ಟ್ರಾಫಿಕ್ ಮಧ್ಯೆ ಸಿಲುಕಿದ ಅಮಿತಾಭ್ ಬಚ್ಚನ್ – ಶೂಟಿಂಗ್ ಸ್ಪಾಟ್ ಗೆ ತೆರಳಲು ಮಾಡಿದ್ದೇನು ಗೊತ್ತಾ?

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸಮಯ ಪಾಲನೆಗೆ ಹೆಸರುವಾಸಿ. ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಪಾಟ್ ಗೆ ತಲುಪುವ ಅಮಿತಾಭ್‌ಗೆ ಟ್ರಾಫಿಕ್ ಕಿರಿಕಿರಿ ಶುರುವಾಗಿದೆ. ಹೀಗಾಗಿ ಬಚ್ಚನ್ ಅವರು ಕಾರಿನಿಂದ ಇಳಿದು ಅಭಿಮಾನಿಯೊಬ್ಬರ ಬೈಕ್ ಏರಿ ಶೂಟಿಂಗ್ ಸ್ಪಾಟ್ ತೆರಳಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಭ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಅಭಿಮಾನಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಇದನ್ನೂ ಓದಿ: ‘ಆದಿಪುರುಷ್’ ಚಿತ್ರಕ್ಕೆ ಕಾನೂನು ಸಂಕಷ್ಟ – ಚಿತ್ರ ಬಿಡುಗಡೆಯಾಗುವ ಮುನ್ನವೇ ದೂರು ದಾಖಲು!
ಅಮಿತಾಭ್ ಅವರು ಶೂಟಿಂಗ್‌ಗೆ ತೆರಳುತ್ತಿದ್ದ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ. ಸರಿಯಾದ ಸಮಯಕ್ಕೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು. ಇದೇ ಘಳಿಗೆಯಲ್ಲಿ ಅಭಿಮಾನಿಯೊಬ್ಬರು ಬೈಕ್ ನಲ್ಲಿ ಅಮಿತಾಭ್ ಅವರನ್ನು ಕೂರಿಸಿಕೊಂಡು ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತಲುಪಿಸಿದ್ದಾರೆ. ಅಭಿಮಾನಿಯ ಬೈಕ್ ಹಿಂಬದಿಯಲ್ಲಿ ಕೂತು ಅಮಿತಾಭ್ ಸವಾರಿ ಮಾಡಿದ್ದಾರೆ. ಅಭಿಮಾನಿಯ ಈ ಸೇವೆಯನ್ನು ಅಮಿತಾಭ್ ಮರೆಯದೇ ಅವರ ಸೇವಾ ಋಣಕ್ಕೆ ಪೋಸ್ಟ್ ವೊಂದನ್ನು ಹಾಕಿ ಬಿಗ್ ಬಿ ಥ್ಯಾಂಕ್ಯೂ ಹೇಳಿದ್ದಾರೆ.
“ಸವಾರಿಗಾಗಿ ಧನ್ಯವಾದಗಳು ಗೆಳಯ ನೀವು ನನಗೆ ಯಾರೆಂದು ಗೊತ್ತಿಲ್ಲ. ಆದರೆ ನೀವು ನನ್ನನ್ನು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಕರೆದೊಯ್ದಿದ್ದೀರಿ ಥ್ಯಾಂಕ್ಯೂ” ಬರೆದಿದ್ದಾರೆ.
ಸದ್ಯ ಅಭಿಮಾನಿಯೊಂದಿಗೆ ಬೈಕ್ ಸವಾರಿ ಮಾಡಿದ ಅಮಿತಾಭ್ ಅವರ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ಅಮಿತಾಭ್ ಬಚ್ಚನ್ ಕಪ್ಪು ಪ್ಯಾಂಟ್, ಜಾಕೆಟ್ ಹಾಗೂ ಕನ್ನಡಕ ಧರಿಸಿದ್ದರು. ಬಿಗ್ ಬಿಯ ಸರಳತೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಅಮಿತಾಭ್ ಬಿಗ್ ಬಜೆಟ್ ʼಪ್ರಾಜೆಕ್ಟ್ ಕೆʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
View this post on Instagram