಪ್ರೀತಿ ಹೇಳಿಕೊಳ್ಳೋ ಎಪಿಸೋಡ್ ಬೇಗ ಮುಗಿಯುತ್ತಲ್ಲಾ ಅಂತಾ ನಿಟ್ಟುಸಿರುಬಿಟ್ಟಿದ್ರು. ಯಾಕೆಂದ್ರೆ, ಇವರಿಬ್ಬರ ಮದುವೆಯಾದ ಮೇಲೆ ಪ್ರೀತಿ ಹೇಳಿಕೊಳ್ಳೋ ಎಪಿಸೋಡ್ ಅದೆಷ್ಟೋ ಬಂದು ಹೋಗಿತ್ತು. ಆದ್ರೆ, ಪರಸ್ಪರ ಪ್ರೀತಿ ವಿಚಾರ ವಿನಿಮಯ ಆಗಿರಲೇ ಇಲ್ಲ. ಅಂತೂ ಡುಮ್ಮ ಸರ್ ಭೂಮಿ ಜೊತೆ ಹನಿಮೂನ್ ಟ್ರಿಪ್‌ಗೆ ಬಂದಿದ್ದಾರೆ. ಬೇಗ ಐ ಲವ್ ಯೂ ಹೇಳಪ್ಪಾ ಗೌತಮ್. ಎಷ್ಟೂ ಅಂತ ಕಾಯಿಸ್ತಿಯಾ… ಅದೂ ನಿನ್ನ ಪತ್ನಿಗೆ ಹೇಳೋಕೂ ಇಷ್ಟು ನಾಚಿಕೆನಾ? ಅದ್ಯಾಕೆ ಲವ್ ಅಂದ್ರೆ ಬೆವರುತ್ತೀಯಾ ಎಂದೆಲ್ಲಾ ಪ್ರಶ್ನಿಸಿ ಪ್ರಶ್ನಿಸಿ ಅಮೃತಧಾರೆ ಫ್ಯಾನ್ಸ್ಗೆ ಸಾಕಾಗಿ ಹೋಗಿತ್ತು. ಆದರೆ ಈಗ ಆ ಕ್ಷಣ ಕೊನೆಗೂ ಬಂದೇ ಬಿಟ್ಟಿತು. ಬೆಟ್ಟದ ಮೇಲೆ ಭೂಮಿಕಾಳನ್ನು ಕರೆದುಕೊಂಡು ಹೋಗಿರುವ ಗೌತಮ್, ನೇರವಾಗಿ ಭೂಮಿಕಾ ಮುಖ ನೋಡಿ ಪ್ರೀತಿಯ ನಿವೇದನೆ ಮಾಡಿಕೊಳ್ಳದಿದ್ದರೂ ಬೆನ್ನು ಹಿಂದಕ್ಕೆ ಮಾಡಿ ಐ ಲವ್ ಯೂ ಅಂದೇ ಬಿಟ್ಟಿದ್ದ . ಇದನ್ನು ಕೇಳಿ ಭೂಮಿಕಾಗಿಂತಲೂ ಹೆಚ್ಚು ಖುಷಿ ಸೀರಿಯಲ್ ಫ್ಯಾನ್ಸ್ಗೆ ಆಗಿತ್ತು. ಇನ್ನೇನು ಇಬ್ಬರೂ ಒಂದಾಗುತ್ತಾರೆ, ಮುಂದೇನು ಎನ್ನುವ ಹೊತ್ತಲ್ಲೇ ಸೀರಿಯಲ್ ಕಥೆಗೆ ಟ್ವಿಸ್ಟ್ ಸಿಕ್ಕಿದೆ. ಭೂಮಿಕಾಳ ಕಿಡ್ನಾಪ್ ಆಗಿದೆ. ಕೆಲವು ಮಂದಿ ಬಂದು ಭೂಮಿಕಾಳನ್ನು ಕರೆದುಕೊಂಡು ಹೋಗಿದ್ದಾರೆ. ಇತ್ತ ಪತ್ನಿ ಕಾಣದೇ ಗೌತಮ್ ಚಡಪಡಿಸುತ್ತಿದ್ದಾನೆ. ಗೆಳೆಯ ಆನಂದ್ಗೆ ಕರೆ ಮಾಡಿ ಎಲ್ಲಾ ವಿಷಯ ಹೇಳಿದ್ದಾನೆ. ಆನಂದ್ ಮತ್ತು ಆತನ ಪತ್ನಿ ಸ್ಥಳಕ್ಕೆ ಧಾವಿಸಿದ್ದಾರೆ. ಭೂಮಿಕಾಳ ಹುಡುಕಾಟ ಶುರುವಾಗಿದೆ.
