ಅಮೆಜಾನ್ ಕಾಡಲ್ಲಿ ವಿಮಾನ ಪತನ – 2 ವಾರಗಳ ಬಳಿಕ 11 ತಿಂಗಳ ಮಗು ಜೊತೆ ನಾಲ್ವರು ಮಕ್ಕಳು ಪತ್ತೆ!

ಅಮೆಜಾನ್ ಕಾಡಲ್ಲಿ ವಿಮಾನ ಪತನ – 2 ವಾರಗಳ ಬಳಿಕ 11 ತಿಂಗಳ ಮಗು ಜೊತೆ ನಾಲ್ವರು ಮಕ್ಕಳು ಪತ್ತೆ!

ಕೊಲಂಬಿಯಾದಲ್ಲಿರುವ ದಟ್ಟ ಅಮೆಜಾನ್ ಕಾಡಿನಲ್ಲಿ ನಿಜಕ್ಕೂ ಪವಾಡವೇ ನಡೆದಿದೆ. ಮೇ 1ರಂದು ಅಮೆಜಾನ್ ಕಾಡಿನ ಮೇಲೆ ಹಾದು ಹೋಗುತ್ತಿದ್ದ ವಿಮಾನ ಪತನಗೊಂಡಿತ್ತು. ಆದ್ರೆ ಪತನಗೊಂಡ ವಿಮಾನದಲ್ಲಿದ್ದ 11 ತಿಂಗಳ ಮಗು ಸೇರಿದಂತೆ ನಾಲ್ವರು ಮಕ್ಕಳು ಬದುಕುಳಿದಿದ್ದಾರೆ. ಸುಮಾರು 100 ಮಂದಿ ಸೈನಿಕರು ಮತ್ತು ಶ್ವಾನ ಪಡೆಯೊಂದಿಗೆ ಅಮೆಜಾನ್ ಕಾಡಿನಲ್ಲಿ ಹುಡುಕಾಟ ನಡೆಸಿ ಎರಡು ವಾರಗಳ ಬಳಿಕ ಐದು ಮಂದಿಯೂ ಜೀವಂತವಾಗಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ : ಪುತ್ತೂರಲ್ಲಿ ಹಿಂದು Vs ಬಿಜೆಪಿ – ಆಸ್ಪತ್ರೆಗೆ ಬಂದ ಯತ್ನಾಳ್​ರನ್ನ ಒಳಬಿಡದ ಪುತ್ತಿಲ ಬೆಂಬಲಿಗರು!

ಮಿಲಿಟರಿ ಸತತ ಹುಡುಕಾಟ ನಡೆಸುತ್ತಿತ್ತು, ಎರಡು ವಾರಗಳ ಬಳಿಕ ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಮೇ 1 ರಂದು ವಿಮಾನ ಅಪಘಾತಕ್ಕೀಡಾಗಿತ್ತು, 100ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿತ್ತು. 11 ತಿಂಗಳ ಮಗು, 13 ವರ್ಷ, 9 ಹಾಗೂ 4 ವರ್ಷದ ಮಕ್ಕಳಿದ್ದರು. ಅಪಘಾತದ ನಂತರ ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನ ಮೂಲಕ ಅಲೆದಾಡುತ್ತಿದ್ದರು. ಅಲ್ಲಿರುವ ಕೋಲುಗಳನ್ನು ಬಳಸಿ ಮನೆಯ ರೀತಿ ನಿರ್ಮಿಸಿಕೊಂಡಿದ್ದರು ಅದನ್ನು ಕಂಡ ಬಳಿಕ ಯಾರೋ ಬದುಕುಳಿದಿದ್ದಾರೆ ಎನ್ನುವ ನಂಬಿಕೆ ಬಂದಿತ್ತು. ಮಗುವಿನ ಹಾಲಿನ ಬಾಟಲಿ, ಅರ್ಧ ತಿಂದಿದ್ದ ಹಣ್ಣಿನ ತುಂಡು ಪತ್ತೆಯಾಗಿತ್ತು, ಪೈಲಟ್​ ಹಾಗೂ ಇಬ್ಬರು ವಯಸ್ಕರ ಶವವನ್ನು ಸೈನಿಕರು ಪತ್ತೆ ಮಾಡಿದ್ದರು.

ವಿಮಾನ ಪತನವಾದ ಬಳಿಕ 11 ತಿಂಗಳ ಮಗುವನ್ನ ಹೊತ್ತುಕೊಂಡು ನಾಲ್ವರು ಮಕ್ಕಳು ಕಾಡಿನಲ್ಲಿ ಅಲೆಯುತ್ತಿದ್ರಂತೆ. ಆದ್ರೆ ಈ ಮಕ್ಕಳು ಅಂಥಾ ಕಾಡಿನಲ್ಲಿ ಎರಡು ವಾರಗಳ ಕಾಲ ಹೇಗೆ ಬದುಕಿಳಿದ್ರು? ತಿನ್ನೋಕೆ ಏನು ಮಾಡಿದ್ರು? ಪತನಗೊಂಡ ವಿಮಾನದಿಂದ ಪಾರಾಗಿದ್ದು ಹೇಗೆ ಅನ್ನೋ ರೋಚಕ ಸಂಗತಿ ಇನ್ನಷ್ಟೇ ಬಯಲಾಗಬೇಕಿದೆ. ಅಮೆಜಾನ್ ಜಗತ್ತಿನಲ್ಲೇ ಅತ್ಯಂತ ನಿಗೂಢ ಮತ್ತು ಅತೀ ದೊಡ್ಡ ಕಾಡಾಗಿದೆ. ಇಲ್ಲಿರುವ ಬಹುತೇಕ ಪ್ರಾಣಿಗಳು ಇನ್ನೂ ಕೂಡ ಮಾನವನ ಕಣ್ಣಿಗೆ ಬಿದ್ದಿಲ್ಲ.

suddiyaana