ಬ್ರಿಟನ್​ನಲ್ಲೂ ಅಮೆರಿಕನ್​​ XL​ ಬುಲ್ಲಿ ಜಾತಿಯ ಪಿಟ್​ಬುಲ್​ ಶ್ವಾನ ಬ್ಯಾನ್​! – ಕಾರಣವೇನು ಗೊತ್ತಾ?

ಬ್ರಿಟನ್​ನಲ್ಲೂ ಅಮೆರಿಕನ್​​ XL​ ಬುಲ್ಲಿ ಜಾತಿಯ ಪಿಟ್​ಬುಲ್​ ಶ್ವಾನ ಬ್ಯಾನ್​! – ಕಾರಣವೇನು ಗೊತ್ತಾ?

ಪಿಟ್‌ಬುಲ್‌ ಜಾತಿಯ ನಾಯಿಗಳಿಂದ ಅನೇಕರ ಮೇಲೆ ದಾಳಿ ನಡೆಯುತ್ತಲೇ ಇದೆ. ಈಗಾಗಲೇ ಕೆಲವರು ಈ ಜಾತಿಯ ನಾಯಿ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಶ್ವಾನಗಳಿಂದ ನಡೆದ ಸರಣಿ ದಾಳಿ ಸಾಕಷ್ಟು ವರದಿಯಾದ ಬೆನ್ನಲ್ಲೇ ಯುಕೆ ಪ್ರಧಾನಿ ರಿಷಿಸುನಕ್‌ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಮೆರಿಕನ್​​ ಎಕ್ಸ್​ಎಲ್​ ಬುಲ್ಲಿ ಜಾತಿಯ ಪಿಟ್​ಬುಲ್​ ಶ್ವಾನವನ್ನು ಬ್ರಿಟನ್​ನಲ್ಲಿ ಬ್ಯಾನ್​ ಮಾಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಿಷಿ ಸುನಕ್, ನಮ್ಮ ಸಮುದಾಯಗಳಿಗೆ ಅಮೆರಿಕನ್​ ಎಕ್ಸ್​ಎಲ್​ ಬುಲ್ಲಿ ಶ್ವಾನಗಳು ಅಪಾಯಕಾರಿಯಾಗಿವೆ. ಅದರಲ್ಲೂ ಮಕ್ಕಳಿಗೆ ಇದರ ಬೆದರಿಕೆ ಹೆಚ್ಚಾಗಿದೆ. ಇದು ಕೆಟ್ಟ ತರಬೇತಿ ಪಡೆದ ನಾಯಿಗಳ ಬಗ್ಗೆ ಅಲ್ಲ. ಇದು ಅದರ ನಡವಳಿಕೆಯ ಕುರಿತಾಗಿದೆ. ಹೀಗಾಗಿ ಈ ಜಾತಿಯ ಶ್ವಾನಗಳ ಸಾಕಾಣಿಕೆ ಮುಂದುವರಿಸಲು ಸಾಧ್ಯವಿಲ್ಲ ಎಂದು ರಿಷಿ ಸುನಕ್‌ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚಿನ ನಾಯಿ ದಾಳಿಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಾಯಿ ಸಾಕಾಣಿಕೆಗೂ ಬಂತು ಹೊಸ ರೂಲ್ಸ್‌! –  ಹೊಸ ನಿಯಮಗಳೇನು?

ಈ ದಾಳಿಗಳನ್ನು ತಡೆಯುವ ಮಾರ್ಗಗಳ ಕುರಿತು ತಮ್ಮ ಸರ್ಕಾರವು ತುರ್ತಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಿಷಿ ಸುನಕ್​ ಅವರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಇದು ಪ್ರಸ್ತುತ ಕಾನೂನಿನಲ್ಲಿ ವ್ಯಾಖ್ಯಾನಿಸಲಾದ ತಳಿಯಲ್ಲ. ನಾವು ಅಪಾಯಕಾರಿ ನಾಯಿಗಳ ಕಾಯಿದೆಯಡಿಯಲ್ಲಿ ಈ ತಳಿಯನ್ನು ನಿಷೇಧಿಸುತ್ತೇವೆ. ಅಲ್ಲದೆ, ಈ ಕುರಿತು ಹೊಸ ಕಾನೂನುಗಳು ಜಾರಿಯಾಗಲಿವೆ ಎಂದು ಹೇಳಿದ್ದಾರೆ.

ಕಳೆದ ವಾರಾಂತ್ಯದಲ್ಲಿ, ಬರ್ಮಿಂಗ್​ಹ್ಯಾಮ್​ನಲ್ಲಿ ಬುಲ್ಲಿ ನಾಯಿಯ ದಾಳಿಯಿಂದ ಹುಡುಗಿಯೊಬ್ಬಳು ಗಾಯಗೊಂಡಿದ್ದಳು. ಅಲ್ಲದೆ, ಆಕೆಯನ್ನು ರಕ್ಷಿಸಲು ಬಂದ ಇನ್ನಿಬ್ಬರು ವ್ಯಕ್ತಿಗಳ ಮೇಲೂ ನಾಯಿ ದಾಳಿ ಮಾಡಿತ್ತು. ಸರಣಿ ದಾಳಿಗಳು ವರದಿಯಾಗುತ್ತಲೇ ಇದ್ದು, ಮುಂದಿನ ಅಪಾಯವನ್ನು ತಡೆಗಟ್ಟಲು ರಿಷಿ ಸುನಕ್​ ಈ ಕ್ರಮ ತೆಗೆದುಕೊಂಡಿದ್ದಾರೆ.

Shwetha M