ಸೀರಿಯಲ್ ಕಥೆ ಇಲ್ಲಿಗೆ ರಾಮಾಯಾಣದ ಟಚ್ ಪಡೆದುಕೊಂಡಿದೆ. ಜಾಣ ಭೂಮಿಕಾ ರಾಮಾಯಣದ ಸೀತಾಮಾತೆಯ ಐಡಿಯಾನೇ ಫಾಲೋ ಮಾಡಿದ್ದಾಳೆ. ತನ್ನನ್ನು ಅಪಹರಿಸಿರುವ ಗುರುತು ಸಿಗಲೆಂದು ಅಪಹರಣದ ದಾರಿಯುದ್ದಕ್ಕೂ ಸೀತೆ ಕುರುಹು ಬಿಟ್ಟು ಸಾಗಿರುತ್ತಾಳೆ. ಅದೇ ರೀತಿ ಭೂಮಿಕಾ ಅಪಹರಣಕಾರರು ತನ್ನನ್ನು ಕರೆದುಕೊಂಡು ಹೋಗುತ್ತಿರುವ ದಾರಿಯಲ್ಲಿ ಕಿವಿಯೋಲೆ, ಬಳೆಗಳನ್ನು ಎಸೆಯುತ್ತಾ ಸಾಗುತ್ತಾಳೆ. ಗೌತಮ್‌ಗೆ ಭೂಮಿಕಾಳ ಕಿವಿಯೋಲೆ ಸಿಗುತ್ತದೆ. ಇದೇ ದಾರಿಯಲ್ಲಿ ಅವಳ ಅಪಹರಣ ಮಾಡಿರುವುದು ತಿಳಿದು ಅದೇ ದಾರಿಯಲ್ಲಿ ಸಾಗುತ್ತಾನೆ. ಇದ್ರ ಮಧ್ಯೆ ಕೆಂಚ ನಾನೇ ಕಿಡ್ನಾಪ್ ಮಾಡಿದ್ದು ದುಡ್ಡು ಕೊಟ್ರೆ ಬಿಡ್ತೀನಿ ಅಂತಾ ಬ್ಲಾಕ್ ಮೇಲೆ ಮಾಡ್ತಿದ್ದಾರೆ. ಇತ್ತ ಗೌತಮ್ ಸ್ಟೋರಿಯಲ್ಲಿ ಸದ್ಯಕ್ಕೆ ಹಳೇ ಪುರಾಣಗಳಿಲ್ಲ. ಪೊಲೀಸ್ ಕಂಪ್ಲೇಂಟ್ ಕೊಡುವ ಗೌತಮ್, ತಾನೂ ಕೂಡಾ ಭೂಮಿಯ ಹುಡುಕಾಟದಲ್ಲಿದ್ದಾನೆ. ಇದ್ರ ಮಧ್ಯೆ ದಾರಿಯಲ್ಲಿ ಹೆಂಡತಿಯ ಕಿವಿಯೋಲೆ, ಬಳೆಗಳು ಸಿಗುತ್ತವೆ. ಮತ್ತೊಂದೆಡೆ ಜಾಣೆ ಭೂಮಿಕಾ ಇನ್ಯಾವ ರೀತಿಯಲ್ಲಾದ್ರೂ ಗೌತಮ್‌ಗೆ ಕ್ಲೂ ಕೊಟ್ರೂ ಕೊಡಬಹುದು. ವಿಷ್ಯ ಏನೇ ಇರಲಿ, ಮದ್ವೆಯಾಗಿ ತಿಂಗಳ ಮೇಲೆ ತಿಂಗಳು ಕಳೆದರೂ ಗೌತಮ್ ಮತ್ತು ಭೂಮಿಕಾ ಪ್ರೀತಿ ವಿಚಾರ ಹೇಳಿಕೊಳ್ಳೋಕೆ ಆಗ್ತಿಲ್ಲ ಅನ್ನೋದೇ ವೀಕ್ಷಕರ ಬೇಜಾರು.