ಅಯೋಧ್ಯೆಗೆ ಬರುವ ಭಕ್ತರಿಗೆ ತಿಲಕ ಇಡುವುದೇ ಈತನ ಕೆಲಸ – ಪುಟ್ಟ ಬಾಲಕನ ದಿನದ ಆದಾಯ ಎಷ್ಟು ಗೊತ್ತಾ?

ಅಯೋಧ್ಯೆಗೆ ಬರುವ ಭಕ್ತರಿಗೆ ತಿಲಕ ಇಡುವುದೇ ಈತನ ಕೆಲಸ – ಪುಟ್ಟ ಬಾಲಕನ ದಿನದ ಆದಾಯ ಎಷ್ಟು ಗೊತ್ತಾ?

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೊಂಡು ಹಲವು ತಿಂಗಳುಗಳೇ ಕಳೆದಿದೆ. ಬಾಲ ರಾಮನ ಪ್ರತಿಷ್ಠಾಪನೆಯಾದಾಗಿನಿಂದ ಅಲ್ಲಿನ ನಿವಾಸಿಗಳಿಗೆ ಭಾಗ್ಯದ ಬಾಗಿಲು ತೆರೆದಿದೆ. ವ್ಯಾಪಾರಿಗಳು, ಹೋಟೆಲ್‌ ಮಾಲೀಕರ ಆದಾಯ ಹತ್ತು ಪಟ್ಟು ಹೆಚ್ಚಾಗಿದೆ. ಇದೀಗ ಇಲ್ಲೊಬ್ಬ ಬಾಲಕ ಒಂದು ದಿನದಲ್ಲಿ ಗಳಿಸುತ್ತಿರುವ ಆದಾಯ ಕೇಳಿದ್ರೆ ಶಾಕ್‌ ಆಗೋದು ಪಕ್ಕಾ…

ಹೌದು, ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ಬಳಿಕ ಲಕ್ಷಾಂತರ ಮಂದಿ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ರಾಮನಗರಿಗೆ ಬರುವ ಭಕ್ತರನ್ನೇ ಇಲ್ಲೊಬ್ಬ ಬಾಲಕ ಟಾರ್ಗೆಟ್‌ ಮಾಡಿಕೊಂಡಿದ್ದಾನೆ. ರಾಮನ ಭಕ್ತರಿಗೆ ತಿಲಕವಿಟ್ಟು ಒಳ್ಳೆ ಸಂಪಾದನೆ ಮಾಡುತ್ತಿದ್ದಾನೆ. ಈ ವಿಡಿಯೋ ಭಾರಿ ವೈರಲ್‌ ಆಗಿದ್ದು, ಅನೇಕರ ಗಮನ ಸೆಳೆದಿದೆ.

ಇದನ್ನೂ ಓದಿ: ಎಮ್ಮೆಗೂ ಬಂತು ಕಾಲ! – ಎಸಿಯಲ್ಲೇ ಜೀವನ.. ಅಬ್ಬಬ್ಬಾ.. ಎಮ್ಮೆಗಳ ಲೈಫ್ ಎಷ್ಟೊಂದು ಬಿಂದಾಸ್?

