ರಾಕಿ ಭಾಯ್ ಟಾಕ್ಸಿಕ್ ಸೆಟ್ಗೆ ಪೆರ್ರಿ ಎಂಟ್ರಿ! – 45 ದಿನ ಭರ್ಜರಿ ಆ್ಯಕ್ಷನ್ ಶೂಟ್ಗೆ ರೆಡಿಯಾದ ಯಶ್

ಭಾರತ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಯಶ್ ನಟಿಸಿ ಸಹ ನಿರ್ಮಾಣ ಮಾಡುತ್ತಿರುವ ಟಾಕ್ಸಿಕ್ ಚಿತ್ರ ಕೂಡ ಒಂದು. ಟಾಕ್ಸಿಕ್ ಸಿನಿಮಾ ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಬದಲಿಗೆ ಪ್ಯಾನ್ ವರ್ಲ್ಡ್ ಸಿನಿಮಾ ಆಗಿದೆ. ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಭಾರತದ ಕೆಲ ಸ್ಟಾರ್ ನಟ-ನಟಿಯರ ಜೊತೆಗೆ ಹಾಲಿವುಡ್‌ನ ಕೆಲವು ನುರಿತ ತಂತ್ರಜ್ಞರು ಸಹ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ. ಯಶ್ ನಟಿಸಿ ನಿರ್ಮಿಸುತ್ತಿರುವ ಗ್ಲೋಬಲ್ ಚಿತ್ರ ಟಾಕ್ಸಿಕ್ ತಂಡ ಸಾಹಸ ಚಿತ್ರೀಕರಣವನ್ನು ಪ್ರಾರಂಭಿಸಿದೆ. ವಿಶೇಷ ಅಂದ್ರೆ ವಿಶ್ವಶ್ರೇಷ್ಠ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಈ ಚಿತ್ರಕ್ಕಾಗಿ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ.
ಇದನ್ನೂ ಓದಿ : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಗುಡ್‌ನ್ಯೂಸ್ – ತಾಯಿಯಾಗುತ್ತಿರುವ ಬಗ್ಗೆ ಖುಷಿ ಹಂಚಿಕೊಂಡ ಸುಂದರಿ
ಮುಂಬೈನಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಏಕಕಾಲದಲ್ಲಿ ತಯಾರಾಗ್ತಿರುವ ಚಿತ್ರವಿದು. ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಜೆಜೆ ಪೆರ್ರಿ ವರ್ಕಿಂಗ್‌ಸ್ಕಿಲ್ ರಿವೀಲ್ ಆಗಿದೆ. ಲೆಜೆಂಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಕೆಲಸ ಮಾಡ್ತಿರೋದೇ ಇಲ್ಲಿನ ವಿಶೇಷ.
ಭಾರತೀಯರನ್ನೇ ಬಳಸಿಕೊಂಡು ಹಿಂದಿನ ಸ್ಟಂಟ್ಸ್‌ಗಳಿಗಿಂತ ವಿಭಿನ್ನ ಪ್ರಯೋಗ ಮಾಡಲಿದ್ದಾರಂತೆ ಜೆಜೆ ಪೆರ್ರಿ. ಭರ್ತಿ 45 ದಿನಗಳ ಕಾಲ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ನೂತನ ದಾಖಲೆ ಬರೆಯಲಿದೆ ಟಾಕ್ಸಿಕ್. ಹಾಲಿವುಡ್‌ಗೆ ಸೆಡ್ಡು ಹೊಡೆಯುವಂತಹ ಸ್ಟಂಟ್ಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ ರಾಕಿಂಗ್ ಸ್ಟಾರ್ ಹಾಗೂ ಯಶ್ ಗೀತು ಮೋಹನ್ ದಾಸ್ ತಂಡ. ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಹಾಗೂ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಟಾಕ್ಸಿಕ್.

ನೋಡಿರಿ

