‘ಕೈ’ ಕೋಟೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಅಮಿತ್ ಶಾ – ವರ್ಕೌಟ್ ಆಗುತ್ತಾ ‘ಚಾಣಕ್ಯ’ನ ತಂತ್ರ?

‘ಕೈ’ ಕೋಟೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಅಮಿತ್ ಶಾ – ವರ್ಕೌಟ್ ಆಗುತ್ತಾ ‘ಚಾಣಕ್ಯ’ನ ತಂತ್ರ?

ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ‘ಕಮಲ’ ಅರಳಿಸಲೇಬೇಕು ಅಂತಾ ಪಣ ತೊಟ್ಟಿರೋ ಬಿಜೆಪಿ ಕಲ್ಯಾಣ ಕರ್ನಾಟಕದ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಕಹಳೆ ಮೊಳಗಿಸಿದ್ರು. ಎಸ್​ಆರ್​ಎಸ್ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿದ್ರು. ಕಾರ್ಯಕ್ರಮಕ್ಕೆ ಬಂದ ಅಮಿತ್ ಶಾಗೆ ಜಿಲ್ಲಾ ಬಿಜೆಪಿ ಘಟಕದಿಂದ ಸನ್ಮಾನ ಮಾಡಲಾಯ್ತು.

ಇದನ್ನೂ ಓದಿ : ಸಿಂ‘ಹಾಸನ’ ಗಟ್ಟಿ ಮಾಡಿಕೊಂಡರಾ ಭವಾನಿ ರೇವಣ್ಣ..?- ಟಿಕೆಟ್ ಫೈನಲ್ ಗೂ ಮುನ್ನವೇ ಅಬ್ಬರದ ಪ್ರಚಾರ!

ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಬೆಳ್ಳಿ ಗದೆ ನೀಡಿ, ಕುಮಾರಸ್ವಾಮಿ ದೇಗುಲದ ಭಾವಚಿತ್ರವನ್ನು ನೀಡಿದ್ರು. ಬಳಿಕ ಮಾತನಾಡಿದ ಅಮಿತ್ ಶಾ ನಿಗದಿಗಿಂತ 2 ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಕ್ಷಮೆ ಕೋರಿದ್ರು. ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಟೀಕಾಪ್ರಹಾರ ಮಾಡಿದ್ರು. ಸಮಾವೇಶದ ಬಳಿಕ ಶಿವಪುರ ಅರಮನೆಯಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ಜಿಲ್ಲೆಗಳ ಶಾಸಕರು, ಪ್ರಮುಖರ ಜೊತೆ ಪಕ್ಷ ಸಂಘಟನೆ, ಪ್ರಚಾರದ ಬಗ್ಗೆ ಶಾ ಸಭೆ ನಡೆಸಿದ್ರು.

ಸಿದ್ದರಾಮಯ್ಯ ಸರ್ಕಾರ ಇದ್ದ ಸಂದರ್ಭದಲ್ಲಿ ಪಿಎಫ್​ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿದ್ದರು. ಆದರೆ ನರೇಂದ್ರ ಮೋದಿ ಅವರು ಈ ಸಂಘಟನೆಯನ್ನೇ ಬ್ಯಾನ್ ಮಾಡಿದ್ದಾರೆ ಎಂದರು. ಇನ್ನು ಕೇಂದ್ರದಲ್ಲಿದ್ದ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಹಲವು ಬಾರಿ ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮೌನವಹಿಸಿತ್ತು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಾಯಿತು. ಆ ಮೂಲಕ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ನಾವು ತಕ್ಕ ಪಾಠ ಕಲಿಸಿದ್ದೇವೆ ಎಂದರು.

ದೇಶದಲ್ಲಿ ಗ್ಯಾಸ್ ಸಂಪರ್ಕ ಇಲ್ಲದ ಮನೆಗಳಿಗೆ ನಾವು ಗ್ಯಾಸ್ ಸಂಪರ್ಕ ಕಲ್ಪಿಸಿದ್ದೇವೆ, ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ವ್ಯಾಕ್ಸಿನ್ ನೀಡುವ ಮೂಲಕ ಕರ್ನಾಟಕದ ಹಾಗೂ ದೇಶವನ್ನು ಕೋವಿಡ್ ಮುಕ್ತ ಮಾಡುವಲ್ಲಿ ಶ್ರಮಿಸಿದ್ದೇವೆ. ಪ್ರತಿ ರೈತರ ಖಾತೆಗೆ 6 ಸಾವಿರ ಹಣ ಹಾಕಲಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್​ 370 ರದ್ದುಗೊಳಿಸಲು ನಮ್ಮ ಸರ್ಕಾರ ಮುಂದಾದಾಗ ವಿರೋಧ ಪಕ್ಷಗಳು ವಿರೋಧಿಸಿದ್ದರು. ಆ ಮೂಲಕ ವಿಪಕ್ಷಗಳು ಕಾಶ್ಮೀರ ಪ್ರತ್ಯೇಕವಾಗಿಡಲು ಯತ್ನಿಸುತ್ತಿದ್ದವು. ಆದರೆ ನಾವು ಅದಕ್ಕೆಲ್ಲ ಬಗ್ಗದೆ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್​ 370 ತೆಗೆದುಹಾಕಿದ್ದೇವೆ. ಜಮ್ಮು ಕಾಶ್ಮೀರ ಭಾರತದ್ದು ಎಂದು ತಮ್ಮ ಸರ್ಕಾರದ ಸಾಧನೆಯನ್ನ ಬಿಚ್ಚಿಟ್ಟರು.

suddiyaana