ಕ್ರಿಪ್ಟೋ ಶಿಕ್ಷಣತಜ್ಞ ಅಮಿತ್ ಸಿಂಗ್ ಅವರು ಆ ಹುಡುಗನ ವೀಡಿಯೊವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ವಾಸಿಸುವ ಬಾಲ ಗೋಲು, ದೇಶದ ಇತರೆ ಪ್ರೊಫೆಷನಲ್​ಗಳಿಗಿಂತ ಅಧಿಕ ಸಂಪಾದನೆ ಮಾಡುತ್ತಿದ್ದಾನೆ. ಅದಲ್ಲದೆ, ಹುಡುಗನ ಆತ್ಮವಿಶ್ವಾಸ ನೋಡಿದರೆ ಆತ ಉತ್ಸಾಹದ ಚಿಲುಮೆಯಾಗಿದ್ದಾನೆ ಎಂಬುದು ದೃಢಪಡುತ್ತದೆ. ಬಾಲ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಿರುವ ಅಮಿತ್ ಅವರು ಅಲ್ಲಿನ ರಸ್ತೆ ಬದಿಯಲ್ಲಿ ಭಕ್ತರ ಹಣೆಗೆ ಶ್ರೀಗಂಧದ ತಿಲಕದ ಬೊಟ್ಟು ಹಾಕುವ ಗೋಲು ಬಾಲಕ ಕಂಡಿದ್ದಾನೆ. ಈ ವೇಳೆ ಅಮಿತ್ ಆ ಬಾಲಕನ ದಿನನಿತ್ಯದ ಗಳಿಕೆಯನ್ನು ತಿಳಿದುಕೊಳ್ಳಲು ಯತ್ನಿಸಿದ್ದಾರೆ. ಅದಕ್ಕೆ ಉತ್ತರವಾಗಿ ಬಂದ ಆ ಮಗುವಿನ ಉತ್ತರ ಕೇಳಿ ಹುಬ್ಬೇರಿಸಿದ್ದಾರೆ.

ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಣೆಯ ಮೇಲೆ ಬೊಟ್ಟು ಇಡುತ್ತಾ ದುಡಿಯುತ್ತಾನಂತೆ ಆ ಬಾಲಕ. ಇದರಿಂದಲೇ ದಿನಕ್ಕೆ ಸುಮಾರು 1,500 ರೂ. ಗಳಿಸುತ್ತಾನಂತೆ. ಇದನ್ನು ಕೇಳಿದ ಅಮಿತ್ ಶಾಕ್ ಆಗಿದ್ದಾರೆ. ಗೋಲು ನೀನು ಯಾವುದೇ ವೃತ್ತಿಪರ ವ್ಯಕ್ತಿಯಂತೆ ಒಳ್ಳೆಯ ಗಳಿಕೆ ಸಂಪಾದಿಸುತ್ತಿದ್ದೀಯಪ್ಪಾ ಎಂದು ಪ್ರತಿಕ್ರಿಯಿಸಿದರಂತೆ. ಅಮಿತ್ ತಮ್ಮ ಪೋಸ್ಟ್ ನಲ್ಲಿ ಇದನ್ನೆಲ್ಲಾ ವಿಡಿಯೋ ಸ್ಟೋರಿ ಮಾಡಿ ಹಾಕಿಕೊಂಡಿದ್ದಾರೆ. ಗೋಲು ಬಾಲಕನಲ್ಲಿ ಬುದ್ದಿವಂತಿಕೆ ಇದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಂತೆ, ಐಐಎಂ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರಂತೆ ಈತನಲ್ಲೂ ಅದೊಂದು ರೀತಿಯ ಪರಿಣಿತಿ ಇದೆ. ವಾಸ್ತವವಾಗಿ, ಭಾರತದ ಬೀದಿ ಬೀದಿಗಳಲ್ಲಿ ಅಸಂಖ್ಯಾತ ನುರಿತ ಜನರು ‘ಗೋಲು’ ರೂಪದಲ್ಲಿ ತಿರುಗುತ್ತಿದ್ದಾರೆ. ಅವರಲ್ಲಿ ಅದಮ್ಯ ಧೈರ್ಯ ಮತ್ತು ನಂಬಿಕೆ ಇದೆ. ಆದರೂ ಗೋಲು ಅಂತಹ ಬಾಲಕರು ಸೂಕ್ತ ಶಿಕ್ಷಣ, ಸಮರ್ಥ ಮಾರ್ಗದರ್ಶನ ಪಡೆದರೆ ಏನು ಬೇಕಾದರೂ ಮಾಡಬಲ್ಲರು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Shwetha M