ವಠಾರದವರ ಕಣ್ಣು ಕುಕ್ಕಿದ ಗೌತಮ್ ಭೂಮಿಕಾ ಸಂಬಂಧ – ಇಬ್ಬರ ಮಧ್ಯೆ ಇರೋ ಗುಟ್ಟು ರಟ್ಟಾಗುತ್ತಾ?

ವಠಾರದವರ ಕಣ್ಣು ಕುಕ್ಕಿದ ಗೌತಮ್ ಭೂಮಿಕಾ ಸಂಬಂಧ – ಇಬ್ಬರ ಮಧ್ಯೆ ಇರೋ ಗುಟ್ಟು ರಟ್ಟಾಗುತ್ತಾ?

ಅಮೃತಧಾರೆ ಧಾರಾವಾಹಿಯಲ್ಲಿ  ಗೌತಮ್ ಮತ್ತು ಭೂಮಿಕಾ ಒಂದಾಗುವ ಸಮಯಕ್ಕೆ ವೀಕ್ಷಕರು ಕಾಯುತ್ತಿದ್ದಾರೆ. ಇದರ ಮಧ್ಯೆ, ಇವರಿಬ್ಬರ ಮಧ್ಯೆ ಏನೋ ನಡೀತಿದೆ, ಇಬ್ಬರ ಮಧ್ಯೆ ಏನೋ ಸಂಬಂಧವಿದೆ ಎಂಬ ಅನುಮಾನ ವಠಾರದ ಜನರಿಗೆ ಶುರುವಾಗಿದೆ.

ಇದನ್ನೂ ಓದಿ: ಅಮೃತಧಾರೆಯಲ್ಲಿ ಮತ್ತೆ ಭೂಮಿ ಗೌತಮ್ ಒಂದಾಗುವ ಸಮಯ – ಮಕ್ಕಳ ಮುಂದೆ ದಂಪತಿಯ ಪುರ್ನಮಿಲನ

ವಠಾರ ಅಂದಮೇಲೆ ಅಕ್ಕಪಕ್ಕದ ಮನೆಯಲ್ಲಿ ಏನು ನಡೀತಿದೆ ಅನ್ನೋದು ಗುಟ್ಟಾಗಿ ಉಳಿಯುವುದು ಸ್ವಲ್ಪ ಕಷ್ಟವೇ. ಅಂಥದರಲ್ಲಿ ಗೌತಮ್ ಮತ್ತು ಭೂಮಿಕಾ ಸಂಬಂಧ ಗುಟ್ಟಾಗಿ ಉಳಿಯುವುದು ಉಂಟೇ. ಇದೇ ಕಥೆಯೀಗ ಅಮೃತಧಾರೆಯಲ್ಲಿ ಸಾಗುತ್ತಿದೆ. ಭೂಮಿಕಾದೆ ಗಂಡ ಇಲ್ಲ, ಗೌತಮ್‌ಗೆ ಹೆಂಡತಿ ಇಲ್ಲ ಅನ್ನೋದು ವಠಾರದ ಜನರಿಗೆ ಗೊತ್ತಿದೆ. ಆದ್ದರಿಂದ ಇಬ್ಬರ ನಡುವೆ ಏನೋ ಇದೆ ಎನ್ನುವ ಗುಸುಗುಸು ಶುರುವಾಗಿದೆ. ಇದೀಗ ಗೌತಮ್​ ಮಗಳನ್ನು ಕರೆದುಕೊಂಡು ಶಾಲೆಗೆ ಹೊರಡಲು ರೆಡಿಯಾಗಿದ್ದಾನೆ. ಅತ್ತ ಭೂಮಿಕಾ ಮಗನನ್ನು ಕರೆದುಕೊಂಡು ಶಾಲೆಗೆ ಹೊರಡುತ್ತಿದ್ದಾಳೆ ಇಬ್ಬರೂ ಒಟ್ಟಿಗೇ ಮೆಟ್ಟಿಲು ಇಳಿಯುವಾಗ ಒಬ್ಬರನ್ನೊಬ್ಬರು ಡಿಕ್ಕಿ ಹೊಡೆದುಕೊಂಡಿದ್ದಾರೆ. ಆದರೂ ಸಾವರಿಸಿಕೊಂಡು ಒಬ್ಬರ ಮುಖ ಒಬ್ಬರನ್ನು ನೋಡದ ಹಾಗೆ ಮಾಡಿ ಓರೆಗಣ್ಣಿನಿಂದಲೇ ನೋಡುತ್ತಾ ಕೆಳಕ್ಕೆ ಇಳಿದಿದ್ದಾರೆ. ಅದೇ ವೇಳೆ, ವಠಾರದವರು ಇವರಿಬ್ಬರನ್ನೂ ನೋಡಿದ್ದಾರೆ. ಅವರಲ್ಲಿ ಬೆಟ್ಟಿಂಗ್​ ಶುರುವಾಗಿದೆ. ಈಗ ಗೌತಮ್​ ತನ್ನ ಕಾರಿನಲ್ಲಿ ಆ ಮೇಡಂ ಅನ್ನು ಕರೆದುಕೊಂಡು ಹೋಗುತ್ತಾರೆ ಎಂದು ಒಬ್ಬಾತ ಹೇಳಿದ್ರೆ, ಮತ್ತೊಬ್ಬಾತ ಅದು ಸಾಧ್ಯನೇ ಇಲ್ಲ ಎಂದಿದ್ದಾನೆ. ಒಂದು ವೇಳೆ ಗೌತಮ್​ ಕರೆದರೂ ಮೇಡಂ ಹೋಗಲ್ಲ, ಅವರು ತುಂಬಾ ಸ್ಟ್ರಿಕ್ಟ್​ ಎಂದಿದ್ದಾನೆ. ಅಷ್ಟರಲ್ಲಿಯೇ ಗೌತಮ್​ಗೆ ಕಾಲ್ ಬಂದಿದೆ. ಒಬ್ಬರನ್ನು ಡೇಲಿ ಕರೆದುಕೊಂಡು ಹೋಗಿ ಡ್ರಾಪ್​ ಮಾಡುವ ಕೆಲಸ ಎಂದು ಲೊಕೇಶನ್​ ಕಳಿಸಿದ್ದಾರೆ. ಗೌತಮ್​ ನೋಡಿದ್ರೆ ಅದು ತಮ್ಮ ವಠಾರದ್ದೇ ಲೊಕೇಶನ್​. 7 7 ಡೌಟ್​ ಬಂದು ಯಾರು ಎಂದು ನೋಡಿದಾಗ ಅವಳು ಭೂಮಿಕಾನೇ ಆಗಿದ್ದಾಳೆ. ಭೂಮಿಕಾಳನ್ನು ಕರೆದುಕೊಂಡು ಹೋಗಿ ಬರುವ ಜವಾಬ್ದಾರಿ ಅವನದ್ದು. ಅದಕ್ಕಾಗಿ ಅವನು ಮೊದಲಿಗೆ ಹೋಗಿ ಬಾಯ್ತಪ್ಪಿ ಭೂಮಿಕಾ ಎಂದಿದ್ದಾನೆ. ಕೊನೆಗೆ ಮೇಡಂ ಎಂದಿದ್ದಾನೆ. ಅಲ್ಲಿಗೆ ವಠಾರದವರು ಬಾಯಿ ಬಿಟ್ಟು ನೋಡಿದ್ದಾರೆ.

