ಅನುಮತಿಯಿಲ್ಲದೇ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ ಬಳಸುವಂತಿಲ್ಲ- ಹೈಕೋರ್ಟ್ ತೀರ್ಪು

ಅನುಮತಿಯಿಲ್ಲದೇ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ ಬಳಸುವಂತಿಲ್ಲ- ಹೈಕೋರ್ಟ್ ತೀರ್ಪು

ನವದೆಹಲಿ: ಅಮಿತಾಭ್ ಬಚ್ಚನ್ ಅವರ ಹೆಸರು, ಫೋಟೋ ಅಥವಾ ಧ್ವನಿಯನ್ನು ಅವರ ಅನುಮತಿಯಿಲ್ಲದೆ ಬಳಸಬಾರದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಹಲವು ಸಂಸ್ಥೆಗಳು, ವ್ಯಕ್ತಿಗಳು ಅಮಿತಾಭ್ ಅನುಮತಿಯಿಲ್ಲದೇ ಫೋಟೋ, ಧ್ವನಿ, ಹೆಸರನ್ನು ಬಳಸುತ್ತಿದ್ದರು. ಅವುಗಳನ್ನು ನಿರ್ಬಂಧ ಹೇರಬೇಕು ಎಂದು ಹೈಕೋರ್ಟ್ ಮೊರೆಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇನ್ನು ಮುಂದೆ ಅಮಿತಾಭ್ ಬಚ್ಚನ್ ಅವರ ಅನುಮತಿ ಇಲ್ಲದೇ ಅವರ ಯಾವುದೇ ಫೋಟೋ, ಧ್ವನಿ ಹಾಗೂ ಹೆಸರನ್ನು ಬಳಸಬಾರದು ಎಂದು ಆದೇಶಿಸಿದೆ. ಅಲ್ಲದೇ ಈಗಾಗಲೇ ಅನುಮತಿ ಇಲ್ಲದೇ ಬಳಸಿರುವ ಫೋಟೋ, ಧ್ವನಿಗಳನ್ನು ತೆಗೆದು ಹಾಕಿ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸೂಚಿಸಿದೆ.

ಇದನ್ನೂ ಓದಿ: ಕೇಶಕ್ಕೆ ಬಣ್ಣ ಬಳಿಬೇಡಿ, ತಲೆ ಬೋಳಿಸ್ಕೊಳಿ – ಏರ್ ಇಂಡಿಯಾ ಹೊಸ ರೂಲ್ಸ್

ಕೆಲವರು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರಚಾರ  ಮಾಡುವ ಸಲುವಾಗಿ ಅಮಿತಾಭ್ ಅವರ ಪೋಟೋ, ಧ್ವನಿ, ಹೆಸರನ್ನು ಅನುಮತಿ ಇಲ್ಲದೇ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅವರು ನೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

“ಕೆಲವರು ಟೀ ಶರ್ಟ್‌ನಲ್ಲಿ ಅಮಿತಾಭ್ ಬಚ್ಚನ್ ಫೋಟೋ ಹಾಕುತ್ತಿದ್ದಾರೆ. ಇನ್ನೂ ಕೆಲವರು ಪೋಸ್ಟರ್ ಮಾರಾಟ ಮಾಡುತ್ತಾರೆ, ಅಮಿತಾಭ್ ಬಚ್ಚನ್.ಕಾಂ ಎಂಬ ಡೊಮೇನ್ ಹೆಸರನ್ನೂ ನೋಂದಣಿ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅಮಿತಾಭ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು” ಎಂದು ಅಮಿತಾಭ್ ಬಚ್ಚನ್ ಪರ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.

 

suddiyaana