ಇಂಡೋನೇಷ್ಯಾ ಸಮುದ್ರದಲ್ಲಿ ಸಬ್ ಮರಿನ್ ನಿಯೋಜನೆ – ಚೀನಾ ಮೇಲೆ ಭಾರತದ ಹದ್ದಿನಕಣ್ಣು!

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆಯ ಸಬ್ಮರೀನನ್ನ ಇಂಡೋನೇಷ್ಯಾ ಸಮುದ್ರ ಭಾಗದಲ್ಲಿ ನಿಯೋಜಿಸಲಾಗಿದೆ. ಕುತಂತ್ರಿ ಚೀನಾವನ್ನ ಗಮನದಲ್ಲಿಟ್ಟುಕೊಂಡು, ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಕಣ್ಣಿಡಲು ಸಿಂಧುಕೇಸರಿ ಹೆಸರಿನ ಸಬ್ಮರೀನನ್ನ ಇಂಡೋನೇಷ್ಯಾದಲ್ಲಿ ನಿಯೋಜನೆ ಮಾಡಲಾಗಿದೆ. ಬರೋಬ್ಬರಿ 3 ಸಾವಿರ ಟನ್ ತೂಕದ ಸಬ್ಮರೀನ್ ಇದಾಗಿದ್ದು, ದಕ್ಷಿಣ ಚೀನಾ ಸಮುದ್ರಕ್ಕೆ ಮುಖ ಮಾಡಿ ಇಂಡೋನೇಷ್ಯಾದಲ್ಲಿ ಬೀಡುಬಿಟ್ಟಿದೆ. ಇದುವರೆಗೆ ಭಾರತದ ಯುದ್ಧ ಹಡಗುಗಳನ್ನ ಇಂಡೋನೇಷ್ಯಾ ಸಮುದ್ರ ಭಾಗದಲ್ಲಿ ನಿಯೋಜನೆ ಮಾಡಲಾಗುತ್ತಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಸುರಕ್ಷತಾ ದೃಷ್ಟಿಯಿಂದ ಸಬ್ಮರೀನ್ನನ್ನ ನಿಯೋಜಿಸಲಾಗಿದೆ.
Pererat Hubungan Bilateral, TNI AL Sambut Hangat Kedatangan Kapal Selam India INS Shindukesari Di Jakartahttps://t.co/LekzCmXZ6H#jalesvevajayamahe #tnial #muhammadali #laksamanamuhammadali #indonesiannavy #tnialrumahpancasila #tnialrumahtoleransi #tnialrumahnusantara pic.twitter.com/MRJsOFsUcD
— TNI Angkatan Laut (@_TNIAL_) February 22, 2023

ನೋಡಿರಿ