ವಠಾರದವರ ಪ್ರಕಾರ ಗೌತಮ್-ಭೂಮಿಕಾ ನಡುವೆ ಕುಚು ಕುಚು ನಡೆಯುತ್ತಿದೆ. ಹೀಗಾಗಿ ಇವರಿಬ್ಬರು ಗಂಡ ಹೆಂಡತಿ ಅಂತಾ ಗೊತ್ತಾಗುವ ಸಮಯ ಹತ್ತಿರವಾಗುತ್ತಿದೆ.  ಇನ್ನು ಇಬ್ಬರ ಬಾಳಲ್ಲಿ ಮತ್ತೆ ಪ್ರೀತಿ ಮೂಡುವ ಎಪಿಸೋಡ್‌ಗಳು ಪ್ರಸಾರವಾಗಲಿದೆ. ಈಗಾಗಲೇ ಗೌತಮ್ ಭೂಮಿ ಬಳಿ ತನ್ನ ಪ್ರೀತಿ, ವಿರಹವೇದನೆಯನ್ನು ಹೇಳಿಕೊಂಡಾಗಿದೆ. ಭೂಮಿಯೂ ತನ್ನ ಮುದ್ದಿನ ಪತಿ ಗೌತಮ್ ಹತ್ತಿರ ಬಂದಾಗಿದೆ. ‘ನಿಮ್ಮನ್ನು ಪ್ರೀತಿ ಮಾಡುತ್ತೇನೆ’ ಎಂದು ಭೂಮಿಕಾ ಹೇಳಿದ್ದಾಳೆ. ‘ನಿಮ್ಮನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ ಎಂದು, ಗೌತಮ್​ನ ತಬ್ಬಿ ಹೇಳಿದ್ದಾಳೆ. ಎಲ್ಲರನ್ನೂ ಬಿಟ್ಟು ದೂರ ಎಲ್ಲಾದರೂ ಹೋಗಿ ಜೀವಿಸೋಣ ಎಂದು ಭೂಮಿಕಾ ಹೇಳಿದ್ದಾಳೆ.

ಮತ್ತೊಂದೆಡೆ ಜೈದೇವ್ ಕಡೆಯವರು ಮಲ್ಲಿಯನ್ನು ಪತ್ತೆ ಮಾಡಿದ್ದಾರೆ. ಜೈದೇವ್ ಕೂಡಾ ಮಲ್ಲಿಯನ್ನ ಹಿಡಿಯಲು ಬಂದಾಗಿದೆ. ಈ ಕಥೆ ಜೊತೆ ಗೌತಮ್ ಮತ್ತು ಭೂಮಿಕಾ ಕಥೆ ಕೂಡಾ ಇಂಟ್ರಸ್ಟಿಂಗ್ ಆಗಿದೆ.

Sulekha